ಸಾಮಾನ್ಯವಾಗಿ ಎಲ್ಲರ ಅಡುಗೆಮನೆಯಲ್ಲಿ ಕಾಣಸಿಗುವ ಕಾಳು ಮೆಣಸು(Peppercorns), ಕೇವಲ ಆಹಾರದ (Peppercorns the king of spices) ರುಚಿಯನ್ನು ಹೆಚ್ಚಿಸುವುದಲ್ಲದೆ ಅನೇಕ ಆರೋಗ್ಯ ಲಾಭಗಳನ್ನು ನೀಡುವ ಪ್ರಕೃತಿಯ ಉಡುಗೊರೆಯಾಗಿದೆ.
ಆಯುರ್ವೇದದಲ್ಲಿ ಇದನ್ನು ಅನೇಕ ಕಾಯಿಲೆಗಳ ಚಿಕಿತ್ಸೆಗಾಗಿ(treatment) ಹಲವು ಶತಮಾನಗಳಿಂದ ಬಳಸಲಾಗುತ್ತಿದೆ. ಕಾಳು ಮೆಣಸಿನಲ್ಲಿ ವಿಟಮಿನ್ C, ವಿಟಮಿನ್ K, ಫೈಬರ್, ಪೊಟ್ಯಾಸಿಯಮ್,
ಕಬ್ಬಿಣ ಮತ್ತು ಮೆಗ್ನೀಸಿಯಂ ಮುಂತಾದ ಪೋಷಕಾಂಶಗಳು ಸಮೃದ್ಧವಾಗಿವೆ. ಹಾಗಾಗಿ ಇದನ್ನು ಮಸಾಲೆಗಳ ರಾಜ ಎಂದೇ ಕರೆಯಲಾಗುತ್ತದೆ.
ಜೀರ್ಣಕ್ರಿಯೆ ಸುಧಾರಣೆ
ಕಾಳು ಮೆಣಸು ಜೀರ್ಣಕ್ರಿಯೆ(digestion) ಚುರುಕುಗೊಳಿಸಲು ಸಹಾಯಕ. ಇದರಲ್ಲಿ ಇರುವ ‘ಪೈಪರಿನ್’(Piperine) ಎಂಬ ಸಂಯುಕ್ತವು ಜೀರ್ಣಕಾರಿ ಎನ್ಜೈಮ್ಸ್ ಉತ್ಪಾದನೆಯನ್ನು ಉತ್ತೇಜಿಸಿ,
ಆಹಾರವನ್ನು ವೇಗವಾಗಿ ಜೀರ್ಣಿಸಿಕೊಳ್ಳಲು ನೆರವಾಗುತ್ತದೆ. ಇದು ಕರುಳಿನ ಚಟುವಟಿಕೆಯನ್ನು ಸುಧಾರಿಸುವುದಲ್ಲದೆ, ದೇಹ ಪೋಷಕಾಂಶಗಳನ್ನು ಉತ್ತಮವಾಗಿ ಹೀರಿಕೊಳ್ಳುವಂತೆ ಮಾಡುತ್ತದೆ.
ಎನ್‌ಸಿಬಿಐ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನಗಳ ಪ್ರಕಾರ, ಪೈಪರಿನ್ ಮೆದುಳಿನ ಕಾರ್ಯಕ್ಷಮತೆಯನ್ನೂ ಹೆಚ್ಚಿಸುತ್ತದೆ.
ರೋಗನಿರೋಧಕ ಶಕ್ತಿ ಹೆಚ್ಚಳ
ಕಾಳು ಮೆಣಸಿನಲ್ಲಿ ಉತ್ಕರ್ಷಣ ನಿರೋಧಕ(Antioxidant), ಬ್ಯಾಕ್ಟೀರಿಯಾ ವಿರೋಧಿ ಹಾಗೂ ವೈರಸ್ ವಿರೋಧಿ ಗುಣಗಳಿವೆ. ಇವು ದೇಹವನ್ನು ಸೋಂಕುಗಳಿಂದ ಕಾಪಾಡಿ, ರೋಗನಿರೋಧಕ ಶಕ್ತಿಯನ್ನು(Immunity) ಬಲಪಡಿಸುತ್ತವೆ.
ಶೀತ, ಕೆಮ್ಮು, ಗಂಟಲು ನೋವು, ಬ್ರಾಂಕೈಟಿಸ್ ಹಾಗೂ ಆಸ್ತಮಾ ಸಮಸ್ಯೆಗಳಲ್ಲಿ ಸಹಾಯವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

ಉಸಿರಾಟದ ಸಮಸ್ಯೆ ನಿವಾರಣೆ
ಚಳಿಗಾಲದಲ್ಲಿ ಶೀತ-ಕೆಮ್ಮು, ಜ್ವರ ತೊಂದರೆ ಸಾಮಾನ್ಯ. ಕಾಳು ಮೆಣಸು ಮತ್ತು ಅರಿಶಿನವನ್ನು ಹಾಲಿನಲ್ಲಿ ಬೇಯಿಸಿ ರಾತ್ರಿ ಮಲಗುವ ಮುನ್ನ ಕುಡಿಯುವುದರಿಂದ ಉಸಿರಾಟ ಸಂಬಂಧಿತ ಸಮಸ್ಯೆಗಳು(Respiratory problems) ತಡೆಯಬಹುದು.
ಸಂಶೋಧನೆಗಳು ಕಾಳು ಮೆಣಸು ಜ್ವರ, ಜಠರ-ಕರುಳು ಹಾಗೂ ಮೂತ್ರಪಿಂಡದ ಸೋಂಕುಗಳನ್ನು ತಡೆಗಟ್ಟಲು ಸಹಕಾರಿ ಎಂದು ಸೂಚಿಸುತ್ತವೆ.
ತೂಕ ಇಳಿಕೆಗೆ ನೆರವು
ಕಾಳು ಮೆಣಸು ದೇಹದ ಚಯಾಪಚಯವನ್ನು ಹೆಚ್ಚಿಸಿ ಕೊಬ್ಬಿನ ದಹನವನ್ನು ವೇಗಗೊಳಿಸುತ್ತದೆ. ಪೈಪರಿನ್ ಗುಣಲಕ್ಷಣಗಳು ಹೊಸ ಕೊಬ್ಬಿನ ಕೋಶಗಳ ರಚನೆಯನ್ನು ತಡೆದು ಬೊಜ್ಜನ್ನು ಕಡಿಮೆ ಮಾಡುತ್ತವೆ.
ನಿಯಮಿತವಾಗಿ ಆಹಾರದಲ್ಲಿ ಸೇರಿಸಿದರೆ ತೂಕ ನಿಯಂತ್ರಣಕ್ಕೆ(Weight control) ಸಹಕಾರಿ.
ಉತ್ಕರ್ಷಣ ನಿರೋಧಕ ಲಾಭಗಳು
ಇದರಲ್ಲಿ ಇರುವ ಆ್ಯಂಟಿಆಕ್ಸಿಡೆಂಟ್ಸ್ ದೇಹದ ಜೀವಕೋಶಗಳನ್ನು ಹಾನಿಕಾರಕ ಫ್ರೀ ರಾಡಿಕಲ್ಸ್‌ನಿಂದ ರಕ್ಷಿಸುತ್ತವೆ. ಇವು ಗೆಡ್ಡೆ ಕೋಶಗಳ ಬೆಳವಣಿಗೆಯನ್ನು ನಿಧಾನಗೊಳಿಸಿ,
ಹೃದ್ರೋಗ ಮತ್ತು ಕೆಲವು ವಿಧದ ಕ್ಯಾನ್ಸರ್(Cancer) ಅಪಾಯವನ್ನು ಕಡಿಮೆ ಮಾಡುತ್ತವೆ.
ಮಧುಮೇಹ ನಿಯಂತ್ರಣ
ಕಾಳು ಮೆಣಸು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು(Diabetes control) ನಿಯಂತ್ರಿಸಲು ಸಹಕಾರಿ. ಪೈಪರಿನ್ ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುವುದರಿಂದ ಮಧುಮೇಹವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ನೆರವಾಗುತ್ತದೆ.
ಮಧುಮೇಹಿಗಳ ಆಹಾರದಲ್ಲಿ ಇದನ್ನು ಸೇರಿಸುವುದು ಲಾಭದಾಯಕವಾಗಿದೆ.
ಕಾಳು ಮೆಣಸು ಕೇವಲ ಅಡುಗೆ ರುಚಿಗೆ ಮಾತ್ರವಲ್ಲ, ದೇಹದ ಸಮಗ್ರ ಆರೋಗ್ಯಕ್ಕೆ ಸಹಕಾರಿ ಮಸಾಲೆ. ದಿನನಿತ್ಯದ ಆಹಾರದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಸೇರಿಸಿಕೊಂಡರೆ ಜೀರ್ಣಕ್ರಿಯೆ ಸುಧಾರಣೆ,
ಇದನ್ನು ಓದಿ : ಮಹಿಳೆಯರೇ ಎಚ್ಚರ! 40ರ ನಂತರ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?
ರೋಗನಿರೋಧಕ ಶಕ್ತಿ, ತೂಕ ನಿಯಂತ್ರಣ, ಹೃದಯ ಹಾಗೂ ಮೆದುಳಿನ ಆರೋಗ್ಯಕ್ಕೆ ಸಹಕಾರಿಯಾಗುತ್ತದೆ. ಪ್ರಕೃತಿಯ ನೀಡಿರುವ ಈ ಚಿಕ್ಕ ಮಸಾಲೆ ಪದಾರ್ಥದ ದೊಡ್ಡ ಲಾಭಗಳನ್ನು ನಿರ್ಲಕ್ಷಿಸಬೇಡಿ. (Peppercorns the king of spices)