ಬೆಂಗಳೂರು, ಏ. 29: ರಾಜ್ಯಾದ್ಯಂತ ಗಾರ್ಮೆಂಟ್ಸ್ ನಲ್ಲಿ ಶೇ.50ರಷ್ಟು ನೌಕರರು ಕೆಲಸ ಮಾಡುವುದಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿ ಪರಿಷ್ಕೃತ ಆದೇಶ ಹೊರಡಿಸಿದೆ. ಬೆಂಗಳೂರು ನಗರದಲ್ಲಿರುವ ಗಾರ್ಮೆಂಟ್ ಶೇ.50ರಷ್ಟು ನೌಕರರು ಕೆಲಸ ಮಾಡಲು ಅವಕಾಶ ನೀಡಲಾಗಿದೆ.
ಅವಕಾಶದ ನಿಯಮಾವಳಿಗಳು ಇಂತಿವೆ:
- ಪುತಿ ಘಟಕದ ಒಟ್ಟು ಸಿಬ್ಬಂದಿಯಲ್ಲಿ ಶೇ. 50 ಸಿಬ್ಬಂದಿ ಬಳಕೆ
- ಕರೊನಾ ಮುನ್ನಚ್ಚರಿಕೆ ನಡವಳಿಕೆ ಪಾಲನೆ.
- ಸಿಬ್ಬಂದಿ ಓಡಾಟಕ್ಕೆ ಅಧಿಕೃತ ಪತ್ರ ಇಲ್ಲವೇ ಗುರುತಿನ ಚೀಟಿ ಕಡ್ಡಾಯವೆಂಬ ಷರತ್ತು ಸಿದ್ಧ ಉಡುಪು ಉದ್ಯಮಗಳು ಕೊರೊನಾ ನಿಯಮಗಳನ್ನು ನೀಟಾಗಿ ಪಾಲಿಸಬೇಕು
- ಕೆಲಸಕ್ಕೆ ತೆರಳುವವರು ಸೂಕ್ತವಾದ ದಾಖಲೆಗಳನ್ನು ಕೂಡ ಹೊಂದಿರಬೇಕು.