*ಪೆಟ್ರೋಲ್ ಮತ್ತು ಡೀಸೆಲ್ (Petrol and diesel) ಮೇಲಿನ ತೆರಿಗೆಯನ್ನು (Petrol diesel excise duty hiked) ಹೆಚ್ಚಿಸಿದ ಕೇಂದ್ರ ಸರಕಾರ
- ಇಂಧನಗಳ ಮೇಲಿನ ಎಕ್ಸೈಸ್ ಡ್ಯೂಟಿಯನ್ನು (Excise duty)
- ಪ್ರತಿ ಲೀಟರ್ಗೆ 2 ರೂ. ಹೆಚ್ಚಿಸಿದ ಕೇಂದ್ರ
- ನೂತನ ತೆರಿಗೆ (New tax) ನಾಳೆ ಅಂದರೆ ಏಪ್ರಿಲ್ 8, 2025ರಿಂದಲೇ ಜಾರಿಗೆ
ಕರ್ನಾಟಕ ಸರಕಾರ (Government of Karnataka) ಡೀಸೆಲ್ ಮೇಲಿನ ತೆರಿಗೆಯನ್ನು ಏರಿಕೆ (Raise taxes) ಮಾಡಿದ ಬಳಿಕ ಇದೀಗ ಕೇಂದ್ರ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ (Petrol and diesel) ಮೇಲಿನ ತೆರಿಗೆಯನ್ನು ಹೆಚ್ಚಿಸಿದೆ. ಆದರೆ ಇದರಿಂದ ಪೆಟ್ರೋಲ್ ಹಾಗೂ ಡೀಸೆಲ್ ಚಿಲ್ಲರೆ ಮಾರಾಟ (Diesel retail sales) ಬೆಲೆ ಏರಿಕೆಯಾಗುತ್ತಿಲ್ಲ.ಕೇಂದ್ರ ಸರ್ಕಾರವು ಎರಡೂ ಇಂಧನಗಳ ಮೇಲಿನ ಎಕ್ಸೈಸ್ ಡ್ಯೂಟಿಯನ್ನು(Excise duty) ಪ್ರತಿ ಲೀಟರ್ಗೆ 2 ರೂ. ಹೆಚ್ಚಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅವರ ಪ್ರತೀಕಾರದ ಸುಂಕದ ನೀತಿಯಿಂದ ಜಾಗತಿಕ ಮಟ್ಟದಲ್ಲಿ ವ್ಯಾಪಾರ ಯುದ್ಧ ಆರಂಭವಾಗಿರುವ ಹೊತ್ತಲ್ಲೇ ಕೇಂದ್ರ ಸರಕಾರ ಈ ತೀರ್ಮಾನ ತೆಗೆದುಕೊಂಡಿದೆ.
ಇನ್ನು ಟ್ರೇಡ್ ವಾರ್ (Trade war) ನಿಂದ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆಗಳು ಇಳಿಕೆಯಾಗಿದ್ದು, 4 ವರ್ಷಗಳ ಕನಿಷ್ಠ ಮಟ್ಟಕ್ಕೆ (Minimum) ಕುಸಿದಿವೆ. ಇದೇ ಸಮಯದಲ್ಲಿ ಕೇಂದ್ರ ಸರಕಾರ ಪೆಟ್ರೋಲ್, ಹಾಗೂ ಡೀಸೆಲ್ ಮೇಲಿನ ಸುಂಕವನ್ನು ಹೆಚ್ಚಿಸಿದೆ. ನೂತನ ಬೆಲೆಗಳು ನಾಳೆ (Prices tomorrow) ಅಂದರೆ ಏಪ್ರಿಲ್ 8, 2025ರಿಂದಲೇ ಜಾರಿಗೆ ಬರಲಿವೆ.

ಕೇಂದ್ರ ಸರಕಾರ (Central Government) ತನ್ನ ಆದಾಯ ಹೆಚ್ಚಿಸುವ ಉದ್ದೇಶದಿಂದ ಈ ಕ್ರಮ ಕೈಗೊಂಡಿದೆ. ಆದರೆ ಡೊನಾಲ್ಡ್ ಟ್ರಂಪ್ (Donald Trump) ಅವರ ಸುಂಕದ ಬಗ್ಗೆ ಜಾಗತಿಕ ಮಟ್ಟದಲ್ಲಿ ಇರುವ ಅನಿಶ್ಚಿತತೆಯ ನಡುವೆ ಈ ತೀರ್ಮಾನ ಹೊರಬಿದ್ದಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ (Crude oil price) ಕಡಿಮೆಯಾಗುತ್ತಿದ್ದರೂ, ಭಾರತದಲ್ಲಿ ಬೆಲೆ ಕಡಿಮೆಯಾಗುತ್ತಿಲ್ಲ. ಆದರೆ, ಬೆಲೆ ಇಳಿಕೆ ಮಾಡಬೇಕಾದ ಸಂದರ್ಭದಲ್ಲಿ ಕೇಂದ್ರ ಸರಕಾರ (Central Govt) ಸುಂಕ ಏರಿಕೆ ಮಾಡಿ, ದರದಲ್ಲಿ ಯಥಾಸ್ಥಿತಿ ಕಂಡುಕೊಳ್ಳಲು ಮುಂದಾಗಿದೆ. ಹಿಂದೆ ಕೂಡ ಕಚ್ಚಾ ತೈಲ (Crude oil) ದರ ಇಳಿಕೆಯಾದಾಗ ಸರಕಾರ ಸುಂಕ ಹೆಚ್ಚಿಸುವ ಮೂಲಕ ಬೊಕ್ಕಸ (Treasury) ತುಂಬಿಸಿಕೊಳ್ಳಲು ಮುಂದಾದ ಉದಾಹರಣೆಗಳಿವೆ.
ಈ ಅಬಕಾರಿ ಸುಂಕ ದರಗಳಲ್ಲಿ ಹೆಚ್ಚಳವಾದ ನಂತರ ಪೆಟ್ರೋಲ್ ಮತ್ತು ಡೀಸೆಲ್ (Petrol and diesel) ಚಿಲ್ಲರೆ ಬೆಲೆಯಲ್ಲಿ ಯಾವುದೇ ಹೆಚ್ಚಳವಿಲ್ಲ ಎಂದು ಪಿಎಸ್ಯು ತೈಲ ಮಾರುಕಟ್ಟೆ ಕಂಪನಿಗಳು ತಿಳಿಸಿವೆ ಎಂದು ಭಾರತ ಸರ್ಕಾರದ (Government of India) ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಟ್ವೀಟ್ ಮಾಡಿದೆ. ಹಾಗಾಗಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ತೆರಿಗೆ (Excise tax) ಮಾತ್ರ ಹೆಚ್ಚಾಗಿದ್ದು, ದರಗಳು ಎಂದಿನಂತೆಯೇ ಇರಲಿದೆ. ಇದರಿಂದ ಗ್ರಾಹಕರ (Petrol diesel excise duty hiked) ಆತಂಕ ದೂರವಾಗಿದೆ.