ಅಕ್ರಮ ಇಂಧನ ಮಾರಾಟ (Petrol diesel sales new rules) ತಡೆಯಲು ಹೊಸ ಮಾರ್ಗಸೂಚಿ
ರಾಜ್ಯದಲ್ಲಿ ಪೆಟ್ರೋಲ್-ಡೀಸೆಲ್ ಮಾರಾಟ ನಿಯಮ ಬದಲಾವಣೆ
ವಾಹನಗಳ ಟ್ಯಾಂಕ್ ಹೊರತುಪಡಿಸಿ ಇಂಧನ ನೀಡಿದರೆ ಲೈಸೆನ್ಸ್ ರದ್ದು
Bengaluru: ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ (Petrol diesel sales new rules) ವಿತರಣೆಯನ್ನು ನಿಯಂತ್ರಿತ ಮತ್ತು ಸುರಕ್ಷಿತ ರೀತಿಯಲ್ಲಿ ನಡೆಸಲು ನಾಗರಿಕ ಮತ್ತು ಆಹಾರ ಸರಬರಾಜು ಇಲಾಖೆ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ.
ಜಾಗತಿಕ ಮಾರುಕಟ್ಟೆಯಲ್ಲಿನ ಅಸ್ಥಿರ ಪರಿಸ್ಥಿತಿ ಹಾಗೂ ಭವಿಷ್ಯದಲ್ಲಿ ಇಂಧನ ಕೊರತೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಗ್ರಾಹಕರ ಸುರಕ್ಷತೆ, ಇಂಧನದ ಸಮರ್ಪಕ ಬಳಕೆ ಮತ್ತು ಅಕ್ರಮ ವಹಿವಾಟು ತಡೆಯುವ ನಿಟ್ಟಿನಲ್ಲಿ ಪೆಟ್ರೋಲ್ ಬಂಕ್‌ಗಳಿಗೆ ಹಲವು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ.
ಇಲಾಖೆಯ ಆದೇಶವನ್ನು ರಾಜ್ಯದ ಎಲ್ಲಾ ಇಂಧನ ವಿತರಣಾ ಕೇಂದ್ರಗಳು ಕಡ್ಡಾಯವಾಗಿ ಪಾಲಿಸಬೇಕಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಗಂಭೀರ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.

ಹೊಸ ಮಾರ್ಗಸೂಚಿಗಳ ಪ್ರಕಾರ, ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಕೇವಲ ವಾಹನಗಳ ಟ್ಯಾಂಕ್‌ಗಳಿಗೆ ಅಥವಾ ಕಾನೂನುಬದ್ಧವಾಗಿ ಅನುಮೋದಿತ ಕಂಟೇನರ್‌ಗಳಿಗೆ ಮಾತ್ರ ತುಂಬಿಸಬೇಕು.
ಪೆಟ್ರೋಲಿಯಂ ನಿಯಮಗಳು–2002ರ (Petroleum Rules-2002) ಅನ್ವಯ ಗರಿಷ್ಠ 200 ಲೀಟರ್‌ಗಳ ಮಿತಿಯನ್ನು ನಿಗದಿಪಡಿಸಲಾಗಿದೆ.
ಸಾರ್ವಜನಿಕ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಬಾಟಲಿ, (Bottle) ಪ್ಲಾಸ್ಟಿಕ್ ಕ್ಯಾನ್ (Plastic can) ಅಥವಾ ಇತರ ಅನಧಿಕೃತ ಪಾತ್ರೆಗಳಲ್ಲಿ ಇಂಧನ ವಿತರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಇಂತಹ ಅಕ್ರಮ ಪೂರೈಕೆಗಳಿಂದ ಅಗ್ನಿ ಅವಘಡಗಳು, ಸಂಗ್ರಹದ ದುರ್ಬಳಕೆ ಹಾಗೂ ಕಳ್ಳಬಜಾರ್ ಚಟುವಟಿಕೆಗಳಿಗೆ ಅವಕಾಶ ಸಿಗುವ ಸಾಧ್ಯತೆ ಇರುವುದರಿಂದ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ನಿಯಮಗಳನ್ನು ಪಾಲಿಸದ ಪೆಟ್ರೋಲ್ ಬಂಕ್‌ಗಳ ಪರವಾನಗಿ ರದ್ದುಪಡಿಸುವ ಮಟ್ಟದ ಕ್ರಮಕ್ಕೂ ಸರ್ಕಾರ ಹಿಂದೆ ಸರಿಯುವುದಿಲ್ಲ ಎಂದು ತಿಳಿಸಲಾಗಿದೆ.
ಇದೇ ವೇಳೆ, ರಿಟೇಲ್ ಔಟ್‌ಲೆಟ್‌ಗಳು (Retail outlets) ದೊಡ್ಡ ಪ್ರಮಾಣದ ಇಂಧನ ವಿತರಣೆಯನ್ನು ನಡೆಸಬಾರದು ಎಂದು ಸ್ಪಷ್ಟ ಸೂಚನೆ ನೀಡಲಾಗಿದೆ.
ಬಲ್ಕ್ ಮಾರಾಟವನ್ನು ಕೇವಲ ‘ಡೈರೆಕ್ಟ್ ಸೇಲ್ಸ್ ಮೆಕ್ಯಾನಿಸಂ’(Direct Sales Mechanism) ಮೂಲಕವೇ ನಡೆಸಬೇಕು ಎಂದು ಇಲಾಖೆ ಆದೇಶಿಸಿದೆ.
ಸಾಮಾನ್ಯ ಪೆಟ್ರೋಲ್ ಬಂಕ್‌ಗಳಿಂದ ದೊಡ್ಡ (Petrol diesel sales new rules) ಪ್ರಮಾಣದಲ್ಲಿ ಇಂಧನ ವಿತರಣೆ ನಡೆದರೆ ಅದು ಲೈಸೆನ್ಸಿಂಗ್ (Licensing) ನಿಯಮಗಳ ಉಲ್ಲಂಘನೆಯಾಗುತ್ತದೆ ಎಂದು ಎಚ್ಚರಿಸಲಾಗಿದೆ.
ರಾಜ್ಯದ ವಿವಿಧ ಭಾಗಗಳಲ್ಲಿ ಕೆಲವೊಂದು ಅಕ್ರಮ ಸಂಗ್ರಹಣೆ ಮತ್ತು ಮರುಮಾರಾಟದ ಬಗ್ಗೆ ವರದಿಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ.
ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಪರಿಶೀಲನೆ ನಡೆಸುವಂತೆ ಸೂಚನೆ ನೀಡಲಾಗಿದ್ದು, ಸಂಶಯಾಸ್ಪದ ವ್ಯವಹಾರಗಳು ಕಂಡುಬಂದರೆ ತಕ್ಷಣ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಲಾಗಿದೆ.
ಇಂಧನ ವಿತರಣೆಯಲ್ಲಿ ಪಾರದರ್ಶಕತೆ ಮತ್ತು ನಿಯಂತ್ರಣ ಕಾಪಾಡುವ ಉದ್ದೇಶದಿಂದ ಜಿಲ್ಲಾಮಟ್ಟದ ಅಧಿಕಾರಿಗಳು ನಿಗಾವಹಿಸಲಿದ್ದಾರೆ.
ಕೃಷಿ ಚಟುವಟಿಕೆಗಳು ಹಾಗೂ ಜಲಚರ ಸಾಕಣೆ ಕ್ಷೇತ್ರಗಳಿಗೆ ಅಗತ್ಯವಿರುವ ಡೀಸೆಲ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ವಿಶೇಷ ಗಮನ ಹರಿಸುವಂತೆ ಸರ್ಕಾರ ಸೂಚಿಸಿದೆ.
ರೈತರು ಕೃಷಿ ಯಂತ್ರೋಪಕರಣಗಳ ಬಳಕೆಗೆ ಅವಲಂಬಿಸಿರುವ ಹಿನ್ನೆಲೆ, ಅವರ ಬೇಡಿಕೆಯನ್ನು ಪರಿಶೀಲಿಸಿ ಸಮರ್ಪಕವಾಗಿ ಡೀಸೆಲ್ ವಿತರಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಲಾಗಿದೆ.
ಇಂಧನದ ಕೊರತೆ ಉಂಟಾಗದಂತೆ ಮುಂಚಿತ ಕ್ರಮ ಕೈಗೊಳ್ಳುವ ಜೊತೆಗೆ ಅಕ್ರಮ ಸಂಗ್ರಹಣೆ ಮತ್ತು ಅನಧಿಕೃತ ಮಾರಾಟವನ್ನು ತಡೆಯುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.
ಸುರಕ್ಷತೆ ಮತ್ತು ಕಾನೂನುಬದ್ಧ ವಿತರಣೆಗೆ ಆದ್ಯತೆ ನೀಡುವ ಈ ಹೊಸ ನಿಯಮಗಳು ರಾಜ್ಯದ ಇಂಧನ ವ್ಯವಸ್ಥೆಯನ್ನು ಇನ್ನಷ್ಟು ಶಿಸ್ತಿನಲ್ಲಿಡಲಿವೆ ಎಂದು ಇಲಾಖೆ ವಿಶ್ವಾಸ ವ್ಯಕ್ತಪಡಿಸಿದೆ.
ಇದನ್ನು ಓದಿ: https://vijayatimes.com/p-m-modi-appeals-the-nation-not-to-buy-gold-and-reduce-fuel-use/