New Delhi : ಪಿಎಫ್ಐ(PFI Bank accounts closed) ಮೇಲೆ ನಿನ್ನೆ ಕೇಂದ್ರ ಗೃಹ ಸಚಿವಾಲಯ ನಿಷೇಧ(Ban) ಹೇರಿದ ನಂತರ ಇದೀಗ ಪಿಎಫ್ಐ(PFI) ಮತ್ತು ಅದರ ಸಹವರ್ತಿ ಸಂಸ್ಥೆಗಳ ಮೇಲೆ ಡಿಜಿಟಲ್ ದಾಳಿ ನಡೆಸಿದ್ದು,.
ನಿಷೇಧಕ್ಕೆ ಒಳಗಾಗಿರುವ ಎಂಟು ಸಂಸ್ಥೆಗಳಿಗೆ ಸೇರಿದ ಸಾಮಾಜಿಕ ಮಾದ್ಯಮಗಳು, ಬ್ಯಾಂಕ್ ಖಾತೆಗಳು(PFI Bank accounts closed) ಸೇರಿದಂತೆ ಎಲ್ಲವನ್ನು ಬಂದ್ ಮಾಡಲಾಗಿದೆ.

ಕೇಂದ್ರ ಗೃಹ ಸಚಿವಾಲಯವು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ಮತ್ತು ಅದರ ಎಂಟು ಸಹವರ್ತಿ ಸಂಸ್ಥೆಗಳನ್ನು ಐದು ವರ್ಷಗಳ ಕಾಲ ನಿಷೇಧಿಸಿದ ಒಂದು ದಿನದ ನಂತರ, ಟ್ವಿಟರ್(Twitter) ಪಿಎಫ್ಐನ ಅಧಿಕೃತ ಖಾತೆಯನ್ನು ತೆಗೆದುಹಾಕಿದೆ. https://youtu.be/goe0pevvNrg
ವೆಬ್ಸೈಟ್ಗಳು ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಲು ಕೇಂದ್ರವು ಆದೇಶಿಸಿದ್ದು, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ನಿಷೇಧಿಸಿದ ನಂತರ ಅವರ ಚಟುವಟಿಕೆಗಳನ್ನು, ಪ್ರಚಾರ ಮಾಡುವುದನ್ನು ತಡೆಯಲು ಅವಕಾಶವಿದೆ.
ಇದನ್ನೂ ಓದಿ : https://vijayatimes.com/beauty-tips-for-skin-tan/
ಇನ್ನು ಭಯೋತ್ಪಾದಕರಿಗೆ ನಿಧಿ ಸಂಗ್ರಹ ಮತ್ತು ಜಾಗತಿಕ ಭಯೋತ್ಪಾದಕ ಗುಂಪುಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪಕ್ಕಾಗಿ ಗೃಹ ವ್ಯವಹಾರಗಳ ಸಚಿವಾಲಯ ಪಿಎಫ್ಐ ಮೂಲಭೂತ ಸಂಘಟನೆಯನ್ನು ನಿಷೇಧಿಸಿದೆ. ವಿವಿಧ ರಾಜ್ಯಗಳಾದ್ಯಂತ ಪಿಎಫ್ಐ ಕಾರ್ಯಕರ್ತರ ಮೇಲೆ ಕೇಂದ್ರ ತನಿಖಾ ಸಂಸ್ಥೆಗಳ ಎರಡನೇ ಸುತ್ತಿನ ದಾಳಿಯ ನಂತರ ಈ ಕ್ರಮವು ಹೊರಬಿದ್ದಿದೆ.

ಎರಡು ದಾಳಿಗಳಲ್ಲಿ 250ಕ್ಕೂ ಹೆಚ್ಚು ಪಿಎಫ್ಐ ಸದಸ್ಯರು/ಕಾರ್ಯಕರ್ತರನ್ನು ಬಂಧಿಸಲಾಗಿದೆ. ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ದಾಳಿ ನಡೆಸಿ, ಪಿಎಫ್ಐ ಕಾರ್ಯಕರ್ತರನ್ನು ಎನ್ಐಎ ವಶಕ್ಕೆ ಪಡೆದಿದೆ.
ಇನ್ನೊಂದೆಡೆ ಮುಂಜಾಗ್ರತಾ ಕ್ರಮವಾಗಿ ರಾಜ್ಯ ಪೊಲೀಸರು ಕೂಡಾ ಪಿಎಫ್ಐ ಕಾರ್ಯಕರ್ತರ ಮೇಲೆ ದಾಳಿ ನಡೆಸಿ, ಅವರ ಮೇಲೆ ಪಿಎಆರ್ಕಾಯ್ದೆಯನ್ನು ದಾಖಲಿಸಿದೆ.
- ಮಹೇಶ್.ಪಿ.ಎಚ್