New Delhi: ಇಂದು (ಮೇ 12) 4ನೇ ಹಂತದ ಲೋಕಸಭೆ ಚುನಾವಣೆ ನಡೆಯಲಿದೆ. ಇದರೊಂದಿಗೆ ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಯೂ ನಡೆಯಲಿದ್ದು, ಹಾಲಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಗೆ (Jagan Mohan Reddy) ಬಿಜೆಪಿ, ಚಂದ್ರಬಾಬು ನಾಯ್ಡು ಹಾಗೂ ಪವನ್ ಕಲ್ಯಾಣ ಮೈತ್ರಿಕೂಟದಿಂದ ಭಾರೀ ಸವಾಲು ಎದುರಾಗಿದೆ. ಸಿಎಂ ಜಗನ್ ನೇತೃತ್ವದ ವೈಎಸ್ಆರ್ ಪಾರ್ಟಿ (YSR Party) ಏಕಾಂಗಿಯಾಗಿ ಸ್ಪರ್ಧೆ ಮಾಡಿದೆ.

ಇನ್ನು ಲೋಕಸಭಾ ಚುನಾವಣೆಯ 4ನೇ ಹಂತದ ಚುನಾವಣೆಯಲ್ಲಿ 9 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶದ 96 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮಹಾರಾಷ್ಟ್ರದ 11, ತೆಲಂಗಾಣದ 17, ಉತ್ತರಪ್ರದೇಶದ 13, ಬಂಗಾಳದ 8, ಆಂಧ್ರ ಪ್ರದೇಶದ (Andrapradesh) 25, ಬಿಹಾರದ 5, ಒಡಿಶಾ, ಜಾರ್ಖಂಡ್ನ ತಲಾ 4 ಹಾಗೂ ಜಮ್ಮು ಮತ್ತು ಕಾಶ್ಮೀರದ 1 ಸ್ಥಾನಕ್ಕೆ ಮತದಾನ ನಡೆಯಲಿದೆ. 96 ಕ್ಷೇತ್ರಗಳಲ್ಲಿ ಒಟ್ಟು 1717 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಕಣದಲ್ಲಿರುವ ಪ್ರಮುಖರು :
ಕೇಂದ್ರ ಸಚಿವರಾದ ನಿತ್ಯಾನಂದ ರೈ (Nityananda Rai), ಅಜಯ್ ಮಿಶ್ರಾ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ವಿವಾದಿತ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ, ಮಾಜಿ ಕ್ರಿಕೆಟಿಗ ಯುಸೂಫ್ ಪಠಾಣ್, ನಟ ಶತ್ರುಜ್ಞ ಸಿನ್ಹಾ, ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ನಾಯಕ ಅಸಾದುದ್ದೀನ್ ಓವೈಸಿ ಮತ್ತು ಬಿಜೆಪಿಯ (BJP) ಮಾಧವಿಲತಾ ಸೇರಿ ಅನೇಕ ಪ್ರಮುಖರು ಕಣದಲ್ಲಿದ್ದಾರೆ.
ಇನ್ನು ಈಗಾಗಲೇ 3 ಹಂತಗಳ (3 levels) ಮತದಾನ ಸುಗಮವಾಗಿ ನಡೆದಿದ್ದು, ಯಾವುದೇ ಅವಿತಕರ ಘಟನೆಗಳು ವರದಿಯಾಗಿಲ್ಲ. ದೇಶಾದ್ಯಂತ ಒಟ್ಟು 7 ಹಂತಗಳಲ್ಲಿ (7 steps) ಲೋಕಸಭಾ ಚುನಾವಣೆ(Lok Sabha Elections) ನಡೆಯಲಿದೆ. ಜೂನ್ 4ರಂದು ಅಂತಿಮ ಫಲಿತಾಂಶ ಹೊರಬರಲಿದೆ. ಇನ್ನು ಕರ್ನಾಟಕದಲ್ಲಿ (Karnataka) ಏಪ್ರಿಲ್ 26 ಹಾಗೂ ಮೇ 7 ರಂದು ಮತದಾನ ನಡೆದಿದ್ದು, ಜೂನ್ 4ರಂದು ರಾಜ್ಯದ ಎಲ್ಲಾ 28 ಕ್ಚೇತ್ರಗಳ ಫಲಿತಾಂಶ ಪ್ರಕಟವಾಗಲಿದೆ.