ನಡೆದಾಡುವ ಅತಿ ಅಪರೂಪದ ಪಿಂಕ್ ಹ್ಯಾಂಡ್ ಫಿಶ್(Pink Hand Fish) 22 ವರ್ಷದ ಬಳಿಕ ಪತ್ತೆಯಾಗಿದೆ. ಟಾಸ್ಮೇನಿಯನ್ ಕರಾವಳಿಯ ಬಳಿ ಆಸ್ಟ್ರೇಲಿಯಾದ(Australia) ಕಾಮನ್‍ವೆಲ್ತ್ ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರಿಸರ್ಚ್ ಆರ್ಗನೈಸೇಶನ್‍ನ ಸಂಶೋಧಕರ(Research) ತಂಡ ಈ ಮೀನು(Fish) ಇರುವ ಬಗ್ಗೆ ಪತ್ತೆ ಹಚ್ಚಿದೆ. ಸಂಶೋಧಕರ ತಂಡ ಟಾಸ್ಮೈನ್ ಸಮುದ್ರದ ಒಳಗೆ ಕ್ಯಾಮೆರಾವನ್ನು ಇಟ್ಟಿದ್ದರು.
4 ಸಾವಿರ ಮೀಟರ್ ಅಡಿಯವರೆಗೆ ಕ್ಯಾಮೆರಾವನ್ನು ಇಳಿಬಿಟ್ಟಿದ್ದರು. ಒಂದು ವರ್ಷದ ನಂತರ ಕ್ಯಾಮೆರಾವನ್ನು ಹೊರತೆಗೆದಿದ್ದಾರೆ. ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಗಳನ್ನು ಪರೀಕ್ಷಿಸಿದಾಗ ಗುಲಾಬಿ ಹ್ಯಾಂಡ್ ಫಿಶ್ ನೋಡಿ ಸಂತಸಗೊಂಡಿದ್ದಾರೆ. ಗುಲಾಬಿ ಹ್ಯಾಂಡ್ ಫಿಶ್ ಕೇವಲ 150 ಅಡಿ ಆಳದಲ್ಲಿ ಕಂಡುಬಂದಿದೆ. ಆ್ಯಂಗ್ಲರ್ಫಿಶ್ ಕುಟುಂಬಕ್ಕೆ ಸೇರಿದ ಈ ಪಿಂಕ್ ಹ್ಯಾಂಡ್ ಫಿಶ್ ಇದುವರೆಗೆ ಕೇವಲ ಐದು ಬಾರಿ ಕಾಣಿಸಿಕೊಂಡಿತ್ತು.
ಇದು ಕೊನೆಯದಾಗಿ ಕಾಣಿಸಿಕೊಂಡಿದ್ದು, ತಾಸ್ಮೇನಿಯಾದ ರಾಜಧಾನಿ ಹೊಬಾರ್ಟ್ಆಗ್ನೇಯ ಭಾಗದ ಕರಾವಳಿ ಪ್ರದೇಶದಲ್ಲಿ, ಅದು 1999ರಲ್ಲಿ.
ಇದನ್ನು ಪತ್ತೆ ಹಚ್ಚಿದ್ದು, ತಾಸ್ಮೇನಿಯಾ ವಿಶ್ವವಿದ್ಯಾಲಯದ ತಜ್ಞರು. ಇತ್ತೀಚೆಗೆ ಟಾಸ್ಮನ್ ಫ್ರಾಕ್ಚರ್ ಮರೈನ್ ಪಾರ್ಕ್ನಲ್ಲಿ ವಿಜ್ಞಾನಿಗಳು ಸಂಶೋಧನೆಯಲ್ಲಿ ತೊಡಗಿಕೊಂಡಿದ್ದರು. ಸಮುದ್ರದಲ್ಲಿನ ಹವಳ, ವಿಭಿನ್ನವಾದ ಕಲ್ಲುಗಳು ಮತ್ತು ಮೀನುಗಳ ಬಗ್ಗೆ ಅಧ್ಯಯನಕ್ಕಾಗಿ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದರು. ಈ ವೇಳೆ ಪಿಂಕ್ ಹ್ಯಾಂಡ್ಫಿಶ್ ವಿಜ್ಞಾನಿಗಳ ಕಣ್ಣಿಗೆ ಬಿದ್ದಿದೆ.
ಈ ಮೊದಲು 1999ರಲ್ಲಿ 20 ರಿಂದ 30 ಮೀಟರ್ ಆಳದಲ್ಲಿ ಕಂಡುಬಂದಿದ್ದ ಮೀನು, ಅದಕ್ಕೂ ಮುನ್ನ ಕೇವಲ ಸಮುದ್ರದ 10 ಮೀಟರ್ ಆಳದಲ್ಲಿ ಕಂಡುಬಂದಿತ್ತು ಎಂದು ತಿಳಿದುಬಂದಿದೆ. ಸಮುದ್ರದ ತಳದಲ್ಲಿ ನಡೆದಾಡಲು ಪುಟ್ಟ ಕೈಗಳನ್ನು ಹೊಂದಿರುವ ಈ ಮೀನು, ತಿಳಿ ಗುಲಾಬಿ ಬಣ್ಣದಲ್ಲಿದ್ದು ನೋಡಲೂ ಆಕರ್ಷಕವಾಗಿದೆ. ತನ್ನ ಕೈಗಳ ಸಹಾಯದಿಂದ ಮುಂದೆ ಸಾಗುತ್ತಿರುವ ವಿಡಿಯೋ ಕೂಡ ವೈರಲ್ ಆಗಿದೆ.
ನೀವು ಬಗೆ ಬಗೆಯ ಮೀನುಗಳ ಬಗ್ಗೆ ಕೇಳಿರಬಹುದು, ನೋಡಿರಬಹುದು. ಆದ್ರೆ ಈ ನಡೆದಾಡುವ ಫಿಶ್ ಬಗ್ಗೆ ಕೇಳಿರೋಕೆ ಸಾಧ್ಯವೇ ಇಲ್ಲ.
- ಪವಿತ್ರ ಸಚಿನ್