ದಕ್ಷಿಣಾ ಕೊರಿಯಾದಲ್ಲಿ (South Korea) 181 ಜನರನ್ನ ಹೊತ್ತು ಸಾಗುತ್ತಿದ್ದ ವಿಮಾನವೊಂದು ತುರ್ತು ಲ್ಯಾಂಡಿಂಗ್ (A plane makes an emergency landing) ವೇಳೆ ಪತನಗೊಂಡಿದೆ. ವಿಮಾನಕ್ಕೆ ಹಕ್ಕಿ ಡಿಕ್ಕಿಯಾಗಿ ಈ ಅವಘಡ ಸಂಭವಿಸಿದೆ. ದಕ್ಷಿಣ ಕೊರಿಯಾದ ಮುವಾನ್ ವಿಮಾನ (Muan flight) ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಈ ವಿಮಾನ ಅಪಘಾತದಲ್ಲಿ, 179 ಜನ ಸಾವನ್ನಪ್ಪಿದ್ದಾರೆ (Died) . ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಜೆಜು ಏರ್ ಫ್ಲೈಟ್ (Jeju Air Flight) 7C 2216 ಬ್ಯಾಂಕಾಕ್‌ನಿಂದ 175 ಪ್ರಯಾಣಿರು ಹಾಗೂ 6 ಸಿಬ್ಬಂದಿಯನ್ನ ಹೊತ್ತೊಯ್ಯುತ್ತಿದ್ದಾಗ ಹಕ್ಕಿಗಳ ಡಿಕ್ಕಿಯಾಗಿದೆ (Bird collision) . ಈ ವೇಳೆ ಪೈಲಟ್ ನಿಯಂತ್ರಣ (Pilot control)

ಕೊಠಡಿಗೆ ಮಾಹಿತಿ (Room information) ನೀಡಿ ತುರ್ತು ಲ್ಯಾಂಡಿಂಗ್ ಗೆ ಮುಂದಾಗಿದ್ದರು. ಲ್ಯಾಂಡಿಂಗ್‌ಗೆ ಅನುಮತಿ ಸಿಕ್ಕಿತ್ತಾದ್ರೂ ಕೂಡ ಪೈಲಟ್ ಲ್ಯಾಂಡಿಂಗ್ ಗೆ ಸುಮಾರು ಮೂರು ನಿಮಿಷಗಳನ್ನು ತೆಗೆದುಕೊಂಡಿದ್ದ. ಇದೇ ಸಂದರ್ಭದಲ್ಲಿ ವಿಮಾನದ ಗೇರ್ (Aircraft gear) ಕೂಡ ವಿಫಲ ಆಗಿದೆ. ಆಗ ಪೈಲಟ್ ವಿಮಾನವನ್ನ ಬೆಲ್ಲಿಂಗ್ ಲ್ಯಾಂಡ್ (Belling Land) ಮಾಡಲು ಮುಂದಾಗಿದ್ದಾರೆ, ಆದ್ರೆ ವಿಫಲ ಆಗಿದೆ.
ಬೆಲ್ಲಿಂಗ್ ಲ್ಯಾಂಡ್ (Bellingland) ವಿಫಲ ಆಗುತ್ತಿದ್ದಣತೆ, ವಿಮಾನ ನೇರವಾಗಿ ಮುವಾನ್ ವಿಮಾನ ನಿಲ್ದಾಣದ (Muan Airport) ತಡೆಗೋಡೆಗೆ ಡಿಕ್ಕಿಯಾಗಿದೆ. ಪರಿಣಾಮ ವಿಮಾನ ಸ್ಫೋಟಗೊಂಡು ಈ ಅವಘಢ ಸಂಭವಿಸಿದೆ ಎನ್ನಲಾಗ್ತಿದೆ. ಇನ್ನೂ ಘಟನೆಯ ಬಳಿಕ ಸ್ಥಳಕ್ಕೆ ರಕ್ಷಣಾ (Defense to the location) ತಂಡ ಹಾಗೂ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಅವಶೇಷಗಳಡಿ ಸಿಲುಕಿದ್ದ ಮೃತದೇಹ ವನ್ನ ಹೊರತೆಗೆಯಲು ಹರಸಾಹಸ ಪಟ್ಟಿದ್ದಾರೆ. ಹಾಗೂ ಇಬ್ಬರನ್ನ ರಕ್ಷಿಸುವಲ್ಲಿ (Protecting) ಯಶಸ್ವಿ ಆಗಿದ್ದಾರೆ.
ಇನ್ನೂ 179 ಮೃತದೇಹಗಳ ಪೈಕಿ 65 ಮೃತದೇಹಗಳನ್ನ ಪತ್ತೆ ಹೆಚ್ಚಲು ಸಾಧ್ಯವಾಗಿದೆ.ಇನ್ನುಳಿದ ಮೃತದೇಹವನ್ನ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಇದು ಈ ವರ್ಷದಲ್ಲೇ ಕಂಡ ಅತೀ ಭೀಕರ ದುರಂತ ಇದಾಗಿದೆ. ಇನ್ನೂ ಈ ಅವಘಢದ ಬಗ್ಗೆ ತನಿಖೆ ನಡೆಸಲಾಗ್ತಿದೆ (Investigation is underway) ಎಂದು ದಕ್ಷಿಣಾ ಕೊರಿಯಾ ಸರ್ಕಾರ ತಿಳಿಸಿದೆ.