• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಪ್ರವಾಸಿಗರ ಗಮನಕ್ಕೆ: ಚಿಕ್ಕಮಗಳೂರು ವ್ಯಾಪ್ತಿಯ ಪ್ರವಾಸಿ ತಾಣಗಳಲ್ಲಿ ಪ್ಲಾಸ್ಟಿಕ್ ಸಂಪೂರ್ಣ ನಿಷೇಧ.

Bhavya by Bhavya
in ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
ಪ್ರವಾಸಿಗರ ಗಮನಕ್ಕೆ: ಚಿಕ್ಕಮಗಳೂರು ವ್ಯಾಪ್ತಿಯ ಪ್ರವಾಸಿ ತಾಣಗಳಲ್ಲಿ ಪ್ಲಾಸ್ಟಿಕ್ ಸಂಪೂರ್ಣ ನಿಷೇಧ.
0
SHARES
45
VIEWS
Share on FacebookShare on Twitter

Chikkamagalauru: ಚಿಕ್ಕಮಗಳೂರು (Chikkamagalauru) ತಾಲೂಕಿನಲ್ಲಿರುವ ಚಂದ್ರದ್ರೋಣ ಪರ್ವತದ ಸಾಲಿನಲ್ಲಿರುವ ಮುಳ್ಳಯ್ಯನಗಿರಿಗೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ತೆರಳುತ್ತಿದ್ದು, ಇನ್ಮುಂದೆ ಪ್ಲಾಸ್ಟಿಕ್​ ವಸ್ತುಗಳನ್ನು ಒಯ್ಯುವಂತಿಲ್ಲ. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಪ್ಲಾಸ್ಟಿಕ್ (Plastic)​ ಬಳಕೆಯನ್ನು ಸರ್ಕಾರ ಸಂಪೂರ್ಣ ನಿಷೇಧಿಸಿದೆ.

Plastic

ಪ್ಲಾಸ್ಟಿಕ್ ನಿಷೇಧ ಮಾಡಿದ ಹಿನ್ನೆಲೆಯಲ್ಲಿ ಒಂದು ವೇಳೆ ಪ್ಲಾಸ್ಟಿಕ್​​​ ವಸ್ತುಗಳು ಸಿಕ್ಕರೆ ಸೀಜ್​​ ಮಾಡಲಾಗುತ್ತಿದ್ದು, ಚೆಕ್​​​ಪೋಸ್ಟ್ (Checkpost)​​ನಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾರೆ. ಪಶ್ಚಿಮ ಘಟ್ಟಗಳ ಸಾಲು ಸೇರಿದಂತೆ, ಪ್ರವಾಸಿತಾಣಗಳನ್ನ ರಕ್ಷಿಸುವ ಸಲುವಾಗಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಸರ್ಕಾರದ ಈ ಕ್ರಮವನ್ನು ಪರಿಸರ ಪ್ರೇಮಿಗಳು ಸ್ವಾಗತಿಸಿದ್ದು, ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಮಳೆಗಾಲ ಶುರುವಾಗಿರುವುದರಿಂದ ವಾರಾಂತ್ಯದಲ್ಲಿ ಹೆಚ್ಚಿನ ಜನರು ಚಿಕ್ಕಮಗಳೂರು ಪ್ರವಾಸಕ್ಕೆ ತೆರಳುತ್ತಾರೆ. ಅಲ್ಲಿನ ಮುಳ್ಳಯ್ಯನಗಿರಿ, ಎತ್ತಿನ ಭುಜ (Ettina Bhuja) ಶಿಖರದಲ್ಲಿ ಚಾರಣಕ್ಕೆ ತೆರಳುತ್ತಾರೆ. ಹೀಗೆ ತೆರಳುವವರು ಕೆಲವೊಂದು ಸಾರಿ ಅಡ್ಡಾದಿಡ್ಡಿ ವಾಹನ ಪಾರ್ಕ್​ ಮಾಡುತ್ತಾರೆ. ಅಥವಾ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ತೆರಳುವುದರಿಂದ ಘಟ್ಟಗಳ ರಸ್ತೆ ಚಿಕ್ಕದಾಗಿರುವುದರಿಂದ ಕಿಮೀ ಗಟ್ಟಲೆ ಟ್ರಾಫಿಕ್ ​ಜಾಮ್ (Traffic Jam)​ ಉಂಟಾಗುತ್ತೆ.

ಟ್ರಾಫಿಕ್ ಕ್ಲಿಯರ್ ಮಾಡಲು ಪೊಲೀಸರು ಪರದಾಡುತ್ತಾರೆ. ಮುಂಜಾಗ್ರತಾ ಕ್ರಮವಾಗಿ ಚಂದ್ರದ್ರೋಣ ಪರ್ವತಕ್ಕೆ ‌ತೆರಳುವ ರಸ್ತೆಯಲ್ಲಿದ್ದ ಕೈಮರ ಚೆಕ್​ಪೋಸ್ಟ್​​ನ್ನು N,M,D,C ಗ್ರಾಮಕ್ಕೆ ಬದಲಾವಣೆ ಮಾಡಿದ್ದು, ಅಲ್ಲಿನ ಸ್ಥಳೀಯರು ಪ್ರವಾಸಿಗರ ಕಿರುಚಾಟ ಕೂಗಾಟದ ಜೊತೆ ಮೋಜು ಮಸ್ತಿಯಿಂದ ತೊಂದರೆ ಆಗುತ್ತಿದೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Plastic

ಚಿಕ್ಕಮಗಳೂರು ಜಿಲ್ಲೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆ (Dakshina Kannada)ಯ ಗಡಿ ಭಾಗದಲ್ಲಿರುವ ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ವಿಹಂಗಮವಾಗಿ ನಿಂತಿರುವ ಶಿಖರವೇ ಎತ್ತಿನ ಭುಜ. ಮಳೆಗಾಲ, ಚಳಿಗಾಲ, ಬೇಸಿಗೆಕಾಲ ಅನ್ನದೆ ವರ್ಷವಿಡೀ ಪ್ರವಾಸಿಗರಿಂದ ತುಂಬಿ ತುಳುಕುವ ಶಿಖರವಿದು. ಕಳೆದ ಒಂದು ತಿಂಗಳಿಂದ ಎತ್ತಿನಭುಜ ಶಿಖರದ ಸೌಂದರ್ಯವನ್ನು ಸಾವಿರಾರು ಪ್ರವಾಸಿಗರು ಅನುಭವಿಸಿ ಹೋಗಿದ್ದಾರೆ.

ಮಳೆಗಾಲದಲ್ಲಿ ಸಾವಿರಾರು ಪ್ರವಾಸಿಗರಿಂದ ಸದಾ ಗಿಜುಗುಡುವ ತಾಣವಾಗಿರುವ ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತದ ಮುಳ್ಳಯ್ಯನಗಿರಿ, ಮೂಡಿಗೆರೆ (Mullayyanagiri, Mudigere) ತಾಲೂಕಿನ ಬೈರಾಪುರ ಬಳಿಯ ಎತ್ತಿನಭುಜಕ್ಕೆ ಇದೀಗ ಪ್ರವಾಸಿಗರು ಹಾಗೂ ಚಾರಣಿಗರು ಬರದಂತೆ ನಿಷೇಧ ಹೇರಲಾಗಿದೆ. ಕೇವಲ‌ ಸೌಂದರ್ಯ ಸವಿಯುವದರ ಜೊತೆಗೆ ಇಲ್ಲಿ ಹುಚ್ಚಾಟವಾಡಿ, ಪ್ರಕೃತಿಯ ಒಡಲನ್ನೇ ಹಾಳು ಮಾಡುತ್ತಿದ್ದಾರೆ. ಇವೆಲ್ಲವೂ ಕೂಡ ಸ್ಥಳೀಯರು ಹಾಗೂ ಪ್ರಕೃತಿ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ. ಮುಳ್ಳಯ್ಯನಗಿರಿ ಮತ್ತು ಎತ್ತಿನಭುಜಕ್ಕೆ ಪ್ರವಾಸಿಗರು ಆಗಮಿಸುವುದನ್ನು ನಿಷೇಧ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

ರಾಜ್ಯ ಸರ್ಕಾರ ಇದೀಗ ಎತ್ತಿನಭುಜ, ಮುಳ್ಳಯ್ಯನಗಿರಿ ತಾಣಕ್ಕೆ ಚಾರಣವನ್ನು ನಿರ್ಬಂಧಿಸಿ ಆದೇಶ ಹೊರಡಿಸಿದೆ. ಈ ಮೂಲಕ ಪ್ರವಾಸಿಗರು ಹಾಗೂ ಚಾರಣಿಗರಿಗೆ ಶಾಕ್ ನೀಡಿದೆ.

Tags: chikkamagaluruMullayyanagiriNMDCPlastic Ban

Related News

ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಲಾಭ: ಪ್ಯಾಸಿವ್ ಆದಾಯದ ಹೊಸ ಮಾರ್ಗಗಳು
ಪ್ರಮುಖ ಸುದ್ದಿ

ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಲಾಭ: ಪ್ಯಾಸಿವ್ ಆದಾಯದ ಹೊಸ ಮಾರ್ಗಗಳು

April 22, 2026
ಮುಂದಿನ 7 ದಿನಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯ ಸಾಧ್ಯತೆ: ಹವಾಮಾನ ಇಲಾಖೆಯ ಮುನ್ಸೂಚನೆ
ಪ್ರಮುಖ ಸುದ್ದಿ

ಮುಂದಿನ 7 ದಿನಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯ ಸಾಧ್ಯತೆ: ಹವಾಮಾನ ಇಲಾಖೆಯ ಮುನ್ಸೂಚನೆ

April 22, 2026
ಇರಾನ್ ವಿರುದ್ಧ ದಾಳಿಗೆ ತಾತ್ಕಾಲಿಕ ‘ಬ್ರೇಕ್’: ಪಾಕಿಸ್ತಾನದ ಮಧ್ಯಸ್ಥಿಕೆಗೆ ಒಪ್ಪಿದ ಡೊನಾಲ್ಡ್ ಟ್ರಂಪ್
ದೇಶ-ವಿದೇಶ

ಇರಾನ್ ವಿರುದ್ಧ ದಾಳಿಗೆ ತಾತ್ಕಾಲಿಕ ‘ಬ್ರೇಕ್’: ಪಾಕಿಸ್ತಾನದ ಮಧ್ಯಸ್ಥಿಕೆಗೆ ಒಪ್ಪಿದ ಡೊನಾಲ್ಡ್ ಟ್ರಂಪ್

April 22, 2026
ಟೆಕ್ ದಿಗ್ಗಜ ಆಪಲ್‌ಗೆ ಹೊಸ ನಾಯಕ: ಟಿಮ್ ಕುಕ್ ನಿರ್ಗಮನ, ಜಾನ್ ಟೆರ್ನಸ್ ನೇಮಕ
ದೇಶ-ವಿದೇಶ

ಟೆಕ್ ದಿಗ್ಗಜ ಆಪಲ್‌ಗೆ ಹೊಸ ನಾಯಕ: ಟಿಮ್ ಕುಕ್ ನಿರ್ಗಮನ, ಜಾನ್ ಟೆರ್ನಸ್ ನೇಮಕ

April 21, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.