Doha : ಸೌದಿ ಅರೇಬಿಯಾ ತಂಡ ಕತಾರ್‌ನಲ್ಲಿ ನಡೆಯುತ್ತಿರುವ ಫಿಪಾ ವಿಶ್ವಕಪ್ 2022ರ (Players Will Get Rolls Royce) ನಾಕೌಟ್ ಹಂತಗಳಿಗೆ ಅರ್ಹತೆ ಪಡೆಯುವ ಉತ್ತಮ ಅವಕಾಶವನ್ನು ಹೊಂದಿದೆ.

ಲುಸೈಲ್ ಸ್ಟೇಡಿಯಂನಲ್ಲಿ ನಡೆದ ಟೂರ್ನಮೆಂಟ್‌ನ ಆರಂಭಿಕ ಪಂದ್ಯದಲ್ಲಿ ಸೌದಿ ಅರೇಬಿಯಾ ತಂಡ ಲಿಯೋನೆಲ್ ಮೆಸ್ಸಿಯ (Players Will Get Rolls Royce) ಅರ್ಜೆಂಟೀನಾವನ್ನು 2-1 ಗೋಲುಗಳಿಂದ ಸೋಲಿಸಿ, ವಿಶ್ವಕಪ್‌ನ ಇತಿಹಾಸದಲ್ಲಿ ಅತಿದೊಡ್ಡ ದಾಖಲೆ ನಿರ್ಮಿಸಿತು.
ಈ ದಿನವನ್ನು ಸೌದಿ ಅರೇಬಿಯಾ (Saudi Arabia) ರಾಷ್ಟ್ರೀಯ ರಜಾದಿನನ್ನಾಗಿ ಘೋಷಿಸಿತು.
ಈಗ ವರದಿಗಳ ಪ್ರಕಾರ ವಿಶ್ವಕಪ್ ತಂಡದ ಎಲ್ಲ ಸದಸ್ಯರಿಗೆ ತಲಾ 5,00,000 ಯುರೋ ಮೌಲ್ಯದ ರೋಲ್ಸ್ ರಾಯ್ಸ್(Rolls Royce) ಕಾರು ನೀಡಲು ಸೌದಿ ಅರೇಬಿಯಾದ ರಾಜ ಮನೆತನ ಮುಂದಾಗಿದೆ ಎನ್ನಲಾಗಿದೆ.
ಇದನ್ನೂ ಓದಿ : https://vijayatimes.com/ghost-moonlight-at-sunderban/
ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅಲ್ ಸೌದ್ ಅವರು ಭರವಸೆ ನೀಡಿದಂತೆ ಸೌದಿ ಅರೇಬಿಯಾದ ವಿಶ್ವಕಪ್ ಫುಟ್ಬಾಲ್ ಆಟಗಾರರಿಗೆ ತಲಾ ಒಂದು ರೋಲ್ಸ್ ರಾಯ್ಸ್ ನೀಡಲು ರಾಜಮನೆತನವು ಸಜ್ಜಾಗಿದೆ.
ಇನ್ನು ಸೌದಿ ಫುಟ್ಬಾಲ್ ಆಟಗಾರನೊಬ್ಬ ರಾಜಮನೆತನದಿಂದ ರೋಲ್ಸ್ ರಾಯ್ಸ್ ಪಡೆಯುವುದು ಇದೇ ಮೊದಲಲ್ಲ.

1994ರ ವಿಶ್ವಕಪ್‌ನಲ್ಲಿ ಬೆಲ್ಜಿಯಂ ವಿರುದ್ಧ ಸೌದಿ ಅರೇಬಿಯಾ 1-0 ಗೋಲುಗಳಿಂದ ಗೆದ್ದ ನಂತರ ಅಂದಿನ ರಾಜನಾಗಿದ್ದ ಸಯೀದ್ ಅಲ್-ಒವೈರಾನ್ ಐಷಾರಾಮಿ ಕಾರುಗಳನ್ನು ಆಟಗಾರರಿಗೆ ನೀಡಿದ್ದರು.
ಇನ್ನು ಸೌದಿ ಅರೇಬಿಯಾ ಅರ್ಜೆಂಟೀನಾವನ್ನು 2-1 ಗೋಲುಗಳಿಂದ ಸೋಲಿಸಿ ದಕ್ಷಿಣ ಅಮೆರಿಕಾದ ದೈತ್ಯರ 36 ಪಂದ್ಯಗಳ ಅಜೇಯ ಸರಣಿಯನ್ನು ಕೊನೆಗೊಳಿಸಿದರು.
https://fb.watch/h1sE-nALI2/ ಬೆಂಗಳೂರು : ಗಣಿಗಾರಿಕೆಯಿಂದ ನಾಶವಾಗುತ್ತಿದೆ ಶಾಲಾ-ಕಾಲೇಜು ಪ್ರದೇಶ!
ಸೌದಿ ಅರೇಬಿಯಾ ಫಿಪಾ ವಿಶ್ವಕಪ್‌ನಲ್ಲಿ ಎರಡನೇ ಅತ್ಯಂತ ಕಡಿಮೆ ಶ್ರೇಯಾಂಕಿತ ತಂಡವಾಗಿದ್ದು, ಅರ್ಜೆಂಟೀನಾ ವಿರುದ್ದದ ಗೆಲುವಿನೊಂದಿಗೆ ಎರಡನೇ ಸುತ್ತಿನಲ್ಲಿ ತನ್ನ ಸ್ಥಾನವನ್ನು ಕಾಯ್ದಿರಿಸಿದೆ. ಯಾವುದೇ ವಿದೇಶಿ ಮೂಲದ ಆಟಗಾರರಿಲ್ಲದ ಸೌದಿ ತಂಡದ ಸಾಧನೆ ಗಮನಾರ್ಹವಾಗಿದೆ.
- ಮಹೇಶ್.ಪಿ.ಎಚ್