download app

FOLLOW US ON >

Wednesday, June 29, 2022
Breaking News
ಸಿದ್ದರಾಮಯ್ಯ ಅಲೆಯೂ ಇಲ್ಲ, ಒಂದು ಗಟ್ಟಿಯಾದ ನೆಲೆಯೂ ಇಲ್ಲ : ಬಿಜೆಪಿನೇಪಾಳದಲ್ಲಿ ಪಾನಿಪುರಿ ನಿಷೇಧ ; ಯಾಕೆ ಎಂಬುದಕ್ಕೆ ಇಲ್ಲಿದೆ ಉತ್ತರಗವಿಮಠಕ್ಕೆ ಹರಿದು ಬರುತ್ತಿದೆ ದೇಣಿಗೆ, ಸರ್ಕಾರದಿಂದಲೂ 10 ಕೋಟಿ ಘೋಷಣೆGST ಹೊಸ ದರಗಳ ವಿವರಣೆ ; ವಸ್ತುಗಳ ಸಂಪೂರ್ಣ ಪಟ್ಟಿ ಇಲ್ಲಿದೆಬಿಜೆಪಿ ಅಂದ್ರೆ ಬಿಸ್ನೆಸ್ ಕ್ಲಾಸಿನ ಕಾಮಧೇನು : ಹೆಚ್.ಡಿಕೆಚಾಮುಂಡೇಶ್ವರಿ ಅಮ್ಮನವರ ಆಷಾಢ ಶುಕ್ರವಾರದ ದರ್ಶನಕ್ಕೆ ಉಚಿತ ಸರ್ಕಾರಿ ಬಸ್ ಸೇವೆಮಂಡ್ಯ ಜನರಿಗಾಗಿ ಮಾತ್ರ ನಾನು ರಾಜಕೀಯಕ್ಕೆ ಬಂದಿದ್ದೇನೆ ; ಸುಮಲತಾಕನ್ಹಯ್ಯಾ ಹತ್ಯೆ ; ಹಿಂಸೆ ಪರಿಹಾರ ಅಲ್ಲ, ಉತ್ತರವೂ ಅಲ್ಲ : ಸಿದ್ದರಾಮಯ್ಯನೂಪುರ್ ಶರ್ಮಾ ಹೇಳಿಕೆಗೆ ಬೆಂಬಲ ನೀಡಿದ ವ್ಯಕ್ತಿಯ ಶಿರಚ್ಛೇದ‘ಅಗ್ನಿವೀರ’ ಹುದ್ದೆಗೆ ನಿರೀಕ್ಷೆಗೂ ಮೀರಿ ಬಂದ ಅರ್ಜಿಗಳು
English English Kannada Kannada

ದಯವಿಟ್ಟು ಗೋವುಗಳನ್ನ ರಕ್ಷಿಸಿ. ರಾಜ್ಯದಲ್ಲಿ ಹೆಚ್ಚುತ್ತಿದೆ ಕಾಲು ಬಾಯಿ ರೋಗದ ಹಾವಳಿ. ವೈದ್ಯರಿಲ್ಲದೆ, ಚಿಕಿತ್ಸೆ ಸಿಗದೆ ನಿತ್ಯ ಸಾಯುತ್ತಿವೆ ನೂರಾರು ಗೋವುಗಳು.

Save cattles from deadly decease. Cattles of Karnataka are suffering from footmouth decease, but there is no vaccination, no doctors to treat them.

ದಯವಿಟ್ಟು ಮಾರಕ ಕಾಯಿಲೆಯಿಂದ ಗೋವುಗಳನ್ನು ರಕ್ಷಿಸಿ. ಕಾಲು ಬಾಯಿ ರೋಗಕ್ಕೆ ಸಾಯುತ್ತಿವೆ ನೂರಾರು ಗೋವುಗಳು. ಪಶು ವೈದ್ಯರ ಕೊರತೆಯಿಂದ ಸರಿಯಾದ ಚಿಕಿತ್ಸೆ ಸಿಗ್ತಿಲ್ಲ. ಎರಡು ವರುಷಗಳಿಂದ ಲಸಿಕೆಯೇ ಕೊಡದೆ ಅಧಿಕಾರಿಗಳ ನಿರ್ಲಕ್ಷ್ಯ

ಕೊರೋನಾ ಸಂಕಷ್ಟದ ನಂತರ ರಾಜ್ಯವನ್ನು ಕಾಡುತ್ತಿದೆ ಕಾಲುಬಾಯಿ ರೋಗ. ಈ ರೋಗದಿಂದ ರಾಜ್ಯ ಪಶಯ ಸಂಪತ್ತು ಅಪಾಯದಲ್ಲಿದೆ. ಈಗಾಗಲೇ ಈ ರೋಗಕ್ಕೆ ರಾಜ್ಯದ ನೂರಾರು ಜಾನುವಾರುಗಳು ಸಾವನ್ನಪ್ಪಿವೆ. ಕಾಲು ಬಾಯಿ ರೋಗ ಸೋಂಕು ರೋಗವಾಗಿದ್ದರಿಂದ ಅದು ಬೇಗನೇ ಹಸುಗಳಿಗೆ ಹರಡಿ ಅವುಗಳ ಪ್ರಾಣಕ್ಕೇ ಕುತ್ತು ತರುತ್ತಿದೆ.

ಈ ರೋಗ ನಮ್ಮ ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ಹಬ್ಬಿದೆ. ಅದ್ರೆ ಹಾಸನ ಜಿಲ್ಲೆಯಲ್ಲಿ ರೈತರು ಹೈನುಗಾರಿಕೆಯನ್ನು ಹೆಚ್ಚಾಗಿ ನೆಚ್ಚಿಕೊಂಡಿರುವುದರಿಂದ ಅಲ್ಲಿ ಈ ರೋಗ ತೀವ್ರ ಸ್ವರೂಪದಲ್ಲಿ ಹಬ್ಬಿ ಈಗಾಗಲೇ ಹತ್ತಾರು ಗೋವುಗಳು ಸಾವನ್ನಪ್ಪಿವೆ. ಅದ್ರಲ್ಲೂ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕಸಬಾ ಹೋಬಳಿಯ ಪಾರಸನಹಳ್ಳಿ, ಮುತ್ತಿಗೆ, ದಡದಹಳ್ಳಿ ಗ್ರಾಮಗಳಲ್ಲಿ ಕಾಲುಬಾಯಿ ರೋಗ ಉಲ್ಬಣಗೊಂಡಿದೆ. ಆದ್ರೆ ಈ ರೋಗಕ್ಕೆ ಸೂಕ್ತ ಚಿಕಿತ್ಸೆ ಕೊಡಲು ಸರ್ಕಾರಿ ಆಸ್ಪತ್ರೆಗಳಲ್ಲಿ ಪಶುವೈದ್ಯರೂ ಇಲ್ಲ, ಔಷಧಿಗಳೂ ಇಲ್ಲ ಅನ್ನೋದು ರೈತರ ದೂರು.

ರೈತರು ಖಾಸಗಿ ವೈದ್ಯರ ಬಳಿ ಹೋದ್ರೆ ಒಂದು ಸಲದ ಚಿಕಿತ್ಸೆಗೆ ಹತ್ತರಿಂದ ಹದಿನೈದು ಸಾವಿರ ರೂಪಾಯಿ ಬಿಲ್‌ ಮಾಡ್ತಾರೆ. ಔಷಧಿಗೂ ಪ್ರತ್ಯೇಕವಾಗಿ ಹತ್ತಾರು ಸಾವಿರ ರೂಪಾಯಿ ಖರ್ಚು ಮಾಡಬೇಕು. ಮೊದಲೇ ಸಂಕಷ್ಟದಲ್ಲಿರುವ ರೈತನಲ್ಲಿ ಇಷ್ಟೊಂದು ಖರ್ಚು ಮಾಡುವ ಶಕ್ತಿಯೂ ಆತನಲ್ಲಿ ಇಲ್ಲ. ಹಾಗಾಗಿ ಆತ ಅಸಹಾಯಕನಾಗಿ ತನ್ನ ಜಾನುವಾರುಗಳು ಸಾಯುವುದನ್ನು ಕಾಣಬೇಕಾಗಿದೆ. ಕಾಲುಬಾಯಿ ರೋಗ  ಒಂದು ಸೋಂಕು  ಕಾಯಿಲೆಯಾಗಿದ್ದು  ಸರ್ಕಾರ ಪ್ರತಿ ಆರು ತಿಂಗಳಿಗೊಮ್ಮೆ ಈ ಲಸಿಕೆಯನ್ನು ಹಾಕಬೇಕು. ಆದರೆ ಕಳೆದ ಎರಡು ವರ್ಷಗಳಿಂದಲೂ ಈ ಲಸಿಕೆ ಹಾಕಿಲ್ಲ. ಯಾವೊಬ್ಬ ಅಧಿಕಾರಿಯೂ ಈ ಕಡೆ ತಿರುಗಿ ನೋಡಿಲ್ಲ ಆದ್ದರಿಂದ ಈ ರೋಗ ಅರಕಲಗೂಡು ತಾಲೂಕಿನ ಎಲ್ಲಾ ಗ್ರಾಮಗಳಿಗೂ ವ್ಯಾಪಿಸಿದೆ ಕಾಯಿಲೆ ಉಲ್ಬಣಗೊಂಡಿದೆ ಇನ್ನೂ ಹೆಚ್ಚಿನ ಹಸುಗಳು ಸಾಯುವ ಸ್ಥಿತಿಯಲ್ಲಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದುರಂತ ಅಂದ್ರೆ ನಮ್ಮ ರಾಜ್ಯದಲ್ಲಿ ಪಶು ವೈದ್ಯರ ಕೊರತೆ ತೀವ್ರವಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಯ ಕೊರತೆಯೂ ಹೆಚ್ಚಿದೆ. ಆದ್ರೆ ಪಶುಸಂಗೋಪನಾ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಜನಪ್ರತಿನಿಧಿಗಳು ಈ ಕಡೆ ಗಮನವೇ ಹರಿಸುತ್ತಿಲ್ಲ. ರೈತರು ಜಾನುವಾರುಗಳನ್ನು ಸಾಕಿ ಅದರಿಂದ ಬರುವ ಆದಾಯದಲ್ಲಿ ಜೀವನ ಮಾಡುತ್ತಿದ್ದಾರೆ. ಆದ್ರೆ ಈಗ ಈ ಕಾಯಿಲೆಗೆ ಹಸುಗಳು ಸಾಯುತ್ತಿವೆ. ಕರೋನ ಬಂದು ರೈತರು ತುಂಬಾ ಸಂಕಷ್ಟದಲ್ಲಿದ್ದಾರೆ ಮೊದಲೇ ರೈತ ತುಂಬಾ ಸಾಲ ಮಾಡಿಕೊಂಡಿದ್ದಾನೆ  ಕಷ್ಟದ ಪರಿಸ್ಥಿತಿಯಲ್ಲಿ ರೈತ ಜೀವನ ಮಾಡುತ್ತಿದ್ದಾರೆ. ಹಾಗಾಗಿ ಸರ್ಕಾರ ಗೋವುಗಳ ರಕ್ಷಣೆಗೆ ಮುಂದಾಗಬೇಕು ಅನ್ನೋದು ರೈತರ ಆಗ್ರಹವಾಗಿದೆ.

Share News on

Share on facebook
Facebook
Share on google
Google+
Share on twitter
Twitter
Share on linkedin
LinkedIn
Share on whatsapp
WhatsApp
error: Content is protected !!

Submit Your Article