Prime Minister Narendra Modi will visit Poland from Today.
New Delhi: ಇಂದಿನಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (Narendra Modi) ಪೋಲೆಂಡ್ ಮತ್ತು ಉಕ್ರೇನ್ಗೆ ಪ್ರವಾಸ ಕೈಗೊಂಡಿದ್ದು, ಮೊರಾರ್ಜಿ ದೇಸಾಯಿ ಅವರ ನಂತರ 45 ವರ್ಷಗಳಲ್ಲಿ ಯುರೋಪಿಯನ್ (European) ದೇಶಕ್ಕೆ ಪ್ರಯಾಣಿಸಿದ ಮೊದಲ ಭಾರತೀಯ ಪ್ರಧಾನಿಯಾಗಿದ್ದಾರೆ.
ಪ್ರಧಾನಿ ಡೊನಾಲ್ಡ್ ಟಸ್ಕ್ (Donald Tusk) ಅವರ ಆಹ್ವಾನದ ಮೇರೆಗೆ ಮೋದಿ ಅವರು ಇಂದು (ಆಗಸ್ಟ್ 21) ಮತ್ತು ಆಗಸ್ಟ್ 22ರಂದು ಪೋಲೆಂಡ್ಗೆ ಭೇಟಿ ನೀಡಲಿದ್ದಾರೆ. 45 ವರ್ಷಗಳ ನಂತರ ಭಾರತದ ಪ್ರಧಾನಿ ಪೋಲೆಂಡ್ಗೆ (Polend) ಭೇಟಿ ನೀಡುತ್ತಿರುವ ಕಾರಣ ಇದು ಮಹತ್ವದ ಭೇಟಿಯಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ (August) 23ರಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಆಹ್ವಾನದ ಮೇರೆಗೆ ಉಕ್ರೇನ್ಗೆ ಅಧಿಕೃತ ಭೇಟಿಯನ್ನು ಕೈಗೊಳ್ಳಲಿದ್ದಾರೆ. ಇದು ಒಂದು ಹೆಗ್ಗುರುತಾಗಿದೆ ಮತ್ತು ಐತಿಹಾಸಿಕ ಭೇಟಿಯಾಗಿದೆ. ನಾವು ನಮ್ಮ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದ 30 ವರ್ಷಗಳ ನಂತರ ಭಾರತೀಯ ಪ್ರಧಾನಿಯೊಬ್ಬರು ಉಕ್ರೇನ್ಗೆ (Ukraine) ಭೇಟಿ ನೀಡುತ್ತಿರುವುದು ಇದೇ ಮೊದಲಾಗಿರುವುದರಿಂದ ಈ ಭೇಟಿ ಭಾರೀ ಮಹತ್ವ ಪಡೆದಿದೆ.
ಪೋಲಿಷ್ ಅಧ್ಯಕ್ಷ ಆಂಡ್ರೆಜ್ ದುಡಾ (Andrzej Duda) ಮತ್ತು ಭಾರತೀಯ ಸಮುದಾಯವನ್ನು ಭೇಟಿಯಾಗಲಿದ್ದಾರೆ. ಪೋಲಿಷ್ ರಾಜಧಾನಿ ವಾರ್ಸಾದಲ್ಲಿ ಮೋದಿಯವರಿಗೆ ಇಂದು ಅದ್ದೂರಿ ಸ್ವಾಗತ ನೀಡಲಾಗುವುದು. ಭೇಟಿಯ ಸಮಯದಲ್ಲಿ ಅವರು ವ್ಯಾಪಾರ ಮುಖಂಡರು ಮತ್ತು ಪ್ರಮುಖ ಪರಿಸರಶಾಸ್ತ್ರಜ್ಞರೊಂದಿಗೆ ಸಂವಾದ ನಡೆಸಲಿದ್ದಾರೆ.
ಪೋಲೆಂಡ್ನಲ್ಲಿ 25,000 ಭಾರತೀಯ ಸಮುದಾಯದ ಜನರು ಇದ್ದಾರೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಸುಮಾರು 5,000 ವಿದ್ಯಾರ್ಥಿಗಳು ಕೂಡ ಸೇರಿದ್ದಾರೆ. ಉಕ್ರೇನ್ನಿಂದ ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ‘ಆಪರೇಷನ್ ಗಂಗಾ’ ಸಮಯದಲ್ಲಿ ಪೋಲೆಂಡ್ ಸರ್ಕಾರ ಮತ್ತು ಜನರು ಅಮೂಲ್ಯವಾದ ಸಹಾಯವನ್ನು ನೀಡಿದ್ದರು. 2022ರಲ್ಲಿ ಪೋಲೆಂಡ್ ಮೂಲಕ 4,000ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಯಿತು.
ಪೋಲೆಂಡ್ನಿಂದ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ರೈಲ್ ಫೋರ್ಸ್ ಒನ್ (Rail Force One) ಎಂಬ ರೈಲಿನಲ್ಲಿ ಉಕ್ರೇನ್ ರಾಜಧಾನಿ ಕೈವ್ಗೆ ಪ್ರಯಾಣಿಸಲಿದ್ದಾರೆ. ಇದು ಸುಮಾರು 10 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ರಿಟರ್ನ್ ಟ್ರಿಪ್ ಅದೇ ಅವಧಿಯದ್ದಾಗಿರುತ್ತದೆ. 2022ರಲ್ಲಿ ಉಕ್ರೇನ್ನ ಕೈವ್ ರಷ್ಯಾದ ಪಡೆಗಳಿಂದ ದಾಳಿಗೊಳಗಾದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೇನ್ಗೆ ಇದೇ ಮೊದಲ ಬಾರಿಗೆ ಉಕ್ರೇನ್ಗೆ ಭೇಟಿ ನೀಡುತ್ತಿದ್ದಾರೆ.
ಹಾಗೇ, 30 ವರ್ಷಗಳ ಹಿಂದೆ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದ ನಂತರ ಭಾರತದ ಪ್ರಧಾನಿಯೊಬ್ಬರು ಉಕ್ರೇನ್ಗೆ ಇದು ಮೊದಲ ಭೇಟಿಯಾಗಿದೆ. ಕೈವ್ ಮೇಲೆ ರಷ್ಯಾ (Russia) ಹೊಸ ಮಿಲಿಟರಿ ಆಕ್ರಮಣವನ್ನು ನಡೆಸಿದ ಸಮಯದಲ್ಲಿ ಮೋದಿಯವರ ಭೇಟಿ ಮಹತ್ವ ಪಡೆದಿದೆ.
PM Modi to visit Poland and Ukraine Kannada
New Delhi: Prime Minister Narendra Modi has toured Poland and Ukraine from today, becoming the first Indian Prime Minister to travel to a European country in 45 years after Morarji Desai.
Modi will visit Poland today (August 21) and August 22 at the invitation of Prime Minister Donald Tusk. This is an important visit as Indian Prime Minister is visiting Poland after 45 years.
Prime Minister Narendra Modi will pay an official visit to Ukraine on August 23 at the invitation of Ukrainian President Volodymyr Zelensky. It is a landmark and a historical visit. This visit holds great significance as it is the first time that an Indian Prime Minister is visiting Ukraine after 30 years since we established our diplomatic relations.
Polish President Andrzej Duda will meet with the Indian community. Modi will be accorded a lavish welcome in the Polish capital Warsaw today. During the visit, he will interact with business leaders and prominent environmentalists.
There is an estimated 25,000 Indian community in Poland. This includes about 5,000 students. During 'Operation Ganga', the government and people of Poland provided invaluable help to evacuate Indian students from Ukraine. More than 4,000 Indian students were relocated through Poland in 2022.
Will travel. It takes about 10 hours. The return trip will be of the same duration. Prime Minister Narendra Modi is visiting Ukraine for the first time since Kyiv, Ukraine was attacked by Russian forces in 2022.
Also, this is the first visit by an Indian Prime Minister to Ukraine since the establishment of diplomatic relations between the two countries 30 years ago. Modi's visit comes at a time when Russia has launched a new military offensive against Kyiv.