Karnataka : ಜನರ ಸ್ಪಂದನೆಯೇ ಇಲ್ಲದ ಖಾಲಿ ಕುರ್ಚಿಗಳ ಸಮಾವೇಶಗಳನ್ನು ಮಾಡಿದ ರಾಜ್ಯ ಬಿಜೆಪಿ(PM Modi’s influence limited?) ಪಕ್ಷ ಮತ್ತೆ ಗೆಲ್ಲುತ್ತೇವೆ ಎನ್ನುವುದು ಪರಮಹಾಸ್ಯ. ಕುರ್ಚಿಗಳು ಮತ ಹಾಕುವುದಿಲ್ಲ ಎಂಬುದನ್ನು ಬಿಜೆಪಿ ನಾಯಕರು ಮನಗಾಣಲಿ. ಪ್ರಧಾನಿಯ ಮೆಗಾ ರೋಡ್ ಶೋ ಹಿಮಾಚಲ ಪ್ರದೇಶದಲ್ಲಿ ವಿಫಲವಾಗಿದ್ದೇಕೆ?

ತವರಿಗೆ ಮಾತ್ರ ಮೋದಿಯವರ(PM Modi’s influence limited?) ಪ್ರಭಾವ ಸೀಮಿತವಾಗಿದೆಯಲ್ಲವೇ? ಎಂದು ಟೀಕಿಸಿದೆ. ಈ ಕುರಿತು ಟ್ವೀಟ್(Tweet) ಮಾಡಿರುವ ಕಾಂಗ್ರೆಸ್,
ರಾಜ್ಯ ಬಿಜೆಪಿ ನಾಯಕರು ಚುನಾವಣಾ ದಿಕ್ಸೂಚಿಯನ್ನು ಗುಜರಾತಿನ ಫಲಿತಾಂಶದಿಂದಷ್ಟೇ ನೋಡುವ ಅಗತ್ಯವಿಲ್ಲ, ಹಿಮಾಚಲ ಪ್ರದೇಶದ ಫಲಿತಾಂಶದಿಂದಲೂ ನೋಡಲಿ.
ಬಿಜೆಪಿಯ ದುರಾಡಳಿತವನ್ನು ಹಿಮಾಚಲ ಪ್ರದೇಶದ ಜನತೆ ಹೇಗೆ ತಿರಸ್ಕರಿಸಿದ್ದಾರೋ ಹಾಗೆಯೇ ಕರ್ನಾಟಕದಲ್ಲೂ ಬಿಜೆಪಿಯನ್ನು ಕಸದ ಬುಟ್ಟಿಗೆ ಎಸೆಯುತ್ತಾರೆ ಎಂದು ರಾಜ್ಯ ಕಾಂಗ್ರೆಸ್ ಆರೋಪಿಸಿದೆ.
ಇನ್ನೊಂದೆಡೆ ಕಾಂಗ್ರೆಸ್(Congress) ಟ್ವೀಟ್‌ಗೆ ತಿರುಗೇಟು ನೀಡಿರುವ ರಾಜ್ಯ ಬಿಜೆಪಿ, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬುದು ಕೇವಲ ಪ್ರಧಾನಿ ಮೋದಿಯವರ ಆಶಯವಾಗಿರಲಿಲ್ಲ.
ಇದನ್ನೂ ನೋಡಿ : https://fb.watch/hiU-kdJEjD/
ಅದು ಸಮರ್ಥವಾಗಿ ಜಾರಿಯಾದ್ದರಿಂದಲೇ ಗುಜರಾತಿನ ಬುಡಕಟ್ಟು ಸಮುದಾಯದ 20 ಕ್ಷೇತ್ರಗಳಲ್ಲಿ ಬಿಜೆಪಿ(bjp) ಗೆಲುವು ಸಾಧಿಸಿರುವುದು. ಈ ಫಲಿತಾಂಶ ರಾಜ್ಯಕ್ಕೆ ಮಾದರಿ ಮತ್ತು ಸ್ಫೂರ್ತಿಯಾಗಿದೆ.
ಕರ್ನಾಟಕದ ಮುಂದಿನ ವಿಧಾನಸಭಾ ಚುನಾವಣೆ(Assembly election) ಗೆಲುವಿನ ಸೂತ್ರ ಗುಜರಾತಿನ ಗೆಲುವಿನಲ್ಲಿದೆ.
ಸಮರ್ಥ ನಾಯಕತ್ವ, ಸಮಗ್ರ ಅಭಿವೃದ್ಧಿ ಮಂತ್ರಗಳು, ಅದನ್ನು ಜನ-ಮನಕ್ಕೆ ತಲುಪಿಸಿರುವುದರಿಂದಲೇ ಬಿಜೆಪಿಗೆ ಜನರು ಆಶೀರ್ವದಿಸಿರುವುದು. ಇದು ಕರ್ನಾಟಕಕ್ಕೆ ಮಾದರಿ ಎಂದಿದೆ.
ಗುಜರಾತ್‌ನಂತೆಯೇ ಕರ್ನಾಟಕದಲ್ಲಿಯೂ ಬಿಜೆಪಿ ಹಲವು ಕ್ಷೇತ್ರಗಳಲ್ಲಿ ತನ್ನ ಬಲವನ್ನು ಹೆಚ್ಚಿಸಿಕೊಳ್ಳಲಿದೆ.

ಗುಜರಾತಿನ ಗೆಲುವು ಹಳೇ ಮೈಸೂರು(Mysore) ಭಾಗದಂಥ ಕಡೆಗಳಲ್ಲಿ ಕಮಲದ ಬೇರುಗಳನ್ನು ಗಟ್ಟಿಗೊಳಿಸುವ ಚಿಂತನೆಗೆ ಹಚ್ಚಿದೆ. ಗುಜರಾತಿನ ಈ ಗೆಲುವು ರಾಜ್ಯದಲ್ಲಿ ನವೋತ್ಸಾಹ ಮೂಡಿಸಿದೆ.
ಕಳೆದ ಬಾರಿಗಿಂತಲೂ ಈ ಚುನಾವಣೆಯಲ್ಲಿ 50ಕ್ಕೂ ಹೆಚ್ಚು ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಬಿಜೆಪಿಯ ಅಭಿವೃದ್ಧಿಯ ದಿವ್ಯ ಮಂತ್ರ ಯಶಸ್ವಿಯಾಗಿದೆ.
ಇದು ಕರ್ನಾಟಕದ ಮುಂದಿನ ಚುನಾವಣೆಗೆ ಗೆಲುವಿನ ರಹದಾರಿಯನ್ನು ತೋರಿದೆ. ಸರ್ವರಿಗೂ ಸಮಪಾಲನ್ನು ಹಂಚಿದ್ದರಿಂದಲೇ ಗುಜರಾತ್‌ನಲ್ಲಿ(Gujarath) ಬಿಜೆಪಿ ಪ್ರಚಂಡ ಗೆಲುವು ಸಾಧಿಸಿದೆ.
ಸೌರಾಷ್ಟ್ರ, ಉತ್ತರ ಗುಜರಾತ್‌ನಂಥ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿಯ ಯಜ್ಞ ನಡೆದಿದ್ದರಿಂದ ಕಮಲ ಅರಳಿದೆ.
ಇದನ್ನೂ ಓದಿ : https://vijayatimes.com/rashmika-mandanna-kannada-movie/
ಇದು ಕರ್ನಾಟಕದ ಪಾಲಿಗೆ ದಿಕ್ಸೂಚಿ. ಗುಜರಾತ್ ಚುನಾವಣೆಯಲ್ಲಿ ರಣಗೆಲುವು ಸಾಧಿಸಿರುವ ಬಿಜೆಪಿಗೆ ಪರಿಶಿಷ್ಟರ ಆಶೀರ್ವಾದ ದೊರೆತಿದೆ. ಪರಿಶಿಷ್ಟ ಪಂಗಡದ 23 ಕ್ಷೇತ್ರಗಳ ಪೈಕಿ 20 ರಲ್ಲಿ ಬಿಜೆಪಿ ಗೆಲುವಿನ ಛಾಪು ಮೂಡಿಸಿದೆ.
ಬಿಜೆಪಿಯ 27 ವರ್ಷಗಳ ಈ ಮ್ಯಾರಥಾನ್ ಆಡಳಿತಕ್ಕೆ ಅಭೂತಪೂರ್ವ ಜನಬೆಂಬಲ ಮುಂದುವರಿದಿದೆ ಎಂದು ಬಿಜೆಪಿ ತಿಳಿಸಿದೆ.
- ಮಹೇಶ್.ಪಿ.ಎಚ್