Gujarath: ವಿಧಾನಸಭಾ (Assembly) ಚುನಾವಣೆಯ ಎರಡನೇ ಹಂತದ ಮತದಾನ (PM received mother’s blessings) ಡಿಸೆಂಬರ್ 5ರಂದು ಗುಜರಾತ್ (Gujarath) ನಲ್ಲಿ ನಡೆಯಲಿದ್ದು ಪ್ರಧಾನಿ ನರೇಂದ್ರ ಮೋದಿ ಮತ ಚಲಾಯಿಸಲಿದ್ದಾರೆ.
ಇದರ ಸಲುವಾಗಿ ಗಾಂಧಿನಗರದಲ್ಲಿರುವ ನಿವಾಸಕ್ಕೆ ಭೇಟಿ ನೀಡಿ ತನ್ನ ತಾಯಿಯ ಆಶೀರ್ವಾದ ಪಡೆದರು.
ಇಂದು ಮೋದಿ ರಾಜ್ಯದಲ್ಲಿ 2ನೇ ಹಂತದ ಮತದಾನ 93 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.
ಕಳೆದ ಜೂನ್ 18ರಂದು ತಾಯಿ ಹೀರಾಬೆನ್ ಮೋದಿ (Heeraben Modi) ಅವರು 100ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ ಸಮಯದಲ್ಲಿ ಗಾಂಧಿನಗರದ ನಿವಾಸಕ್ಕೆ ಭೇಟಿ ನೀಡಿದ್ದರು.
ನರೇಂದ್ರ ಮೋದಿಯವರು ತಮ್ಮ ತಾಯಿಯ ಮೇಲೆ ಇಟ್ಟಿರುವ ಪ್ರೀತಿ ಮತ್ತು ಗೌರವ ಎಲ್ಲರಗೂ ತಿಳಿದಿರುವಂತದ್ದು. ತಾಯಿಯ ಪಾದ ಪೂಜೆ ಮಾಡಿ, ಸಿಹಿ ತಿನ್ನಿಸಿ ಜೊತೆಗೆ ಜನ್ಮದಿನದ ಶುಭಾಶಯವನ್ನು ತಿಳಿಸಿದರು.
ಇನ್ನು ಮೊದಲ ಹಂತದ ಚುನಾವಣೆ (PM received mother’s blessings) ಡಿಸೆಂಬರ್ 1ರಂದು ಮುಗಿದಿದ್ದು, 2ನೇ ಹಂತದ ಹಾಗೂ ಕೊನೆಯ ಹಂತದ ಚುನಾವಣೆ ಡಿಸೆಂಬರ್ 5ರಂದು ನಡೆಯಲಿದೆ.
ಇದನ್ನೂ ಓದಿ : https://vijayatimes.com/amazing-garden-of-india/
5 ತಿಂಗಳ ಬಳಿಕ ಚುನಾವಣೆ ಬೆನ್ನಲ್ಲೆ ಮೋದಿ ತಾಯಿಯ ಆಶೀರ್ವಾದ ಪಡೆದಿದ್ದು ಕುತೂಹಲಕ್ಕೆ ಎಡೆಮಾಡಿ ಕೊಟ್ಟಿದೆ. ಆಶೀರ್ವಾದ ಪಡೆದುಕೊಂಡ ನಂತರ ಮೋದಿ ಗಾಂಧಿನಗರದಲ್ಲಿ ಪಕ್ಷದ ಪ್ರಮುಖ ನಾಯಕರ ಸಭೆಗೆ ತೆರಳಿದರು.
ನರೇಂದ್ರ ಮೋದಿ ಅಹಮದಾಬಾದ್ನ (Ahmedabad) ಸಬರಮತಿ ವಿಧಾನಸಭಾ ಕ್ಷೇತ್ರದಲ್ಲಿ ಮತದಾನದ ಹಕ್ಕು ಹೊಂದಿದ್ದು,
ಡಿ.5 ರಂದು ತಾಯಿಯ ಜೊತೆ ಮತಚಲಾಯಿಸಲಿದ್ದಾರೆ. ಗುಜಾರಾತ್ ಅಸೆಂಬ್ಲಿ ಚುನಾವಣೆಯಲ್ಲಿ ಬ್ಯುಸಿಯಾಗಿದ್ದರು.
2017ರ ಅಸೆಂಬ್ಲಿ ಚುನಾವಣೆಯಲ್ಲಿ ಆಡಾಳಿತಾರೂಢ ಬಿಜೆಪಿಯು 51 ಸ್ಥಾನಗಳನ್ನು, ಕಾಂಗ್ರೆಸ್ 39 ಸ್ಥಾನಗಳನ್ನು ಗೆದ್ದುಕೊಂಡಿತ್ತು ಹಾಗೂ 3 ಸ್ಥಾನಗಳು ಸ್ವತಂತ್ರ ಅಭ್ಯರ್ಥಿಗಳಿಗೆ ಪಡೆದುಕೊಂಡಿತ್ತು.
ಪ್ರಧಾನಿ ಮೋದಿ ನಿವಾಸಕೆ ಭೇಟಿ ನೀಡಿ ಟೀ ಸೇವಿಸುತ್ತ ತಾಯಿ ಜೊತೆ ಕುಳಿತು ಸಮಲೋಚನೆ ನಡೆಸಿದರು.
27 ವರ್ಷಗಳಿಂದ ಗುಜರಾತ್ ನಲ್ಲಿ ಬಿಜೆಪಿ (BJP) ತಮ್ಮ ಆಡಳಿತವನ್ನು ನಡೆಸುತ್ತಿದ್ದು ಈ ಬಾರಿಯ ಚುನಾವಣೆ ಬಹಳ ಮಹತ್ವವನ್ನು ಪಡೆದುಕೊಂಡಿದ್ದೆ.
ನರೇಂದ್ರ ಮೋದಿಯವರೇ (Narendra Modi) ಪ್ರಚಾರದ ನೇತೃತ್ವ ವಹಿಸಿದ್ದರಿಂದ 31ರ್ಯಾಲಿಗಳು ,ಬಹಿರಂಗ ಸಭೆಗಳನ್ನು ನಡೆಸಿದ್ದಾರೆ.
ಆದರೆ ಚುನಾವಣೆ ಫಲಿತಾಂಶ ಏನೆಂದು ಎಲ್ಲರಿಗೂ ಕುತೂಹಲವನ್ನು ಹುಟ್ಟು ಹಾಕಿದೆ. ಇದೇ ತಿಂಗಳ ಡಿಸೆಂಬರ್ 8ರಂದು ಫಲಿತಾಂಶ ಪ್ರಕಟವಾಗಲಿದೆ.