Gujarat : ಸರ್ದಾರ್ ವಲ್ಲಭಭಾಯಿ ಪಟೇಲ್(Sardar Vallabhai Patel) ಅವರು ಇತರ ರಾಜರ ಅಧೀನದಲ್ಲಿದ್ದ ಎಲ್ಲ ರಾಜ್ಯಗಳ ವಿಲೀನದ ಸಮಸ್ಯೆಗಳನ್ನು ಪರಿಹರಿಸಿದರು. ಆದರೆ ಒಬ್ಬ ವ್ಯಕ್ತಿಗೆ ಕಾಶ್ಮೀರ(Kashmir) ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗಲಿಲ್ಲ(PM Reminds old politics) ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಪರೋಕ್ಷವಾಗಿ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು(Jawaharlal Nehru) ಅವರನ್ನು ಟೀಕಿಸಿದರು.

ಈ ವರ್ಷಾಂತ್ಯದಲ್ಲಿ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಗೆ ಮುನ್ನ ಗುಜರಾತ್ನ(Gujarat) ಆನಂದ್ ಜಿಲ್ಲೆಯಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಭಾರತದ ಮೊದಲ ಗೃಹ ಸಚಿವ ಸರ್ದಾರ್ ಪಟೇಲ್(PM Reminds old politics) ಅವರ ಹಾದಿಯಲ್ಲಿ ನಡೆಯುತ್ತಿರುವುದರಿಂದ ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಯಿತು.
ಸರ್ದಾರ್ ಪಟೇಲ್ ಅವರ ಕನಸಿನ ಯೋಜನೆಯಾದ ಸರ್ದಾರ್ ಸರೋವರ ಅಣೆಕಟ್ಟನ್ನು “ನಗರ ನಕ್ಸಲರು” ಸ್ಥಗಿತಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಟೀಕಿಸಿದರು.
“ಸರ್ದಾರ್ ಸಾಹೇಬರು ಎಲ್ಲಾ ರಾಜರ ಅಧೀನದ ರಾಜ್ಯಗಳನ್ನು ಭಾರತದೊಂದಿಗೆ ವಿಲೀನಗೊಳಿಸುವಂತೆ ಮನವೊಲಿಸಿದರು.
ಇದನ್ನೂ ಓದಿ : https://vijayatimes.com/supremecourt-about-hate-speech/
ಆದರೆ ಕಾಶ್ಮೀರದ ಈ ಒಂದು ಸಮಸ್ಯೆಯನ್ನು ಇನ್ನೊಬ್ಬ ವ್ಯಕ್ತಿಗೆ ನಿಭಾಯಿಸಲು ಸಾಧ್ಯವಾಗಲಿಲ್ಲ. ನಾನು ಸರ್ದಾರ್ ಸಾಹೇಬರ ಹೆಜ್ಜೆಗಳನ್ನು ಅನುಸರಿಸುತ್ತಿದ್ದೇನೆ.
ನಾನು ಕಾಶ್ಮೀರದ ಸಮಸ್ಯೆಯನ್ನು ಪರಿಹರಿಸಿ, ಸರ್ದಾರ್ ಪಟೇಲ್ ಅವರಿಗೆ ನಿಜವಾದ ಗೌರವ ಸಲ್ಲಿಸಲು ಕಾರಣವಾಗಿದೆ ಎಂದರು.

ಕಾಂಗ್ರೆಸ್(Congress) ಸದಸ್ಯರು ಸರ್ದಾರ್ ಪಟೇಲರ ಕುರಿತು ಮಾತನಾಡಲು ಬಂದರೆ, ಸರ್ದಾರ್ ಪಟೇಲ್ ಅವರ ಗೌರವಾರ್ಥವಾಗಿ ನಿರ್ಮಿಸಲಾದ ವಿಶ್ವದ ಅತಿ ಎತ್ತರದ ಏಕತಾ ಪ್ರತಿಮೆಗೆ ಅವರು ಭೇಟಿ ನೀಡಿದ್ದೀರಾ? ಎಂದು ಅವರನ್ನು ಕೇಳಿ.
ಸರ್ದಾರ್ ಸಾಹೇಬರು ತೀರಿಹೋಗಿ ಹಲವಾರು ದಶಕಗಳೇ ಕಳೆದಿವೆ, ಈಗ ಸ್ವಲ್ಪ ಔದಾರ್ಯವನ್ನು ತೋರಿಸಿ, ಸರ್ದಾರ್ ಸಾಹೇಬರ ಪಾದಗಳಿಗೆ ನಮಸ್ಕರಿಸಿ ಎಂದು ತಿಳಿಹೇಳಿ ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : https://vijayatimes.com/last-wadiyar-to-ride-on-ambari/
ಇಂದು ಗುಜರಾತಿನ ಜನರು ಸರ್ದಾರ್ ಸಾಹೇಬರನ್ನು ಗೌರವಿಸುವ ಕೆಲಸ ಮಾಡಿದ್ದಾರೆ ಮತ್ತು ಬಿಜೆಪಿಯು(BJP) ಅದರ ಬಗ್ಗೆ ಹೆಮ್ಮೆಪಡುತ್ತದೆ. ಏಕತಾ ನಗರದಲ್ಲಿ (ಕೆವಾಡಿಯಾ) ಏಕತಾ ಪ್ರತಿಮೆ ವಿಶ್ವದ ಹೆಮ್ಮೆ.
ಏಕತೆಯ ಪ್ರತಿಮೆ ಮಾತ್ರವಲ್ಲ, ಮಹಾತ್ಮ ಗಾಂಧಿಯವರ ಗೌರವಾರ್ಥವಾಗಿ ನಮ್ಮ ಸರ್ಕಾರವು ಐತಿಹಾಸಿಕ ದಂಡಿ ಮಾರ್ಚ್ ಮಾರ್ಗವನ್ನು ಅಭಿವೃದ್ಧಿಪಡಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು.
- ಮಹೇಶ್.ಪಿ.ಎಚ್