Ujjaini : ಮಧ್ಯಪ್ರದೇಶದ (Madhya Pradesh) ಉಜ್ಜಯಿನಿಯಲ್ಲಿ 856 ಕೋಟಿ ರೂಪಾಯಿ ವೆಚ್ಚದ ಮಹಾಕಾಳೇಶ್ವರ ದೇವಸ್ಥಾನ ಕಾರಿಡಾರ್ ಅಭಿವೃದ್ಧಿ ಯೋಜನೆಯ ಮೊದಲ ಹಂತವನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು ಸಂಜೆ ಅನಾವರಣಗೊಳಿಸಲಿದ್ದಾರೆ.

ಈ ಕುರಿತು ಟ್ವೀಟರ್‌ನಲ್ಲಿ ಬರೆದುಕೊಂಡಿರುವ ಪ್ರಧಾನಿ ಮೋದಿ ಅವರು, “ನಂಬಿಕೆ ಮತ್ತು ಆಧ್ಯಾತ್ಮಿಕತೆಯ ಪವಿತ್ರ ನಗರವಾದ ಉಜ್ಜಯಿನಿ (PM To Innagurate at Ujjaini) ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ.
ಇಂದು ಸಂಜೆ ಭವ್ಯವಾದ ಮತ್ತು ದೈವಿಕ ಶ್ರೀ ಮಹಾಕಾಲ್ ಲೋಕವನ್ನು ರಾಷ್ಟ್ರಕ್ಕೆ ಸಮರ್ಪಿಸುವ ಸೌಭಾಗ್ಯವನ್ನು ಹೊಂದುವಿರಿ. ಎಲ್ಲೆಲ್ಲೂ ಶಿವ” ಎಂದಿದ್ದಾರೆ.
ಇನ್ನು ತವರು ರಾಜ್ಯ ಗುಜರಾತ್ಗೆ (Gujarat) ಮೂರು ದಿನಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ, ಮಧ್ಯಾಹ್ನ ಅಹಮದಾಬಾದ್ನ ಅಸರ್ವಾದಲ್ಲಿ ಸಿವಿಲ್ ಆಸ್ಪತ್ರೆಯಲ್ಲಿ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಿ ನಂತರ ಉಜ್ಜಯಿನಿಗೆ ಪ್ರಯಾಣ ಬೆಳೆಸಲಿದ್ದಾರೆ.
ಇದನ್ನೂ ಓದಿ : https://vijayatimes.com/students-use-sharp-tools-for-video/
ಶ್ರೀ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಸಂಜೆ 5:45ಕ್ಕೆ ದರ್ಶನ ಮತ್ತು ಪೂಜೆ ನೆರವೇರಿಸಿ, ನಂತರ ಸಂಜೆ 6:30ರ ಸುಮಾರಿಗೆ ಮಹಾಕಾಲ ಲೋಕ ಕಾರಿಡಾರ್ ದೇಶಕ್ಕೆ ಸಮರ್ಪಣೆ ಮಾಡಿ, ನಂತರ 7:15ಕ್ಕೆ ಉಜ್ಜಯಿನಿಯಲ್ಲಿ ಸಾರ್ವಜನಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಇನ್ನು 900 ಮೀಟರ್ ಉದ್ದದ ಕಾರಿಡಾರ್, ಭಾರತದ ಅತ್ಯಂತ ಉದ್ದವಾದ ಧಾರ್ಮಿಕ ಕಾರಿಡಾರ್ (PM To Innagurate at Ujjaini) ಆಗಿದ್ದು, ಹಳೆಯ ರುದ್ರಸಾಗರ ಸರೋವರದ ಸುತ್ತ ಸುತ್ತುತ್ತದೆ.
ಇದನ್ನು ಪ್ರಾಚೀನ ಮಹಾಕಾಳೇಶ್ವರ ದೇವಾಲಯದ ಸುತ್ತಲೂ ಪುನರಾಭಿವೃದ್ಧಿ ಯೋಜನೆಯ ಭಾಗವಾಗಿ ಪುನರುಜ್ಜೀವನಗೊಳಿಸಲಾಗಿದೆ. ಮಹಾಕಾಳೇಶ್ವರ ದೇವಾಲಯವು ದೇಶದ 12 ‘ಜ್ಯೋತಿರ್ಲಿಂಗ’ಗಳಲ್ಲಿ ಒಂದಾಗಿದೆ.
ಇದನ್ನೂ ಓದಿ : https://vijayatimes.com/chethan-allegation-over-aap/
ವರ್ಷವಿಡೀ ದೇಶದ ನಾನಾ ಭಾಗಗಳಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಹೀಗಾಗಿ ಪ್ರಧಾನಿ ಮೋದಿ ಈ ಯೋಜನೆಯ ಕುರಿತು ವಿಶೇಷ ಆಸಕ್ತಿ ವಹಿಸಿ,
856 ಕೋಟಿ ರೂಪಾಯಿ ವೆಚ್ಚದಲ್ಲಿ ಮೊದಲ ಹಂತದಲ್ಲಿ ಈ ಕಾರಿಡಾರ್ ನಿರ್ಮಿಸಿದ್ದಾರೆ. ಇನ್ನು ಹಲವಾರು ಅಭಿವೃದ್ದಿ ಯೋಜನೆಗಳನ್ನು ಕೇಂದ್ರ ಸರ್ಕಾರ ಉಜ್ಜಯಿನಿಯಲ್ಲಿ ಹಮ್ಮಿಕೊಂಡಿದೆ.
- ಮಹೇಶ್.ಪಿ.ಎಚ್