Gujarat : ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಮುಂದಿನ ಮೂರು ದಿನಗಳ ಗುಜರಾತ್(Gujarat) ಪ್ರವಾಸಕ್ಕೆ ಸಜ್ಜಾಗಿದ್ದು, ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಭಾನುವಾರ ಅಕ್ಟೋಬರ್ 09 ರಂದು ಗುಜರಾತ್ ರಾಜ್ಯದಲ್ಲಿ 14,500 ಕೋಟಿ ರೂ.ಗಳ(PM to Launch 14.5k crore projects) ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.
ಅಕ್ಟೋಬರ್ 9 ರಂದು, ಸಂಜೆ 5:30 ಕ್ಕೆ, ಪ್ರಧಾನಿ ಮೋದಿ ಅವರು ಮೆಹ್ಸಾನಾದ ಮೊಧೇರಾದಲ್ಲಿ ಬಹು ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ.
ಅಕ್ಟೋಬರ್ 10 ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಪ್ರಧಾನಿ ನರೇಂದ್ರ ಮೋದಿಯವರು ಭರೂಚ್ನ ಅಮೋದ್ನಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ಮಧ್ಯಾಹ್ನ 3:15ಕ್ಕೆ ಅಹಮದಾಬಾದ್ನಲ್ಲಿ ಮೋದಿ ಶೈಕ್ಷಣಿಕ ಸಂಕುಲವನ್ನು ಉದ್ಘಾಟಿಸಲಿದ್ದಾರೆ. ಸಂಜೆ 5:30ಕ್ಕೆ ಜಾಮ್ನಗರದಲ್ಲಿ ಯೋಜನೆಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಅಕ್ಟೋಬರ್ 11 ರಂದು, ಮಧ್ಯಾಹ್ನ 2:15 ಕ್ಕೆ, ಅಹಮದಾಬಾದ್ನ ಸಿವಿಲ್ ಹಾಸ್ಪಿಟಲ್ ಅಸರ್ವಾದಲ್ಲಿ ಯೋಜನೆಗಳ ಶಂಕುಸ್ಥಾಪನೆಯನ್ನು ಪ್ರಧಾನಿ ಮೋದಿ ಮಾಡಲಿದ್ದಾರೆ.
https://youtu.be/jEvrVhb_RAY ನೀರಿಲ್ಲದೆ ಭತ್ತ ಬೆಳೀಬಹುದು ಗೊತ್ತಾ? Grow paddy without water.
ನಂತರ ಅವರು ಉಜ್ಜಯಿನಿಯ ಶ್ರೀ ಮಹಾಕಾಳೇಶ್ವರ ದೇವಸ್ಥಾನಕ್ಕೆ ಪ್ರಯಾಣಿಸಿ, ಅಲ್ಲಿ ಅವರು ಸಂಜೆ 5:45 ಕ್ಕೆ ಪೂಜೆ ಸಲ್ಲಿಸಲಿದ್ದಾರೆ.
ಇದರ ನಂತರ ಸಂಜೆ 6:30ಕ್ಕೆ ಶ್ರೀ ಮಹಾಕಾಲ್ ಲೋಕದ (ದೇವಸ್ಥಾನದ ಆವರಣವನ್ನು ಏಳು ಬಾರಿ ವಿಸ್ತರಿಸುವ ಯೋಜನೆ) ಸಮರ್ಪಣೆ, ನಂತರ 7:15ಕ್ಕೆ ಉಜ್ಜಯಿನಿಯಲ್ಲಿ ಸಾರ್ವಜನಿಕ ಕಾರ್ಯಕ್ರಮ ನಡೆಯಲಿದೆ.
ನಂತರ ಪ್ರಧಾನಿ ಮೋದಿ ಅಲ್ಲಿಂದ ಮಧ್ಯಪ್ರದೇಶಕ್ಕೆ ತೆರಳಲಿದ್ದಾರೆ. ಇದಕ್ಕೂ ಮುನ್ನ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ನ ಸೂರತ್ನಲ್ಲಿ 3,400 ಕೋಟಿ ರೂಪಾಯಿಗೂ(PM to Launch 14.5k crore projects) ಹೆಚ್ಚು ಮೊತ್ತದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಎರಡು ದಿನಗಳ ರಾಜ್ಯ ಪ್ರವಾಸದಲ್ಲಿರುವ ಅವರು ರಾಜ್ಯದಲ್ಲಿ ಪ್ರಥಮ ಬಾರಿಗೆ ನಡೆಯುತ್ತಿರುವ 36ನೇ ರಾಷ್ಟ್ರೀಯ ಕ್ರೀಡಾಕೂಟವನ್ನು ಕೂಡ ಉದ್ಘಾಟಿಸಿದರು.
ಇದನ್ನೂ ಓದಿ : https://vijayatimes.com/history-of-angkor-wat-temple/