POCSO sexual harassment case can be filed against women too: Delhi High Court
New Delhi: ದೆಹಲಿ ಹೈಕೋರ್ಟ್ (Delhi High court), ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯಿದೆಯಡಿ (ಪೋಕ್ಸೊ ಕಾಯಿದೆ) ಪುರುಷ ಮತ್ತು ಮಹಿಳೆ ಇಬ್ಬರ ವಿರುದ್ಧವೂ ಲೈಂಗಿಕ ಪ್ರವೇಶಿಕೆ ದೌರ್ಜನ್ಯದ ಅಪರಾಧ ಹೊರಿಸಬಹುದಾಗಿದೆ ಎಂದು ಹೇಳಿದೆ. ನ್ಯಾಯಮೂರ್ತಿ ಅನುಪ್ ಜೈರಾಮ್ ಭಂಭಾನಿ (Anup Jairam Bhambhani) ಅವರು, ಪೋಕ್ಸೊ ಸೆಕ್ಷನ್ಗಳನ್ನು ಓದಿದಾಗ ಪೋಕ್ಸೊ ಕಾಯಿದೆಯ ಸೆಕ್ಷನ್ (Section) 3ರಲ್ಲಿ ಇರುವ ‘ಅವನು’ ಎಂಬ ಸರ್ವನಾಮ ಕೇವಲ ಪುರುಷ ಆರೋಪಿ ಎಂಬ ನಿರ್ಬಂಧಿತ ಅರ್ಥ ಪಡೆಯುವುದಿಲ್ಲ ಬದಲಾಗಿ ಮಹಿಳೆಯನ್ನು ಸಹ ಆರೋಪಿ ಎಂದು ಪರಿಗಣಿಸಬಹುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.
POCSO Act Against Ladies Today Kannada
ಇನ್ನು ಆ ಪದ ಯಾವುದೇ ಅಪರಾಧಿಯನ್ನು ಅವರ ಲಿಂಗ ಆಧರಿಸದೆ ಅಪರಾಧಿ ಎಂದು ಪರಿಗಣಿಸುತ್ತದೆ ಎಂಬುದಾಗಿ ಅರ್ಥೈಸಿಕೊಳ್ಳುವಂತೆ ಹೇಳುತ್ತದೆ ಎಂದಿರುವ ನ್ಯಾಯಾಲಯ. ಈ ಸೆಕ್ಷನ್ (Section) ದೇಹದಲ್ಲಿ ಯಾವುದೇ ವಸ್ತುವನ್ನು ಲೈಂಗಿಕವಾಗಿ ಪ್ರವೇಶಿಸುವ ಮೂಲಕ ನಡೆಸುವ ಲೈಂಗಿಕ ಕ್ರಿಯೆಯ ಬಗ್ಗೆ ಹೇಳುವುದರಿಂದ ಕೇವಲ ಕೆಲವು ಅಪರಾಧಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ ಎನ್ನುವುದು ತರ್ಕಬದ್ಧವಲ್ಲ ಎಂಬುದಾಗಿ ಪೀಠ ವಿವರಿಸಿತು.
ಅದರಂತೆ ಪೋಕ್ಸೊ ಕಾಯಿದೆಯ (POCSO Act) ಸೆಕ್ಷನ್ 3 ಮತ್ತು 5ರಲ್ಲಿ ಉಲ್ಲೇಖಿಸಲಾದ ಪದ ಅಪರಾಧಿಯ ಲಿಂಗವನ್ನು ಲೆಕ್ಕಿಸದೆ ಮಕ್ಕಳ ಮೇಲೆ ನಡೆಸುವ ಕೃತ್ಯವನ್ನು ಅಪರಾಧ ಎಂದು ಪರಿಗಣಿಸುವಂತೆ ಸೂಚಿಸುತ್ತದೆ ಎಂಬುದಾಗಿ ನ್ಯಾಯಾಲಯ ತಿಳಿಸಿದೆ.
POCSO ಎಂಬುದು 2012 ರ ಲೈಂಗಿಕ ಅಪರಾಧಗಳ ವಿರುದ್ಧ ಮಕ್ಕಳ ರಕ್ಷಣೆಯ ಸಂಕ್ಷಿಪ್ತ ರೂಪವಾಗಿದೆಅದರ ಜಾರಿಯೊಂದಿಗೆ, ಭಾರತವು ಈಗ ಅತ್ಯಂತ ಸಮಗ್ರ ಮತ್ತು ಮಹತ್ವಾಕಾಂಕ್ಷೆಯ ಕಾನೂನುಗಳಲ್ಲಿ ಒಂದನ್ನು ಹೊಂದಿದೆ.
ಅದು ಲೈಂಗಿಕ ಅಪರಾಧಗಳಿಗೆ ಬಲಿಯಾದ ಮಕ್ಕಳಿಗೆ ನ್ಯಾಯವನ್ನು ಅನುಮತಿಸುತ್ತದೆ ಮಾತ್ರವಲ್ಲದೆ ಗಣನೆಗೆ ತೆಗೆದುಕೊಳ್ಳುತ್ತದೆ.ಪೋಕ್ಸೊ ಕಾಯಿದೆಯ ಸೆಕ್ಷನ್ 3 ಮತ್ತು 5ರಲ್ಲಿ ಉಲ್ಲೇಖಿಸಿರುವಂತೆ ತಾನು ಅಪರಾಧ ಮಾಡಿಲ್ಲ. ಸೆಕ್ಷನ್ಗಳ ವ್ಯಾಖ್ಯಾನ ʼಅವನುʼ ಎಂಬ ಸರ್ವನಾಮವನ್ನು ಬಳಸುವುದರಿಂದ ಕಾಯಿದೆಯನ್ನು ಸ್ತ್ರೀ ವಿರುದ್ಧ ಪ್ರಯೋಗಿಸುವಂತಿಲ್ಲ ಎಂದು ಸುಂದರಿ ಗೌತಮ್ (Sundari Goutham) ಎಂಬ ಮಹಿಳೆ ವಾದಿಸಿದ್ದರು. ಆದರೆ ವಾದ ತಿರಸ್ಕರಿಸಿದ ನ್ಯಾಯಾಲಯ ಮಹಿಳೆ ವಿರುದ್ಧ ಈ ಸೆಕ್ಷನ್ಗಳಡಿ ನಿಗದಿಪಡಿಸಲಾಗಿದ್ದ ಆರೋಪಗಳನ್ನು ಎತ್ತಿ ಹಿಡಿಯಿತು.
New Delhi: The Delhi High court has said that under the Protection of Children from Sexual Offenses Act (POCSO Act) both men and women can be charged with sexual assault. Justice Anup Jairam Bhambhani said in the order that when the POCSO sections are read, the pronoun 'he' in Section 3 of the POCSO Act does not have the restricted meaning of only a male accused but a woman can also be considered an accused.
The court said that the word should be interpreted as meaning that any criminal is considered a criminal regardless of his gender. The bench explained that it is illogical that this section is limited to only certain offenses as it talks about sexual act by sexually entering any object in the body.
Accordingly, the court said that the wording mentioned in Sections 3 and 5 of the POCSO Act indicates that the act committed against children irrespective of the sex of the offender is considered a crime.
POCSO is an acronym for Protection of Children Against Sexual Offenses Act 2012. With its enactment, India now has one of the most comprehensive and ambitious laws
It not only allows justice for child victims of sexual offenses but also takes into account that he has not committed an offense as mentioned in Sections 3 and 5 of the POCSO Act. Sundari Goutham, a woman, argued that the Act cannot be invoked against a woman because of the use of the pronoun ``he'' in the interpretation of the sections. But rejecting the argument, the court upheld the charges framed under these sections against the woman.