Bengaluru: ಕಳೆದ ಕೆಲ ದಿನಗಳಿಂದ ಬೆಂಗಳೂರಿನ ರಸ್ತೆಗಳಲ್ಲಿ ವೀಲಿಂಗ್ ಪುಂಡರ ಹಾವಳಿ (Wheeling thugs plague the roads of Bangalore) ಮಿತಿಮೀರಿರುವ ಹಿನ್ನೆಲೆಯಲ್ಲಿ ಪೊಲೀಸರು ವಿಶೇಷ ಬೇಟೆಯಾಡಿದ್ದಾರೆ (The police are on a special hunt) . ಈ ವೇಳೆ ಡ್ರಗ್ಸ್ ಸೇವಿಸಿ (Take drugs) ವೀಲಿಂಗ್ ಮೋಜು ಮಸ್ತಿಯಲ್ಲಿ ತೊಡಗಿದ್ದ 56 ಮಂದಿ ಪುಂಡರನ್ನು ಪೊಲೀಸರು ಬಂಧಿಸಿದ್ದಾರೆ (Police arrested) . ಡಿಸೆಂಬರ್ ಮೊದಲಿನಿಂದ ಇಲ್ಲಿವರೆಗೆ ವೀಲಿಂಗ್ ಅಪರಾಧಿಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿರುವುದಾಗಿ ಪೊಲೀಸ್ ಕಮೀಷನರ್ ಬಿ.ದಯಾನಂದ್ (Police Commissioner B. Dayanand) ಮಾಹಿತಿ ನೀಡಿದ್ದಾರೆ.
ರಾಜ್ಯ ರಾಜಧಾನಿಯಲ್ಲಿ ಸಂಚಾರ (Traffic in the state capital) ದಟ್ಟಣೆಯೇ ಒಂದು ದೊಡ್ಡ ಸಮಸ್ಯೆಯಾಗಿದ್ದು, ಇದರ ನಿಯಂತ್ರಣಕ್ಕೆ ಹರಸಾಹಸ ಪಡಬೇಕಿರುವ ಸಂದರ್ಭದಲ್ಲಿ ಬೈಕ್ ವೀಲಿಂಗ್ (Bike wheeling) ಮತ್ತೊಂದು ಸಮಸ್ಯೆಯಾಗಿತ್ತು. ಅದು ಜನರ ಜೀವಕ್ಕೂ ಸಂಚಕಾರವನ್ನು ತಂದೊಡ್ಡುತಿತ್ತು (It brought movement to life) .ನಂಬರ್ ಪ್ಲೇಟ್ ಬಳಸದೆ ವೀಲಿಂಗ್ ಮಾಡಿ ಪೊಲೀಸರ ಕಣ್ಣು ತಪ್ಪಿಸಬಹುದು ಎಂದು ಪುಂಡರು ಭಾವಿಸಿದ್ದರು.ಆದರೆ ಇದೀಗ ಇದುಮೇಖ್ರಿ ಸರ್ಕಲ್ ಅಂಡರ್ ಪಾಸ್ ರಸ್ತೆ (Mekhri Circle Under Pass Road) , ಚಿಕ್ಕಜಾಲ ಏರ್‌ಪೋರ್ಟ್ ರಸ್ತೆ (Chikkajala Airport Road) , ತುಮಕೂರು ರಸ್ತೆ (Tumkur Road) , ಬಿಇಎಲ್ ಸರ್ಕಲ್ ಅಂಡರ್ ಪಾಸ್ (BEL Circle Under Pass) ರಸ್ತೆ, ಸಿಟಿ ಮಾರ್ಕೆಟ್ ಫ್ಲೈ ಓವರ್ (City Market Flyover) , ಸುಮನಹಳ್ಳಿ ರಿಂಗ್ ರೋಡ್ (Sumanahalli Ring Road) , ನೈಸ್ ರಸ್ತೆ (Nice Road) , ಔಟರ್ ರಿಂಗ್ ರೋಡ್, ನಾಗವಾರ ಮಾನ್ಯತಾ ಟೆಕ್ ಪಾರ್ಕ್ ರಸ್ತೆಗಳು ವೀಲಿಂಗ್ ಮಾಡುವವರಿಗೆ ಹಾಟ್ ಸ್ಪಾಟ್ ಆಗಿತ್ತು .ಅದರಲ್ಲೂ ಏರ್‌ಪೋರ್ಟ್ ರಸ್ತೆ, ರಾಷ್ಟ್ರೀಯ ಹೆದ್ದಾರಿಗಳು ಸಹ ಬೈಕ್ ಸ್ಟಂಟ್ ಮಾಡುವವರ ಫೇವರೆಟ್ ಜಾಗವಾಗಿತ್ತು. ಆದರೆ ಪೊಲೀಸರ ಚಾಣಾಕ್ಷ ತನದಿಂದ ವೀಲಿಂಗ್ ಪುಂಡರು ಆರೆಸ್ಟ್ ಆಗಿದ್ದಾರೆ.
ಡಿಸೆಂಬರ್ 2ರಿಂದ 12ರವರೆಗೆ ವೀಲಿಂಗ್ ಅಪರಾಧಿಗಳನ್ನು (Wheeling criminals) ತಡೆಯಲು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ 56 ಜನರನ್ನು ಬಂಧಿಸಲಾಗಿದೆ. ಅವರಲ್ಲಿ 4 ಮಂದಿ ಡ್ರಗ್ಸ್ ಸೇವಿಸಿದ್ದರು. ಅವರ ವಿರುದ್ಧ NDPS ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. ಈ ಮೂಲಕ ವೀಲಿಂಗ್ ಪುಂಡರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.