Hospȩt Vijayanagar : ಕಳೆದ ಒಂದು ವಾರದ ಹಿಂದೆ ಹೊಸಪೇಟೆಯಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಅವರ ಮೇಲೆ ಚಪ್ಪಲಿ ಎಸೆದು ಉದ್ಧಟತನ ಮೆರದ ಆರೋಪಿಗಳನ್ನು ಇದೀಗ ಕರ್ನಾಟಕ(Police Arrested who throws slippers) ರಾಜ್ಯ ಪೊಲೀಸರು ಬಂಧಿಸಿದ್ದಾರೆ ಎಂದು ಬಹು ಮಾಧ್ಯಮ ವರದಿ ಮಾಡಿದೆ.

ಹಿಂದೂಸ್ಥಾನ್ ಪತ್ರಿಕೆ(Hindustan newspaper) ನೀಡಿರುವ ವರದಿ ಅನುಸಾರ,
ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಮೇಲೆ ಚಪ್ಪಲಿ ಎಸೆದ ಆರೋಪದ ಮೇಲೆ ಕರ್ನಾಟಕ ಪೊಲೀಸರು ಮೂವರನ್ನು ಬಂಧಿಸಿದ್ದಾರೆ ಎಂದು ಬಹು ಮಾಧ್ಯಮ ವರದಿ ಮಾಡಿದೆ ಎಂದು ಉಲ್ಲೇಖಿಸಿದೆ.
ಈ ಘಟನೆಯ ನಂತರ, ಕರ್ನಾಟಕ ಪೊಲೀಸರು ಉದ್ದೇಶಪೂರ್ವಕ ಕೃತ್ಯದ ಹಿಂದಿನ ಅಪರಾಧಿಗಳನ್ನು ಹಿಡಿಯಲು ಮೂರು ವಿಭಿನ್ನ ತಂಡಗಳನ್ನು ರಚಿಸಿದ್ದರು ಎನ್ನಲಾಗಿದೆ.
ಹೊಸಪೇಟೆಯ ವೇದಿಕೆಯೊಂದರಲ್ಲಿ ನಟ ದರ್ಶನ್ ಅವರು ತಮ್ಮ ಮುಂಬರುತ್ತಿರುವ ಕ್ರಾಂತಿ(Police Arrested who throws slippers) ಚಿತ್ರದ 2ನೇ ಹಾಡನ್ನು ತಮ್ಮ ಅಭಿಮಾನಿಗಳಿಂದ ಬಿಡುಗಡೆಗೊಳಿಸಲು ಆಗಮಿಸಿದ್ದರು.
ಇದನ್ನೂ ಓದಿ : https://vijayatimes.com/gujarath-terrible-accident/
ಈ ವೇಳೆ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಅಭಿಮಾನಿಗಳ ಮಧ್ಯೆ ನಿಂತು ಹಾಡನ್ನು ಬಿಡುಗಡೆಗೊಳಿಸುವ ವೇಳೆ ಕಿಡಿಗೇಡಿಗಳ ಗುಂಪೊಂದು ದರ್ಶನ್ ಅವರ ಮೇಲೆ ಚಪ್ಪಲಿ ಎಸೆದರು.
ಈ ಘಟನೆ ಬಳಿಕ ದೊಡ್ಡ ವಿವಾದ ಸೃಷ್ಟಿಯಾಗಿ, ಅಭಿಮಾನಿಗಳ ನಡುವೆ ಸಂಘರ್ಷ ಹುಟ್ಟಿಕೊಂಡಿತು.
ಸದ್ಯ ಈ ಆರೋಪದ ಮೇಲೆ ಕರ್ನಾಟಕ ಪೊಲೀಸರು(Karnataka Police) ಮೂವರನ್ನು ಬಂಧಿಸಿದ್ದಾರೆ ಎಂದು ಬಹು ಮಾಧ್ಯಮ ವರದಿ ಮಾಡಿದೆ.
ಚಪ್ಪಲಿ ತಮ್ಮ ದೇಹಕ್ಕೆ ತಗುಲಿದ್ದಕ್ಕೆ ಬೇಸರಗೊಳ್ಳದ ನಟ ದರ್ಶನ್, ಇದು ನಿಮ್ಮ ತಪ್ಪಲ್ಲ ಸಹೋದರ, ತೊಂದರೆ ಇಲ್ಲ” ಎಂದು ಹೇಳಿ, ಪೊಲೀಸರ ಅವರ ಸರ್ಪಗಾವಲಿನಲ್ಲಿ ಸ್ಥಳದಿಂದ ಹೊರ ನಡೆದರು.
ಇದನ್ನೂ ಓದಿ : https://vijayatimes.com/state-congress-controversial-statement/
ಘಟನೆಯ ಆಕ್ರೋಶ ಹೊರಹೊಮ್ಮುತ್ತಿದ್ದಂತೆ ನಟ ದರ್ಶನ್ ಅವರು ಹೇಳಿದ ಮಾತಿಗೆ ಮತ್ತು ತಾಳ್ಮೆಗೆ ಅನೇಕ ಅಭಿಮಾನಿಗಳು ಹಾಗೂ ಜನಸಾಮಾನ್ಯರು ಶ್ಲಾಘನೆ ವ್ಯಕ್ತಪಡಿಸಿದರು.
ಈ ಘಟನೆಗೂ ಮುನ್ನ ದರ್ಶನ್ ಅವರು ಕ್ರಾಂತಿ ಚಿತ್ರದ ಪ್ರಚಾರಕ್ಕಾಗಿ ಸಾಮಾಜಿಕ ಜಾಲತಾಣದ ಯೂಟ್ಯೂಬ್(YouTube) ಸಂದರ್ಶನವೊಂದರಲ್ಲಿ ಮಾತನಾಡುವಾಗ,

‘ಅದೃಷ್ಟ ದೇವತೆ’ ಎಂದು ಮುಂದುವರೆಸಿದ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಯಿತು.
ನಟ ದರ್ಶನ್ ಅವರಿಗೆ ಚಪ್ಪಲಿ ಎಸೆದ ಆರೋಪಿಗಳು ಅವರ ಈ ಹೇಳಿಕೆಯಿಂದ ಪ್ರಚೋದನೆಗೊಂಡು ಈ ದುಷ್ಕೃತ್ಯ ಎಸಗಲು ಒಂದು ಕಾರಣವಾಗಿದೆ ಎಂದು ಹಲವು ಸುದ್ದಿ ವಾಹಿನಿಗಳು ಈ ಹಿಂದೆ ವರದಿ ಮಾಡಿತ್ತು.