New Delhi : ದೆಹಲಿ ಮಾಲ್ ರಸ್ತೆಯ ವ್ಯಾಲೆಟ್ ಪಾರ್ಕಿಂಗ್ ಸಹಾಯಕನ (Police Daughter Rash Driving) ಪಾದಗಳ ಮೇಲೆ ಕಾರು ಹತ್ತಿಸಿದ್ದಲ್ಲದೇ,
ಪಾದಚಾರಿಗಳ ಪಥದಲ್ಲಿ ಕಾರು ಚಲಾಯಿಸಿದ್ದಕ್ಕಾಗಿ ಪೊಲೀಸ್ ಅಧಿಕಾರಿಯೊಬ್ಬರ ಮಗಳ ವಿರುದ್ಧ ಪೊಲೀಸರು ಶಿಸ್ತಿನ ಕ್ರಮ ಜರುಗಿಸಿದ್ದಾರೆ.
ಇದನ್ನೂ ಓದಿ : https://vijayatimes.com/health-benefits-of-ridge-gourd/
ದಕ್ಷಿಣ ದೆಹಲಿ ಪೊಲೀಸರು ಮಹಿಳೆಯ ವಿರುದ್ಧ ಸಾಕೇತ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 279 (ಅಪವೇಗದ ಚಾಲನೆ ಅಥವಾ ಸವಾರಿ) ಮತ್ತು 337 (ಮಾನವ ಜೀವಕ್ಕೆ ಅಪಾಯವನ್ನುಂಟುಮಾಡುವ ಕೃತ್ಯದಿಂದ ಗಾಯಗೊಳಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಕ್ಟೋಬರ್ 16 ರಂದು ಈ ಘಟನೆ ನಡೆದಿದ್ದು, ಪೊಲೀಸ್ ಅಧಿಕಾರಿಯೊಬ್ಬರ ಮಗಳು ತಡರಾತ್ರಿ ಪಾರ್ಕಿಂಗ್ ಸ್ಥಳದಿಂದ ಹೊರಬಂದು, ತಮ್ಮ ಕಾರನ್ನು ಅಡ್ಡಾದಿಡ್ಡಿಯಾಗಿ ಓಡಿಸಿದ್ದಲ್ಲದೇ, ಪಾರ್ಕಿಂಗ್ ಅಟೆಂಡೆಂಟ್ ಮೇಲೆ ಕಾರನ್ನು ಹತ್ತಿಸಿದ್ದಾರೆ.
ಆದಾಗ್ಯೂ, ಅಕ್ಟೋಬರ್ 20 ರಂದು ಪೊಲೀಸರು ಮಹಿಳೆಯ ವಿರುದ್ಧ (Police Daughter Rash Driving) ಎಫ್ಐಆರ್(FIR) ದಾಖಲಿಸಿದ್ದಾರೆ.
https://youtu.be/sfkpJuX5qVs ಸಿಹಿ-ಕಹಿ ಸತ್ಯ! ಸ್ವೀಟ್ ಅಲ್ಲ ರೋಗಗಳ ಕೂಟ.
ಪಾರ್ಕಿಂಗ್ ಅಟೆಂಡೆಂಟ್ (Parking Attendent) ಕಾಲಿಗೆ ಗಾಯಗಳಾಗಿದ್ದರಿಂದ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೂಲಗಳ ಪ್ರಕಾರ, ಕಾರು ಚಲಾಯಿಸುತ್ತಿದ್ದ ಮಹಿಳೆ,
ದಕ್ಷಿಣ ದೆಹಲಿಯಲ್ಲಿ ನಿಯೋಜಿಸಲಾದ ಸಹಾಯಕ ಪೊಲೀಸ್ ಆಯುಕ್ತರ(ACP) ಮಗಳು ಎಂದು ಹೇಳಲಾಗಿದೆ.
ಈ ಪ್ರಕರಣದ ಉಪ ಪೊಲೀಸ್ ಆಯುಕ್ತ (DCP) ಚಂದನ್ ಚೌಧರಿ ಮಾತನಾಡಿ, ಸಂತ್ರಸ್ತೆ ತನ್ನ ಹೇಳಿಕೆಯನ್ನು ದಾಖಲಿಸಿಕೊಂಡಾಗ, ಪೊಲೀಸರು ತಕ್ಷಣ ಪ್ರಕರಣ ದಾಖಲಿಸಿದ್ದಾರೆ.
ಮಹಿಳೆಯ ಮೇಲೆ ವಿಧಿಸಲಾದ ಎರಡೂ ಸೆಕ್ಷನ್ಗಳು ಜಾಮೀನು ರಹಿತವಾಗಿದ್ದರೂ, ಆಕೆಯನ್ನು ಇನ್ನೂ ಬಂಧಿಸಲಾಗಿಲ್ಲ.
