New Delhi : ಆಮ್ ಆದ್ಮಿ ಪಕ್ಷದ (AAP) ಗುಜರಾತ್ (Gujarat) ಘಟಕದ ಮುಖ್ಯಸ್ಥ ಗೋಪಾಲ್ ಇಟಾಲಿಯಾ (Gopal Italia) ಅವರು, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ತಾಯಿಯ ವಿರುದ್ಧ ನೀಡಿದ ವಿವಾದಾತ್ಮಕ ಹೇಳಿಕೆಯನ್ನು,
ವಿರೋಧಿಸಿ ದೆಹಲಿಯ ಬೀದಿಗಳಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು (BJP Workers) ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗಿರುವ ವಿಡಿಯೋದಲ್ಲಿ, ಬಿಜೆಪಿ ಕಾರ್ಯಕರ್ತರು ಕರ್ತವ್ಯ ನಿರತ ಮಹಿಳಾ ಪೊಲೀಸ್ ಅಧಿಕಾರಿಯನ್ನು ನೂಕಿ,
ಆಕೆಯ ಕೂದಲು ಹಿಡಿದು ಎಳೆದಾಡಿದ ದೃಶ್ಯ ಕಂಡು ಬಂದಿದೆ. ಬಿಜೆಪಿಯ ಮಹಿಳಾ ಘಟಕದ ಸದಸ್ಯರೊಂದಿಗೆ ಪೊಲೀಸರು ಮುಖಾಮುಖಿಯಾಗಿದ್ದರು ಮತ್ತು,
ಪ್ರತಿಭಟನಾಕಾರರು ಮಹಿಳಾ ಪೊಲೀಸ್ ಅಧಿಕಾರಿಯನ್ನು ಸುತ್ತುವರೆದಿದ್ದರಿಂದ ಕೆಲವು ಮಹಿಳೆಯರು ದೈಹಿಕವಾಗಿ ಹಲ್ಲೆ ನಡೆಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು.
ಇದನ್ನೂ ಓದಿ : https://vijayatimes.com/sri-ramulu-slams-bharat-jodo-yatra/
ವೀಡಿಯೋದಲ್ಲಿ, ಕಾರ್ಯ ನಿವೃತ್ತ ಪೊಲೀಸ್ ಅಧಿಕಾರಿಯ ಕೂದಲನ್ನು ಹಿಡಿದು ಎಳೆದುಕೊಂಡು ಹೋಗಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ನಗರದ ಎಎಪಿ ಕಚೇರಿಯ (AAP Office) ಹೊರಗೆ ಪ್ರತಿಭಟನೆ ನಡೆಸಲಾಗುತ್ತಿತ್ತು.
ಬಿಜೆಪಿ ಪಕ್ಷದ ದೆಹಲಿ ಘಟಕದ ಮುಖ್ಯಸ್ಥ ಆದೇಶ್ ಗುಪ್ತಾ ಸೇರಿದಂತೆ (Police Officer hair pulled by BJP Workers) ಹಲವು ಬಿಜೆಪಿ ನಾಯಕರು ಪ್ರತಿಭಟನೆಯಲ್ಲಿ ಹಾಜರಿದ್ದರು.
https://twitter.com/MirrorNow/status/1580884993928462337?s=20&t=2rndibS6hTTfjc2PkwgVmQ
ವಿಡಿಯೋದಲ್ಲಿ ಪ್ರಧಾನಿಯವರ ತಾಯಿಯನ್ನು ಅಪಹಾಸ್ಯ ಮಾಡಿರುವುದು ಕೇಳಿಬಂದ ಹಿನ್ನೆಲೆಯಲ್ಲಿ ಇಟಾಲಿಯಾ ಅವರನ್ನು ತಕ್ಷಣವೇ ಪಕ್ಷದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಇಟಾಲಿಯಾ ವಿರುದ್ಧ ವಾಗ್ದಾಳಿ ನಡೆಸಿತು.
“ಪ್ರಧಾನಿ ತಾಯಿಯನ್ನು ನಿಂದಿಸುವುದು ಗುಜರಾತ್ನಲ್ಲಿ(Gujarat) ರಾಜಕೀಯ ಜನಪ್ರಿಯತೆ ಗಳಿಸಲು ಸಹಾಯ ಮಾಡುತ್ತದೆ ಎಂದು ನೀವು ಭಾವಿಸಿದ್ದರೇ, ಅದು ಖಂಡಿತ ನೀವು ಮಾಡಿರುವ ದೊಡ್ಡ ತಪ್ಪು.

ಆ ತಪ್ಪಿಗೆ ಗುಜರಾತ್ ಮತ್ತು ಗುಜರಾತಿಗಳು ಮುಂಬರುವ ಚುನಾವಣೆಯಲ್ಲಿ ರಾಜಕೀಯ ಬೆಲೆ ತೆರುವಂತೆ ಮಾಡುತ್ತಾರೆ ಎಂದು ಕೇಂದ್ರ ಸಚಿವೆ (Union Minister) ಸ್ಮೃತಿ ಇರಾನಿ (Smrithi Irani) ವಾಗ್ದಾಳಿ ನಡೆಸಿದ್ದಾರೆ.
ತಾನು ಪಾಟಿದಾರ್ ಸಮುದಾಯದವನಾದ್ದರಿಂದ ಬಿಜೆಪಿ ತನ್ನನ್ನು ಗುರಿಯಾಗಿಸುತ್ತಿದೆ (Police Officer hair pulled by BJP Workers )ಎಂದು ಇಟಾಲಿಯಾ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ : https://vijayatimes.com/sri-ramulu-slams-bharat-jodo-yatra/