ಬೆಂಗಳೂರು ಆ 30 : ಇತ್ತೀಚೆಗೆ ಅಷ್ಟೆ ಕನ್ನಡ ಚಿತ್ರ ನಟಿಯರಿಗೆ ಕಂಟಕವಾಗಿದ್ದ ಡ್ರಗ್ಸ್ ಕೇಸ್ ಪ್ರಕರಣದ ಜಾಲ ಇದೀಗ ಮತ್ತಷ್ಟು ವಿಸ್ತರಿಸಿದ್ದು, ಈ ಹಿನ್ನಲೆಯಲ್ಲಿ ಉದ್ಯಮಿ ಭರತ್, ಮಾಡೆಲ್ ಸೋನಿಯಾ ಮತ್ತು ಡಿಜೆ ವಚನ್ ಚನ್ನಪ್ಪ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಡ್ರಗ್ ಫೆಡ್ಲರ್ ನೀಡಿದ ಮಾಹಿತಿ ಮೇರೆಗೆ ರಾಜಾಜಿನಗರ, ಪದ್ಮನಾಭನಗರ, ಬೆನ್ಸೆನ್ ಟೌನ್ ಮುಂತಾದ ಕಡೆ ಇರುವ ಸೆಲೆಬ್ರಿಟಿಗಳ ಮನೆಯಲ್ಲಿ ಶೋಧ ಕಾರ್ಯ ನಡೆಸಲಾಗಿದೆ. ಕಾರ್ಯಾಚರಣೆ ವೇಳೆ ಮಾದಕ ವಸ್ತುಗಳು ಕೂಡ ಪತ್ತೆ ಆಗಿದೆ. ಭರತ್ ಅವರು ಅಮರ ಮನೆಯಲ್ಲೇ ಡ್ರಗ್ಸ್ ಪಾರ್ಟಿ ಆಯೋಜಿಸುತ್ತಿದ್ದರು ಎಂದು ತಿಳಿದು ಬಂದಿದ್ದು, ಸೆಲೆಬ್ರಿಟಿಗಳ ಜೊತೆಗೂ ಅವರು ಸಂಪರ್ಕ ಹೊಂದಿದ್ದರು ಎಂದು ಕಾರ್ಯಚರಣೆಯಲ್ಲಿ ತಿಳಿದು ಬಂದಿದ್ದು ಅವರನ್ನುಆರಕ್ಷಕರು ವಶಕ್ಕೆ ಪಡೆದ್ದಿದ್ದಾರೆ. ಇವರು ಡ್ರಗ್ಸ್ ಪೆಡ್ಲರ್ ಥಾಮಸ್ ಜೊತೆ ಕೂಡ ಸಂಪರ್ಕದಲ್ಲಿದ್ದರು. ಡಿಜೆ ವಚನ್ ಚಿನ್ನಪ್ಪ ಮನೆಯಲ್ಲಿ 50 ಗ್ರಾಂ ಗಾಂಜಾ ಪತ್ತೆ ಆಗಿದೆ ಮತ್ತು ಮಾಡೆಲ್ ಸೋನಿಯಾ ನಿವಾಸದಲ್ಲೂ ಕೂಡ 40 ಗ್ರಾಂ ಗಾಂಜಾ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆ ಬಳಿಕಇವರನ್ನು ವೈಧ್ಯಕೀಯ ಪರೀಕ್ಷೆಗೆ ಒಳಪಡಿಸುವ ಸಾಧ್ಯತೆಯಿದೆ.