- ಕೈವಾರ ತಾತಯ್ಯ ಧಾರ್ಮಿಕ ಕಾರ್ಯಕ್ರಮದಲ್ಲಿ ಚಿಲ್ಲರೆ ರಾಜಕೀಯ (Political tussle at religious event)
- ಇದು ನಿಮ್ಮಪ್ಪನ ಪ್ರೋಂಗ್ರಾಂ ಅಲ್ಲ, ಸುಮ್ನೆ ಕೂತ್ಕೋಬೇಕು
- ಈಗ ಇರೋದು ಸಿದ್ದರಾಮಯ್ಯ ಸರ್ಕಾರ ಎಂದು ಪ್ರದೀಪ್ ಈಶ್ವರ್ ಅವಾಜ್
Bengaluru: ಕೈವಾರ ತಾತಯ್ಯ (Kaivara Tataiah) ಯೋಗಿನಾರೇಯಣ ಯತೀಂದ್ರರ 299ನೇ ಜಯಂತ್ಯುತ್ಸವ ಕಾರ್ಯಕ್ರಮ (Anniversary program) ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುತ್ತಿದ್ದು ಈ ವೇಳೆ ಶಾಸಕ ಪ್ರದೀಪ್ ಈಶ್ವರ್ (MLA Pradeep Eshwar) ಹಾಗೂ ಬಿಜೆಪಿ ಕಾರ್ಯಕರ್ತರ (BJP workers) ನಡುವೆ ಮಾತಿನ ಚಕಮಕಿ ನಡೆದಿದೆ.
ಈ ವೇಳೆ ಆಕ್ರೋಶಭರಿತರಾದ ಪ್ರದೀಪ್ ಈಶ್ವರ್ (Pradeep Eshwar) ಬಿಜೆಪಿ ಕಾರ್ಯಕ್ರರ್ತರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.ವೇದಿಕೆ ಮೇಲೆ ಪ್ರದೀಪ್ ಈಶ್ವರ್ ಮಕ್ಕಳ ಶಿಕ್ಷಣ (Education of children) ಕುರಿತಂತೆ ಮಾತನಾಡುತ್ತಿದ್ದರು. ಇದಕ್ಕೆ ಕೆಲ ಬಿಜೆಪಿ (BJP) ಕಾರ್ಯಕರ್ತರು ಆಕ್ಷೇಪ ಎತ್ತಿದರು. ಇದರಿಂದ ಆಕ್ರೋಶಗೊಂಡ ಪ್ರದೀಪ್ ಈಶ್ವರ್, ಸಮುದಾಯ ಗುಣಗಾನ ಮಾಡೋಕೆ ಇದೇನು ಬಿಜೆಪಿ ಕಾರ್ಯಕ್ರಮ ಅಂದುಕೊಂಡಿದ್ದೀರಾ?

ಈ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (Congress Govt) ಇದೋದು. ಬಿಜೆಪಿ ಗುಣಗಾನ ಮಾಡೋದು ನಿಲ್ಲಬೇಕು. ಬಾಯಿ ಮುಚ್ಕೊಂಡು ಕೂತ್ಕೊಬೇಕು. ರಾಜ್ಯದಲ್ಲಿ ಸಿದ್ದರಾಮಯ್ಯನ ಸರ್ಕಾರ (Siddaramaiah’s government) ಇರೋದು, ನಿಮ್ಮಪ್ಪನ ಸರ್ಕಾರ ಅಲ್ಲ ಎಂದು ಏಕವಚನದಲ್ಲೇ ಮಾತನಾಡಿದ್ದಾರೆ.
ಇನ್ನು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ತಮ್ಮ ಡೈಲಾಗ್ಗಳಿಂದಲೇ ಫೇಮಸ್ ಆದವರು. ಚಿಕ್ಕಬಳ್ಳಾಪುರ ಕ್ಷೇತ್ರದಿಂದ (Chikkaballapura constituency) ಗೆದ್ದಿರುವ ಅವರು ಇದೀಗ ವೇದಿಕೆಗಳಲ್ಲಿ ಅಬ್ಬರಿಸುವುದು ಕಾಮನ್. ಇದೇ ವರಸೆ ಮುಂದುವರಿಸಿಕೊಂಡು ಬಂದಿರುವ ಅವರು ರಾಜ್ಯ ಸರ್ಕಾರದ (State Govt) ಕಾರ್ಯಕ್ರಮದಲ್ಲೂ ಏಕವಚನದಲ್ಲೇ ಅವಾಜ್ ಹಾಕಿದ್ದಾರೆ.
ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕೈವಾರ ತಾತಯ್ಯ ಯೋಗಿನಾರೇಯಣ ಯತೀಂದ್ರರ 299ನೇ ಜಯಂತಿ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಇದೇ ವೇದಿಕೆಯಲ್ಲಿ ಬಿಜೆಪಿ ಸಂಸದ ಪಿಸಿ ಮೋಹನ್ (MP PC Mohan) ಕೂಡ ಇದ್ದು, ಇಬ್ಬರ ನಡುವೆ ವಾಗ್ವಾದ ನಡೆದಿರುವ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: ಯಡಿಯೂರಪ್ಪ ಲಿಂಗಾಯತರ ಹೆಸರಿನಲ್ಲಿ ಬಿಜೆಪಿಯನ್ನು ಬ್ಲ್ಯಾಕ್ಮೇಲ್ ಮಾಡ್ತಿದ್ದಾರೆ: ಯತ್ನಾಳ್ ಕಿಡಿ
ಈ ವೇಳೆ ಕಾರ್ಯಕ್ರಮದಲ್ಲಿದ್ದ ಬಿಜೆಪಿ ಕಾರ್ಯಕರ್ತರು ಕೂಡ ಮಾತಿಗೆ ಮಾತು ಬೆಳೆಸಿದ್ದಾರೆ. ಕಾರ್ಯಕ್ರಮವು ರಣರಂಗವಾಗಿ ಬದಲಾಗಿದ್ದು, ಈ ವೇಳೆ ವೇದಿಕೆಯಲ್ಲಿ ಕುಳಿತಿದ್ದ ಬಿಜೆಪಿ ಸಂಸದ ಪಿ.ಸಿ.ಮೋಹನ್ ಕೂಡ ಮಧ್ಯಪ್ರವೇಶಿಸಿದ್ದಾರೆ. “ಪ್ರದೀಪ್ ಈಶ್ವರ್ ಅವ್ರೇ, ಒಂದು ನಿಮಿಷ ಇಲ್ಲಿ ಕೇಳಿ.
ನಿಮಗೇ ತುಂಬಾ ಉತ್ಸಾಹವಿದೆ ಒಳ್ಳೇದು. ಆದ್ರೆ ನೀವು ಇಲ್ಲಿ ಬಂದು ಇದು ಸಿದ್ದರಾಮಯ್ಯನ (Siddaramaiah) ಪ್ರೋಂಗ್ರಾಂ ಅಂದ್ರೆ, ನಾನು ಬಿಜೆಪಿ ಸಂಸದನಾದ ನಾನು ಇಲ್ಲಿ ಇರಬೇಕಾ, ಬೇಡ್ವಾ ಹೇಳ್ರೀ?” ಎಂದು ಜೋರುದನಿಯಲ್ಲೇ (Loudly) ಕೇಳಿದ್ದಾರೆ.ಬಳಿಕ ಕಾರ್ಯಕ್ರಮದಲ್ಲಿ ಸೇರಿದ್ದ ಎಲ್ಲರೂ ಪ್ರದೀಪ್ ಈಶ್ವರ್ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.
ಕಾರ್ಯಕ್ರಮದ ಆಯೋಜಕರು ಕೂಡ ಮಧ್ಯಪ್ರವೇಶಿಸಿ, ಪರಿಸ್ಥಿತಿ ತಿಳಿಗೊಳಿಸಿದ್ದಾರೆ ಎನ್ನಲಾಗಿದೆ. (Political tussle at religious event) ಅಷ್ಟಕ್ಕೂ ಸುಮ್ಮನಾಗದ ಪ್ರದೀಪ್ ಈಶ್ವರ್ ಅವರು ನೀವು ನಿಮ್ಮ ಪಕ್ಷವನ್ನು ಗುಣಗಾನ ಮಾಡಿದರೆ, ನಾವು ನಮ್ಮ ಪಕ್ಷವನ್ನು ಗುಣಗಾನ ಮಾಡಬೇಕಾಗುತ್ತೆ ಎಂದಿದ್ದಾರೆ.