ರಾಜಕೀಯ ನಾಯಕರು ತಮ್ಮದೇ ನಾಯಕತ್ವ ಬೆಳೆಸಿಕೊಳ್ಳಲು ವಿವಾದಿತ ಹೇಳಿಕೆಗಳನ್ನು ಕೊಡುವುದು ಒಳ್ಳೆಯ ಲಕ್ಷಣವಲ್ಲ, ನಾಯಕತ್ವ ಬೆಳೆಸಿಕೊಳ್ಳುವ ಮಾನಸಿಕತೆ ಸರಿಯಲ್ಲ! ಎಂದು ಸ್ಪೀಕರ್ ವಿಶ್ವೇಶ್ವರ ಹೆಗೆಡೆ ಕಾಗೇರಿ ಅವರು ಗುಡುಗಿದ್ದಾರೆ. ಬುಧವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಮಾಜದಲ್ಲಿ ಸಂಯಮತೆ ಕಾಪಾಡಬೇಕು, ಸಾಮರಸ್ಯ ಸೃಷ್ಟಿಸಬೇಕೇ ವಿನಃ ವಿವಾದಗಳನ್ನು ಸೃಷ್ಟಿಸಿ ಅವರಿವರ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತ ವಿವಾದ ಹುಟ್ಟಿಹಾಕೊದು ನಾಯಕತ್ವ ಬೆಳೆಸಿಕೊಳ್ಳುವ ಮಾನಸಿಕತೆ ಸರಿಯಲ್ಲ. ಇದು ಸಮಾಜಕ್ಕೆ ಉಪಯುಕ್ತವೂ ಅಲ್ಲ ಬದಲು ಮಾರಕ ಎಂದು ಸ್ಪೀಕರ್ ಕಾಗೇರಿ ಅವರು ಹೇಳಿದ್ದಾರೆ.

ಸಮಾಜದ ಸ್ವಾಸ್ಥ್ಯ ಕಾಪಾಡಬೇಕು ಎಂಬ ನಿಟ್ಟಿನಲ್ಲಿ ಅನಗತ್ಯ ಹೇಳಿಕೆಗಳನ್ನು ನೀಡುವ ಮುಖೇನ ಸಮಾಜದ ಸ್ಥಿತಿಗತಿಗಳನ್ನು ಕದಡಲಾಗುತ್ತಿದೆ. ಅನಗತ್ಯ ಹೇಳಿಕೆಗಳನ್ನು ನೀಡದೆ, ಪ್ರಾಮುಖ್ಯತೆ ನೀಡದೆ ವಿವೇಚನೆಯಿಂದ ನಡೆದುಕೊಳ್ಳುವುದು ಒಳಿತು. ಸಮಾಜದಲ್ಲಿ ಉತ್ತಮ ಬೆಳವಣಿಗೆಗೆ ಮಾದರಿಯಾಗಬೇಕು. ಸಮಾಜಕ್ಕೆ ಒಳ್ಳೆಯ ಕೊಡುಗೆಗಳನ್ನು ನೀಡಬೇಕು. ಸಮಾಜದಲ್ಲಿ ಉದ್ವಿಗ್ನ ಪರಿಸ್ಥಿತಿ ತಂದೊಡ್ಡದೆ ಶಾಂತಿಯನ್ನು ಕಾಪಾಡುವುದು ಅಗತ್ಯವಾಗಿದೆ. ವೈಯಕ್ತಿಕ ಸಂಸ್ಕಾರ ಇರುವಂತೆ ಜನಸಮೂಹಕ್ಕೆ ಸಂಸ್ಕಾರ ಅಗತ್ಯ. ಸುಸಂಸ್ಕೃತ ಜನಜೀವನ ರೂಪಿತವಾಗಲು ಎಲ್ಲರೂ ಸಹಕರಿಸಬೇಕು.

ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಒಳ್ಳೆಯ ಕ್ಷಣದಲ್ಲೇ ಚರ್ಚಿಸಲು ಸಾಧ್ಯವಿದೆ ಎಂದು ಹೇಳಿದರು. 2015ರ ನಂತರ ಶಾಸಕರು, ಸಚಿವರ ವೇತನ, ಭತ್ತೆ ಹೆಚ್ಚಳವನ್ನು ಪರಿಷ್ಕರಣೆ ಮಾಡಿರಲಿಲ್ಲ. ಅನೇಕ ಮಂದಿ ಮಾಜಿ ಶಾಸಕರು ಅರ್ಥಿಕ ಸಂಕಷ್ಟದಲ್ಲಿದ್ದಾರೆ. ಇನ್ನು ಕೆಲವರ ಪರಿಸ್ಥಿತಿ ಹೇಳತೀರದು ಆ ರೀತಿಯಿದೆ. ಈ ಕುರಿತು ಭತ್ತೆ, ವೇತನ ಪರಿಷ್ಕರಣೆ ಮಾಡಬೇಕು, ಹೆಚ್ಚಳ ಮಾಡಬೇಕು ಎಂದು ಶಾಸಕರು ಮನವಿ ಮಾಡಿದರು ಎಂದು ಹೇಳಿದರು.