Breaking News
‘ಇನ್ನೆರಡು ತಾಸುಗಳಷ್ಟೇ..ಆಮೇಲೆ ಆಕ್ಸಿಜನ್​ ಇರೋದಿಲ್ಲ, ರೋಗಿಗಳು ಸಾಯ್ತಾರೆ..’ ಕಣ್ಣೀರಿಟ್ಟ ಆಸ್ಪತ್ರೆ ಸಿಇಒಶಾಸಕ ಜಮೀರ್ ಅಹ್ಮದ್, ಮಧು ಬಂಗಾರಪ್ಪಗೆ ಕೊರೊನಾ ಪಾಸಿಟಿವ್: ನಿನ್ನೆಯಷ್ಟೇ ಸಿದ್ದರಾಮಯ್ಯ ಭೇಟಿಯಾಗಿದ್ದ ಜಮೀರ್ಕೊರೊನಾ ನಿರ್ವಹಣೆ ವಿಚಾರವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ಮೇ 1ರಿಂದ 18 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಲು ನೋಂದಾವಣೆ ಮಾಡಿಕೊಳ್ಳುವ ವಿಧಾನ ಇಲ್ಲಿದೆರೆಮ್‌ಡಿಸಿವಿರ್‌ ವೈಜ್ಞಾನಿಕವಾಗಿ ಲೈಫ್ ಸೇವಿಂಗ್ ಡ್ರಗ್ ಅಲ್ಲ: ಸಚಿವ ಸುಧಾಕರ್ಭಾರತಕ್ಕೆ ಬಂದಿಳಿದ 5ನೇ ಬ್ಯಾಚ್​​ನ ರಫೇಲ್​​ ಯುದ್ಧ ವಿಮಾನಗಳುಮುಖ್ಯಮಂತ್ರಿ ಯಡಿಯೂರಪ್ಪ ಆಸ್ಪತ್ರೆಯಿಂದ ಡಿಸ್ಚಾರ್ಜ್ಪ್ರಚಾರಗಳನ್ನ ಬಿಟ್ಟು ಜನರ ರಕ್ಷಣೆ ಜತೆಗೆ ಜನರ ವಿಶ್ವಾಸ ಗೆಲ್ಲುವ ಕೆಲಸ ಮಾಡಿ: ಬಿಜೆಪಿಗೆ ಕುಮಾರಸ್ವಾಮಿ ಚಾಟಿನೀವು ಖುಷಿಯಾಗಿ ಸಮಯ ಹಾಳು ಮಾಡಿ, ಜನ ಮಾತ್ರ ಸಾಯ್ತಾ ಇರ್ಲಿ: ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್​ ತರಾಟೆದೆಹಲಿ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಎ.ಕೆ.ವಾಲಿಯಾ ಕೊರೊನಾ ಸೋಂಕಿನಿಂದ ಮೃತ

ಜೀವನದ ಪಾಠ ಕಲಿಸಿದ ಕೊರೋನಾ: ವ್ಯಕ್ತಿಯ ಶ್ರಮಕ್ಕೆ ಮೋದಿ ಮೆಚ್ಚುಗೆ

ಪ್ರಮೋದ್ ಬೈಥಾ ಓದಿದ್ದು 8 ನೇ ತರಗತಿ, ಜೀವನೋಪಾಯಕ್ಕಾಗಿ 1998 ರಲ್ಲಿ ದೆಹಲಿಗೆ ತೆರಳಿದ ಇವರು, ಎಲ್ ಇಡಿ ಬಲ್ಬ್ ತಯಾರಕ ಫ್ಯಾಕ್ಟರಿಗೆ ತೆರಳಿ ಕಿರಿಯ ತಂತ್ರಜ್ಞನ ಸ್ಥಾನದವರೆಗೂ ಏರಿದರು, ಬಲ್ಬ್ ತಯಾರಿಸುವುದರ ಬಗ್ಗೆ ಅನೇಕ ಸಂಗತಿಗಳನ್ನು ಅರಿತುಕೊಂಡರು. 8,000-12000 ರೂಪಾಯಿಗಳ ವೇತನ ಪಡೆಯುತ್ತಿದ್ದ ಪ್ರಮೋದ್ ಬೈಥಾ ಉದ್ಯೋಗಕ್ಕೆ ಕೊರೋನಾ ಮಾರಕವಾಯಿತು.
Share on facebook
Share on google
Share on twitter
Share on linkedin
Share on print

ಪಾಟ್ನಾ, ಮಾ. 2: ಕೊರೋನಾ ಮಹಾ ಮಾರಿ  ಹಲವರ ಜೀವನದಲ್ಲಿ ಹಲವು ಪಾಠ ಕಲಿಸಿದೆ, ಕೆಲವರಿಗೆ ಜೀವನ ದುಸ್ತರವೆನಿಸಲು ಪ್ರಾರಂಭಿಸಿದರೆ, ಇನ್ನು ಕೆಲವರಿಗೆ ಹೊಸ ಪಾಠ ಕಲಿಸಿದೆ. ಮನಸ್ಸಿದ್ದರೆ ಮಾರ್ಗ ಎಂಬ ಮಾತನ್ನು ನಂಬಿದವರಿಗೆ  ಜೀವನವನ್ನು  ಸಕಾರಾತ್ಮಕವಾಗಿ  ಬದಲಾವಣೆ ಮಾಡಲು ಸಹಾಯವಾಗಿದೆ. ದೆಹಲಿಯಲ್ಲಿ ಎಲ್ ಇಡಿ ಬಲ್ಬ್ ತಯಾರಿಕಾ ಘಟಕದಲ್ಲಿ ಸಾಮಾನ್ಯ ಉದ್ಯೋಗಿಯಾಗಿ ಈಗ ತವರಿನಲ್ಲಿ ಉದ್ಯೋಗದಾತನಾಗಿರುವ ಬಿಹಾರದ ಚಂಪಾರಣ್ ನ 36 ವರ್ಷ ಪ್ರಮೋದ್ ಬೈಥಾ ಮೇಲಿನ ಸಾಲುಗಳಿಗೆ ಉದಾಹರಣೆಯಾಗಿದ್ದಾರೆ.

ಪ್ರಮೋದ್ ಬೈಥಾ ಓದಿದ್ದು 8 ನೇ ತರಗತಿ, ಜೀವನೋಪಾಯಕ್ಕಾಗಿ 1998 ರಲ್ಲಿ ದೆಹಲಿಗೆ ತೆರಳಿದ ಇವರು, ಎಲ್ ಇಡಿ ಬಲ್ಬ್ ತಯಾರಕ ಫ್ಯಾಕ್ಟರಿಗೆ ತೆರಳಿ ಕಿರಿಯ ತಂತ್ರಜ್ಞನ ಸ್ಥಾನದವರೆಗೂ ಏರಿದರು, ಬಲ್ಬ್ ತಯಾರಿಸುವುದರ ಬಗ್ಗೆ ಅನೇಕ ಸಂಗತಿಗಳನ್ನು ಅರಿತುಕೊಂಡರು. 8,000-12000 ರೂಪಾಯಿಗಳ ವೇತನ ಪಡೆಯುತ್ತಿದ್ದ ಪ್ರಮೋದ್ ಬೈಥಾ ಉದ್ಯೋಗಕ್ಕೆ ಕೊರೋನಾ ಮಾರಕವಾಯಿತು. ಲಾಕ್ ಡೌನ್ ಅವಧಿಯಲ್ಲಿ ಶ್ರಮಿಕ್ ಎಕ್ಸ್ ಪ್ರೆಸ್ ನಲ್ಲಿ ಬಿಹಾರಕ್ಕೆ ಬಂದ ಪ್ರಮೋದ್ ಬೈಥಾ ಕೆಲವು ಕಾಲ ನಿರುದ್ಯೋಗಿಯಾಗಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ವೋಕಲ್ ಫಾರ್ ಲೋಕಲ್ ಅಭಿಯಾನಕ್ಕಾಗಿ ಕರೆ ನೀಡಿದ್ದರಿಂದ ಸ್ಪೂರ್ತಿ ಪಡೆದ ಪ್ರಮೋದ್, ಸ್ಥಳೀಯವಾಗಿ 9 ವಾಟ್ ಗಳ ಎಲ್ ಇಡಿ ಬಲ್ಬ್ ಗಳನ್ನು ತಯಾರಿಸಲು ನಿರ್ಧರಿಸಿದರು.

“ಉತ್ಪಾದನಾ ಘಟಕ ಪ್ರಾರಂಭಿಸುವುದು ಮಕ್ಕಳ ಆಟವಲ್ಲ, ಕಷ್ಟಪಟ್ಟು 40,000 ರೂಪಾಯಿಗಳನ್ನು ಸಂಗ್ರಜಿಸಿ ದೆಹಲಿಯಿಂದ ಕಚ್ಚಾ ವಸ್ತುಗಳನ್ನು ತರಿಸಿದೆ. ನನ್ನ ಪತ್ನಿ ಸಂಜು ದೇವಿ ಹಾಗೂ ಕಾಲೇಜು ವ್ಯಾಸಂಗ ಮಾಡುತ್ತಿರುವ ಪುತ್ರ ಧೀರಜ್ ಕುಮಾರ್ ಜೊತೆಗೂಡಿ ಎಲ್ ಇಡಿ ಬಲ್ಬ್ ಗಳನ್ನು ತಯಾರಿಸುವುದಕ್ಕೆ ಪ್ರಾರಂಭಿಸಿದೆ, ಜೊತೆಗೂಡಿ ಪ್ರತಿ ಬಲ್ಬ್ ಗೆ 11 ರೂಪಾಯಿಗಳಂತೆ 800 ಬಲ್ಬ್ ಗಳನ್ನು ತಯಾರಿಸಿದೆವು” ಎನ್ನುತ್ತಾರೆ ಪ್ರಮೋದ್

ಬೇಡಿಕೆ ಹೆಚ್ಚಿದಂತೆಲ್ಲಾ, ಹೆಚ್ಚು ಕಚ್ಚಾ ವಸ್ತುಗಳನ್ನು ತರಿಸಿ ಸ್ಥಳೀಯರಿಗೆ ಔಪಚಾರಿಕ ತರಬೇತಿ ನೀಡುವ ಮೂಲಕ ಬಲ್ಬ್ ತಯಾರಿಕಾ ಘಟಕದಲ್ಲಿ ಉದ್ಯೋಗ ನೀಡಿದರು. ಈಗ ಪ್ರಮೋದ್ ನಡೆಸುತ್ತಿರುವ ಬಲ್ಬ್ ತಯಾರಿಕ ಘಟಕದಲ್ಲಿ 8 ಮಂದಿ ಉದ್ಯೋಗಿಗಳಿದ್ದಾರೆ, ಮುಂದಿನ ದಿನಗಳಲ್ಲಿ ಈ ಬಲ್ಬ್ ಗಳಿಗೆ ವಿಶಾಲ್ ಬಲ್ಬ್ ಎಂಬ ಹೆಸರು ನಾಮಕಾರಣ ಮಾಡಬೆಕೆಂಬ ಉದ್ದೇಶವಿದೆ ಎಂದು ಪ್ರಮೋದ್ ಹೇಳಿದ್ದಾರೆ.

ಚಂಪಾರಣ್ ಜಿಲ್ಲೆಯೊಂದರಲ್ಲೇ 10000 ಎಲ್ ಇಡಿ ಬಲ್ಬ್ ಗಳಿಗೆ ಬೇಡಿಕೆ ಇದೆ. ಹೆಚ್ಚಿನ ಪ್ರಮಾಣದಲ್ಲಿ ನನ್ನ ಉದ್ಯಮವನ್ನು ವಿಸ್ತರಿಸಲು ಆರ್ಥಿಕ ನೆರವಿನ ಅಗತ್ಯವಿದೆ. “ಪ್ರಧಾನಿ ನರೇಂದ್ರ ಮೋದಿ ಮನ್ ಕಿ ಬಾತ್ ನಲ್ಲಿ ನನ್ನ ಸಾಧನೆ ಬಗ್ಗೆ ಮಾತನಾಡಿದ್ದು ಉತ್ತೇಜನಕಾರಿ, ಇದರಿಂದ ನಾನು ಹೆಚ್ಚು ಉತ್ಸಾಹಗೊಂಡಿದ್ದೇನೆ, ಪ್ರಧಾನಿ ಮೋದಿ ಸಿಎಂ ನಿತೀಶ್ ಕುಮಾರ್ ಆರ್ಥಿಕ ನೆರವಿಗೆ ಸಹಾಯ ಮಾದಬಹುದೆಂಬ ನಿರೀಕ್ಷೆ ಇದೆ”. ಎನ್ನುತ್ತಾರೆ ಪ್ರಮೋದ್.

Submit Your Article