• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಬೆಂಗಳೂರಲ್ಲಿ ವಾಯುಮಾಲಿನ್ಯ ಏರಿಕೆ: ರಸ್ತೆ ಗುಂಡಿಗಳೇ ಅಚ್ಚರಿಯ ಕಾರಣ ಎಂದು ಹೇಳಿದ ಮಾಲಿನ್ಯ ನಿಯಂತ್ರಣ ಮಂಡಳಿ

Shwetha Mohan by Shwetha Mohan
in ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
ಬೆಂಗಳೂರಲ್ಲಿ ವಾಯುಮಾಲಿನ್ಯ ಏರಿಕೆ: ರಸ್ತೆ ಗುಂಡಿಗಳೇ ಅಚ್ಚರಿಯ ಕಾರಣ ಎಂದು ಹೇಳಿದ ಮಾಲಿನ್ಯ ನಿಯಂತ್ರಣ ಮಂಡಳಿ
0
SHARES
8
VIEWS
Share on FacebookShare on Twitter
  • ಬೆಂಗಳೂರಿನ ವಾಯುಮಾಲಿನ್ಯಕ್ಕೆ ವಾಹನಗಳಿಗಿಂತ ರಸ್ತೆಗುಂಡಿಗಳೇ ಮೂಲ ಕಾರಣ
  • ನಗರದ ವಾಯುಗುಣಮಟ್ಟ ಕುಸಿತದಿಂದ ಆಯುಷ್ಯ 2 ವರ್ಷ ಕಡಿಮೆಯಾಗುವ ಆತಂಕ
  • ಬೆಂಗಳೂರಿನ ರಸ್ತೆಗಳ ಅವ್ಯವಸ್ಥೆ ಮಾಲಿನ್ಯ ಹೆಚ್ಚಿಸುತ್ತಿದ್ದು ಕೂಡಲೇ ಸೂಕಿ ಕ್ರಮ ಕೈಗೊಳ್ಳಲು ಸೂಚನೆ

Bengaluru: ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ (Bengaluru) ವಾಯುಮಾಲಿನ್ಯ ಆತಂಕಕಾರಿ ಮಟ್ಟಕ್ಕೆ ಏರಿದೆ. (Pollution Control Board shocking statement)

ದಿನದಿಂದ ದಿನಕ್ಕೆ ಕಲುಷಿತಗೊಳ್ಳುತ್ತಿರುವ ರಾಜಧಾನಿಯ ಗಾಳಿ, ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.

ವಾಹನಗಳ ಹೊಗೆ, ನಿರ್ಮಾಣ ಕಾಮಗಾರಿಗಳ ಧೂಳು  ಮಾಲಿನ್ಯಕ್ಕೆ ಕಾರಣ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಮಾಹಿತಿ ನೀಡಿದೆ

ಸಾಮಾನ್ಯವಾಗಿ ವಾಹನಗಳ ಹೊಗೆ, ನಿರ್ಮಾಣ ಕಾಮಗಾರಿಗಳ ಧೂಳು ಇವೇ ಮಾಲಿನ್ಯಕ್ಕೆ ಕಾರಣ ಎಂದು ಎಲ್ಲರೂ ಭಾವಿಸುತ್ತಿದ್ದರು.

ಆದರೆ, ಈಗ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಬಿಚ್ಚಿಟ್ಟಿರುವ ಮಾಹಿತಿ ಎಲ್ಲರಿಗೂ ಅಚ್ಚರಿ ತಂದಿದೆ. (Pollution Control Board shocking statement)

ಹೌದು ಬೆಂಗಳೂರಿನ ರಸ್ತೆಯ ಗುಂಡಿಗಳು ಹಾಗೂ ಅಸಮರ್ಪಕ ರಸ್ತೆ ನಿರ್ವಹಣೆಯೇ ಬೆಂಗಳೂರಿನ ವಾಯುಮಾಲಿನ್ಯ ಹೆಚ್ಚಳಕ್ಕೆ ಪ್ರಮುಖ ಕಾರಣಗಳಲ್ಲೊಂದು ಎನ್ನಲಾಗಿದೆ.

ಬೆಂಗಳೂರಿನ ಹಲವು ಮುಖ್ಯ ರಸ್ತೆಗಳಲ್ಲಿನ ಗುಂಡಿಗಳು ದಿನೇ ದಿನೇ ಹೆಚ್ಚುತ್ತಿದ್ದು, ವಾಹನ ಸಂಚಾರದ ವೇಳೆ ಈ ಗುಂಡಿಗಳಿಂದ ಎದ್ದೇಳುವ ಧೂಳಿನ ಕಣಗಳು ನೇರವಾಗಿ ವಾತಾವರಣ ಸೇರಿ ಮಾಲಿನ್ಯ ಹೆಚ್ಚಿಸುತ್ತಿವೆ.

ಈ ಧೂಳಿನ ಕಣಗಳು ಪಾರ್ಟಿಕ್ಯುಲೇಟ್ ಮ್ಯಾಟರ್ (Particulate matter) (PM 2.5 ಮತ್ತು PM 10)ರೂಪದಲ್ಲಿ ಗಾಳಿಯಲ್ಲಿ ಬೆರೆತು, ಉಸಿರಾಟ ಸಮಸ್ಯೆ, ಆಸ್ತಮಾ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತಿವೆ ಎಂದು ತಜ್ಞರು ಹೇಳಿದ್ದಾರೆ.

ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳ ಪ್ರಕಾರ, ಬೆಂಗಳೂರಿನ ರಸ್ತೆಗುಂಡಿಗಳನ್ನು ಮುಚ್ಚುವ ಕೆಲಸ ನಿರಂತರ ವಿಳಂಬವಾಗುತ್ತಿರುವುದು ಮಾಲಿನ್ಯ ನಿಯಂತ್ರಣದ ದೊಡ್ಡ ಅಡಚಣೆ. ಅನೇಕ ಪ್ರದೇಶಗಳಲ್ಲಿ ಕಾಮಗಾರಿಗಳು ಮಧ್ಯದಲ್ಲೇ ನಿಂತು ಹೋಗಿರುವುದರಿಂದ ಧೂಳು ವಾತಾವರಣದಲ್ಲಿ ತೇಲುತ್ತಿದೆ.

ಇನ್ನು ವಾಹನ ಸಂಚಾರದ ಪ್ರಮಾಣ ಈಗಾಗಲೇ ಮಿತಿಮೀರಿದೆ. ಸರಾಸರಿ ಅಂದಾಜು ಪ್ರಕಾರ, ಪ್ರತಿದಿನವೂ 1 ಕೋಟಿಗೂ ಹೆಚ್ಚು ವಾಹನಗಳು ಬೆಂಗಳೂರಿನ ರಸ್ತೆಗಳ ಮೇಲೆ ಸಂಚಾರ ನಡೆಸುತ್ತಿವೆ.

ಇದಕ್ಕೆ ಸೇರ್ಪಡೆಗೊಂಡಿರುವ ಹೊಸ ಲೇಔಟ್ (Layout) ನಿರ್ಮಾಣ, ಮರಗಳ ಕಡಿತ, ನಿರ್ಮಾಣ ಕಾಮಗಾರಿಗಳ ವೇಳೆ ಧೂಳಿನ ಕಣಗಳು ಇವೆಲ್ಲವೂ ಸೇರಿ ವಾತಾವರಣದ ಶುದ್ಧತೆಗೆ ಹಾನಿ ಉಂಟುಮಾಡುತ್ತಿವೆ.

ಇನ್ನು ರಸ್ತೆ ಅಗಲೀಕರಣ ಹಾಗೂ ನಿರ್ಮಾಣ ಕಾಮಗಾರಿಗಳ ವೇಳೆ ಸೂಕ್ತ ಧೂಳಿನ ನಿಯಂತ್ರಣ ಕ್ರಮ ಕೈಗೊಳ್ಳದಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ.

ಧೂಳಿನ ಕಣಗಳನ್ನು ನಿಯಂತ್ರಿಸಲು ನೀರಿನ ಸಿಂಪಡಣೆ ಅಥವಾ ಪ್ಲಾಸ್ಟಿಕ್ ಶೀಟ್ (Plastic Sheet) ಕವಚಗಳನ್ನು ಬಳಸುವ ನಿಯಮಗಳು ಇದ್ದರೂ, ಅನೇಕರಲ್ಲಿ ಅವು ಪಾಲನೆಯಾಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2024ರ ಸ್ವಚ್ಚ ಸರ್ವೇಕ್ಷಣಾ ಪಟ್ಟಿಯಲ್ಲಿ ಬೆಂಗಳೂರು 28ನೇ ಸ್ಥಾನದಲ್ಲಿದ್ದರೆ, 2025ರಲ್ಲಿ 36ನೇ ಸ್ಥಾನಕ್ಕೆ ಕುಸಿದಿದೆ.

ಈ ಕುಸಿತ ನಗರ ಮಾಲಿನ್ಯದ ಗಂಭೀರತೆಗೆ ಸಾಕ್ಷಿಯಾಗಿದೆ. ಕೇಂದ್ರ ಸರ್ಕಾರದ ಅಂಕಿಅಂಶಗಳ ಪ್ರಕಾರ, ಬೆಂಗಳೂರಿನ ವಾಯುಗುಣಮಟ್ಟ ನಿರಂತರ ಕುಸಿಯುತ್ತಿದ್ದು, ಜನರ ಸರಾಸರಿ ಆಯುಷ್ಯವು 2 ವರ್ಷಗಳಷ್ಟು ಕಡಿಮೆಯಾಗುವ ಸಾಧ್ಯತೆ ಉಂಟಾಗಿದೆ.

ವಾಯುಗುಣಮಟ್ಟ ಸೂಚ್ಯಂಕ (AQI) 200 ಮೀರಿದಾಗ ಅದು ಅನಾರೋಗ್ಯಕರ ಮಟ್ಟವೆಂದು ಪರಿಗಣಿಸಲಾಗುತ್ತದೆ. ಇತ್ತೀಚಿನ ವಾರಗಳಲ್ಲಿ ನಗರದ ಅನೇಕ ಪ್ರದೇಶಗಳಲ್ಲಿ AQI 250-300 ನಡುವಣ ಮಟ್ಟದಲ್ಲಿ ದಾಖಲಾಗಿದ್ದು ಇದು ಎಚ್ಚರಿಕೆಯ ಸೂಚನೆಯಾಗಿದೆ.

Tags: bengaluruforecasteweather

Related News

ಆಸ್ಪತ್ರೆ ಬಿಲ್‌ನಲ್ಲಿ ಔಷಧಗಳ ಖರೀದಿ ಬೆಲೆ, ಎಂಆರ್‌ಪಿ ನಮೂದು ಕಡ್ಡಾಯ: ಕರ್ನಾಟಕ ಸರ್ಕಾರದಿಂದ ಮಹತ್ವದ ಆದೇಶ
ಪ್ರಮುಖ ಸುದ್ದಿ

ಆಸ್ಪತ್ರೆ ಬಿಲ್‌ನಲ್ಲಿ ಔಷಧಗಳ ಖರೀದಿ ಬೆಲೆ, ಎಂಆರ್‌ಪಿ ನಮೂದು ಕಡ್ಡಾಯ: ಕರ್ನಾಟಕ ಸರ್ಕಾರದಿಂದ ಮಹತ್ವದ ಆದೇಶ

October 10, 2026
ಲ್ಯಾಪ್‌ಟಾಪ್ ಬಳಸಿ ಬೆನ್ನುನೋವು ಬಂದಿದೆಯಾ? ಈ 7 ಸಲಹೆಗಳನ್ನು ಪಾಲಿಸಿ
ಆರೋಗ್ಯ

ಲ್ಯಾಪ್‌ಟಾಪ್ ಬಳಸಿ ಬೆನ್ನುನೋವು ಬಂದಿದೆಯಾ? ಈ 7 ಸಲಹೆಗಳನ್ನು ಪಾಲಿಸಿ

October 10, 2026
ಮಹಿಳೆಯರ ಮೇಲ್ತುಟಿಯಲ್ಲಿ ಕೂದಲು ಬೆಳೆಯೋದು ಯಾಕೆ? ಶಾಶ್ವತ ಪರಿಹಾರ ಇದೆಯಾ?
ಆರೋಗ್ಯ

ಮಹಿಳೆಯರ ಮೇಲ್ತುಟಿಯಲ್ಲಿ ಕೂದಲು ಬೆಳೆಯೋದು ಯಾಕೆ? ಶಾಶ್ವತ ಪರಿಹಾರ ಇದೆಯಾ?

October 10, 2026
ರಷ್ಯಾದ ತೈಲ ಖರೀದಿಗೆ ವಿರೋಧಿಸಿದ್ದ ಟ್ರಂಪ್ ಈಗ ಅದೇ ದೇಶದೊಂದಿಗೆ ಡೀಸೆಲ್ ಖರೀದಿಗೆ ಒಪ್ಪಂದ: ಅಮೆರಿಕದ ನಿರ್ಧಾರಕ್ಕೆ ಜಾಗತಿಕ ಮಟ್ಟದಲ್ಲಿ ಚರ್ಚೆ
ದೇಶ-ವಿದೇಶ

ರಷ್ಯಾದ ತೈಲ ಖರೀದಿಗೆ ವಿರೋಧಿಸಿದ್ದ ಟ್ರಂಪ್ ಈಗ ಅದೇ ದೇಶದೊಂದಿಗೆ ಡೀಸೆಲ್ ಖರೀದಿಗೆ ಒಪ್ಪಂದ: ಅಮೆರಿಕದ ನಿರ್ಧಾರಕ್ಕೆ ಜಾಗತಿಕ ಮಟ್ಟದಲ್ಲಿ ಚರ್ಚೆ

October 10, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.