ಕೆಕೆ ಎಂದೇ ಖ್ಯಾತರಾಗಿರುವ ಗಾಯಕ(Singer) ಕೃಷ್ಣಕುಮಾರ್ ಕುನ್ನತ್(KrishnaKumar Kannath) ಅವರ ಸಾವಿನ ಕುರಿತು ಕೋಲ್ಕತ್ತಾ ಪೊಲೀಸರು(Kolkata Police) ಅಸಹಜ ಸಾವಿನ ಪ್ರಕರಣ ದಾಖಲಿಸಿದ್ದಾರೆ.

ಹೊಸಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ. ಮಂಗಳವಾರ, ಮೇ 31 ರಂದು, ಕೋಲ್ಕತ್ತಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹಿಂದಿರುಗಿದ ನಂತರ ನ್ಯೂ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರ್ಯಾಂಡ್ ಹೋಟೆಲ್‌ನಲ್ಲಿ ಗಾಯಕ ದಿಢೀರನೇ ಕುಸಿದುಬಿದ್ದಿದ್ದಾರೆ. ಮತ್ತು ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಕೂಡಲೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಲಾಯಿತು. ಪೊಲೀಸ್ ಮೂಲಗಳ ಪ್ರಕಾರ, ಅವರ ಮುಖ ಮತ್ತು ತಲೆಗೆ ಗಾಯಗಳಾಗಿವೆ.
ಸಾವಿನ ಕಾರಣವನ್ನು ತಿಳಿಯಲು ಬುಧವಾರ ಕೋಲ್ಕತ್ತಾದ ಎಸ್‌ಎಸ್‌ಕೆಎಂ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಲಾಗುವುದು. ಪೊಲೀಸರು ಗ್ರ್ಯಾಂಡ್ ಹೋಟೆಲ್‌ನಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ ಮತ್ತು ಹೋಟೆಲ್ ಸಿಬ್ಬಂದಿ ಮತ್ತು ಕಾರ್ಯಕ್ರಮದ ಆಯೋಜಕರೊಂದಿಗೆ ಮಾತನಾಡಲಿದ್ದಾರೆ ಎಂಬುದು ತಿಳಿದುಬಂದಿದೆ. ಎ.ಆರ್ ರೆಹಮಾನ್(AR Rahman) ಅವರ ಹಿಟ್ ಹಾಡುಗಳಾದ ‘ಕಲ್ಲೂರಿ ಸಾಲೆ’ ಮತ್ತು ‘ಹಲೋ ಡಾಕ್ಟರ್’ ಮೂಲಕ ಹಿನ್ನೆಲೆ ಗಾಯಕರಾಗಿ ಕೆಕೆ ಹೊಸ ಆಯಾಮ ಪಡೆದರು.

ಬಾಲಿವುಡ್‌ನಲ್ಲಿ, ಅವರು ಗುಲ್ಜಾರ್‌ರ ಮಾಚಿಸ್‌ನಿಂದ ‘ಚೋಡ್ ಆಯೆ ಹಮ್’ ನ ಸಣ್ಣ ಭಾಗವನ್ನು ಹಾಡುವ ಮೂಲಕ ಪ್ರಾರಂಭಿಸಿದರು. ಅವರ ಮೊದಲ ಪೂರ್ಣ ಪ್ರಮಾಣದ ಬಾಲಿವುಡ್ ಹಾಡು, ಆದಾಗ್ಯೂ, 1999 ರಲ್ಲಿ ಹಮ್ ದಿಲ್ ದೇ ಚುಕೆ ಸನಮ್‌ನ ಅತ್ಯಂತ ಜನಪ್ರಿಯವಾದ ‘ತಡಪ್ ತಡಪ್ ಕೆ’ ಆಗಿತ್ತು. ಹೀಗೆ ತಮ್ಮ ಮಧುರ ಕಂಠದಿಂದ ಅದೆಷ್ಟೋ ಸುಮಧುರ ಹಾಡುಗಳನ್ನು ಹಾಡಿದ ಗಾಯಕ ಇಂದು ಇಲ್ಲ ಎಂಬ ಸಂಗತಿಯನ್ನು ಅರಗಿಸಿಕೊಳ್ಳಲು ಅಸಾಧ್ಯವಾಗಿದೆ.