Bengaluru : ಕಳೆದ ಸೆಪ್ಟಂಬರ್ ತಿಂಗಳಲ್ಲಿ ಬಿಡುಗಡೆಯಾದ ಸ್ಯಾಂಡಲ್ ವುಡ್ ಸೆನ್ಸೇಷನ್ ಕಾಂತಾರ(Postpone Kantara OTT Release) ಸಿನಿಮಾ ಸದ್ಯ ರಾಜ್ಯ ಮಾತ್ರವಲ್ಲದೇ, ದೇಶದ-ವಿದೇಶದ ಚಿತ್ರಮಂದಿರಗಳಲ್ಲಿ ಸಂಚಲನ ಸೃಷ್ಟಿಸಿ, ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ನಟ, ನಿರ್ದೇಶಕ ರಿಷಬ್ ನಟಿ(Rishab Shetty) ನಿರ್ದೇಶಿಸಿ, ನಟಿಸಿದ ಕಾಂತಾರ ಇಲ್ಲಿಯವರೆಗೂ ಬರೋಬ್ಬರಿ 300 ಕೋಟಿಗೂ ಅಧಿಕ ಕಲೆಕ್ಷನ್ ದಾಲಿಸಿದೆ.
ಒಂದು ತಿಂಗಳು ಕಳೆದರೂ ಚಿತ್ರಮಂದಿರಗಳಲ್ಲಿ ಕಾಂತಾರ ಅಬ್ಬರ ಕಡಿಮೆಯಾಗಿಲ್ಲ ಎಂಬುದಕ್ಕೆ ಚಿತ್ರಮಂದಿರಗಳತ್ತ ಸಿನಿಪ್ರೇಕ್ಷಕರು ನುಗ್ಗುತ್ತಿರುವುದೇ ಜ್ವಲಂತ ಸಾಕ್ಷಿ!
ಈ ಮಧ್ಯೆ ಚಿತ್ರತಂಡ ಕಾಂತಾರ ಸಿನಿಮಾವನ್ನು ಒಟಿಟಿ(Postpone Kantara OTT Release) ವೇದಿಕೆಯಲ್ಲಿ ಬಿಡುಗಡೆಗೊಳಿಸಲು ದಿನಾಂಕ ಕೂಡ ನಿಗಡಿಪಡಿಸಿದೆ. ಪ್ರಾರಂಭದಲ್ಲಿ ತಯಾರಕರು ನವೆಂಬರ್ 4 ರೊಳಗೆ OTT ವೇದಿಕೆಯಲ್ಲಿ ಬಿಡುಗಡೆಗೊಳಿಸಲು ದಿನಾಂಕ ನಿಗದಿ ಪಡಿಸಿದ್ದರು.
ಆದ್ರೆ, ಚಿತ್ರ ಕರ್ನಾಟಕ ರಾಜ್ಯ ಮಾತ್ರವಲ್ಲದೇ, ದೇಶದ ನಾನಾ ಭಾಗದ ಚಿತ್ರಮಂದಿರಗಳಲ್ಲಿ ಅದ್ಭುತ ಪ್ರದರ್ಶನ ಕಾಣುತ್ತಿರುವುದರಿಂದ OTT ದಿನಾಂಕವನ್ನು ತಂಡ ಮುಂದೂಡಿತ್ತು.
ಇದನ್ನೂ ಓದಿ : https://vijayatimes.com/cm-to-gadag-railway/
ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿ ಓಟವನ್ನು ಕಾಣುತ್ತಿರುವ ಕಾಂತಾರ, ಸದ್ಯ ಅನೇಕ ದಾಖಲೆಗಳನ್ನು ಒಡೆದು ಮುನ್ನುಗ್ಗುತ್ತಿದೆ. ಹೀಗಿರುವಾಗ OTT ಬಿಡುಗಡೆಯನ್ನು ಮುಂದೂಡಿ ಎಂದು ಸಿನಿಪ್ರೇಕ್ಷಕರು ಹಾಗೂ ಸಿನಿ ತಜ್ಞರು ಅಭಿಪ್ರಾಯಿಸಿದ್ದಾರೆ.
ಈಗಾಗಲೇ ಒಂದು ಸುತ್ತು ಮಾತುಕತೆ ಮಾಡಿ ನವೆಂಬರ್ 18ಕ್ಕೆ ದಿನಾಂಕ ಮುಂದೂಡಲಾಗಿದೆ ಮತ್ತು ಸರಿಯಾಗಿದೆ ಎಂದು ತಂಡ ತಿಳಿಸಿದೆ.
ಈ ಚಿತ್ರವು ತೆಲುಗು ಮತ್ತು ಹಿಂದಿ ಎರಡು ಭಾಷೆಗಳಲ್ಲೂ ಊಹೆಗೂ ಮೀರಿ ದಾಖಲೆಗಳನ್ನು ನಿರ್ಮಿಸಿದೆ. OTT ಬಿಡುಗಡೆ ಬಗ್ಗೆ ಮಾತನಾಡಿದ ಹಲವರು “ಯಾವುದೇ ಅಕಾಲಿಕ ಬಿಡುಗಡೆಯು ಬುದ್ಧಿವಂತ ನಿರ್ಧಾರವಲ್ಲ.
ಈಗಲೇ ಓಟಿಟಿ ಬಿಡುಗಡೆ ಮಾಡುವುದರಿಂದ ಚಿತ್ರಮಂದಿರಗಳಿಗೆ ಬರುತ್ತಿರುವ ಪ್ರೇಕ್ಷಕರ ಸಂಖ್ಯೆ ದಿಢೀರ್ ಕುಸಿಯುತ್ತದೆ.

ಹೀಗಾಗಿ ಬಿಡುಗಡೆ ದಿನಾಂಕವನ್ನು ಮುಂದೂಡಿ ಎಂಬ ಅಭಿಪ್ರಾಯಗಳು ವ್ಯಾಪಕವಾಗಿ ವ್ಯಕ್ತವಾಗಿವೆ. ನಮ್ಮ ಸಂಸ್ಕೃತಿ, ನಮ್ಮ ಮಣ್ಣಿನ ಕಥೆ ಆಧಾರಿತ ಕಾಂತಾರವನ್ನು ಜಗವೇ ಮೆಚ್ಚಿ ಮಾತನಾಡುತ್ತಿದ್ದು,
ಕಾಂತಾರವನ್ನು ಚಿತ್ರಮಂದಿರದಲ್ಲಿ ನೋಡಿ ಅನುಭವಿಸಲು ಹೆಚ್ಚು ಸೂಕ್ತ, ಹಾಗಾಗಿ ಸಿನಿಪ್ರೀಯರು ಓಟಿಟಿಯಲ್ಲಿ ಕಾಂತಾರ ಬಿಡುಗಡೆಯನ್ನು ಮುಂದೂಡಿ, ಚಿತ್ರಮಂದಿರಗಳಲ್ಲಿ ವೀಕ್ಷಿಸಲು ಹೆಚ್ಚು ಅವಕಾಶವನ್ನು ಮಾಡಿಕೊಡುವುದು ಒಳಿತು ಎಂದು ಹೇಳುತ್ತಿದ್ದಾರೆ.
ಇದನ್ನೂ ಓದಿ : https://vijayatimes.com/priyanka-chopra-likes-up/
ಹಲವು ರಾಜ್ಯಗಳಲ್ಲಿ ಕಾಂತಾರ ಚಿತ್ರಕ್ಕೆ ಒಳ್ಳೆ ಅಭಿಪ್ರಾಯಗಳು ವ್ಯಾಪಕವಾಗಿ ವ್ಯಕ್ತವಾಗುತ್ತಿದೆ, ಉತ್ತಮ ಬೆಂಬಲ ದೊರೆಯುತ್ತಿದೆ.
OTTಯ ಬಿಡುಗಡೆ ದಿನಾಂಕವನ್ನು ಬದಲಾಯಿಸಲು OTT ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ಅಮೆಜಾನ್ ಪ್ರೈಮ್(Amazon Prime) ವೀಡಿಯೊದೊಂದಿಗೆ ಚಿತ್ರದ ತಯಾರಕರು ಮತ್ತೆ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಹೊಸ OTT ಬಿಡುಗಡೆ ದಿನಾಂಕವು ನವೆಂಬರ್ ತಿಂಗಳ ಕೊನೆಯಲ್ಲಿರಬಹುದು ಎಂದು ಹೇಳಲಾಗುತ್ತಿದೆ.