ಕನ್ನಡ ಚಿತ್ರರಂಗದ(Sandalwood) ಬಹುನಿರೀಕ್ಷಿತ(Most Expected) ಕರ್ನಾಟಕ ರತ್ನ(Karnataka Ratna), ಕನ್ನಡಿಗರ ಯುವರತ್ನ(Yuvarathna) ಪವರ್ ಸ್ಟಾರ್(Powerstar) ಪುನೀತ್ ರಾಜ್ ಕುಮಾರ್(Puneeth Rajkumar) ಅವರು ಅಭಿನಯಿಸಿದ ಜೇಮ್ಸ್(James) ಚಿತ್ರದ ಸಲಾಂ ಸೋಲ್ಜರ್ ಲಿರೀಕಲ್ ಹಾಡು ಇಂದು ಬಿಡುಗಡೆಯಾಗಿದೆ. ಕನ್ನಡ ಚಿತ್ರರಂಗದಲ್ಲಿ ಸದ್ಯ ಮಾರ್ಚ್ ತಿಂಗಳು ಕನ್ನಡ ಸಿನಿರಸಿಕರಿಗೆ ಮಾತ್ರವಲ್ಲದೇ, ಪ್ರತಿಯೊಬ್ಬ ಕನ್ನಡಿಗನಿಗೂ ಹಬ್ಬವಾಗಿದೆ.
ಹೌದು, ಮಾರ್ಚ್ ತಿಂಗಳ 17ನೇ ತಾರೀಖು ಕನ್ನಡಿಗರ ಅಚ್ಚುಮೆಚ್ಚಿನ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬ. ಪುನೀತ್ ಅವರ ಹುಟ್ಟುಹಬ್ಬದ ದಿನವೇ ಅವರು ಅಭಿನಯಿಸಿದ ಜೇಮ್ಸ್ ಚಿತ್ರವನ್ನು ಬಿಡುಗಡೆಗೊಳಿಸಲು ಜೇಮ್ಸ್ ಚಿತ್ರತಂಡ ಸಜ್ಜಾಗಿದೆ. ಒಟ್ಟಾರೆ ಅಭಿಮಾನಿಗಳಿಗೆ ಮಾರ್ಚ್ 17 ಹಬ್ಬವಾದರೇ, ಕನ್ನಡ ಚಿತ್ರರಂಗಕ್ಕೆ ಕನ್ನಡ ಚಿತ್ರೋತ್ಸವ ದಿನವಾಗಿ ಸಂಭ್ರಮಿಸಲಾಗುವುದು. ಪವರ್ ಸ್ಟಾರ್ ಅಭಿಮಾನಿಗಳು ಆತುರದಿಂದ, ಕಾತುರದಿಂದ ಕಾಯುತ್ತಿರುವ ಜೇಮ್ಸ್ ಚಿತ್ರ ಬಿಡುಗಡೆ ದಿನ ಸಮೀಪಿಸುತ್ತಿರುವ ಹಿನ್ನೆಲೆ, ಚಿತ್ರತಂಡ ಅಪ್ಪು ಅಭಿಮಾನಿಗಳಿಗೆ ಸಲಾಂ ಸೋಲ್ಜರ್ ಹಾಡಿನ ತುಣಕನ್ನು ಲಿರಿಕಲ್ ಮೂಲಕ ಬಿಡುಗಡೆಗೊಳಿಸಿದೆ.
ಪುನೀತ್ ರಾಜ್ ಕುಮಾರ್ ಅವರ ಸಂಸ್ಥೆಯ ಪಿಆರ್‍ಕೆ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಳಿಸಿದೆ. ಬಿಡುಗಡೆಗೊಳಿಸಿ ಕೇವಲ 2 ಗಂಟೆಯಲ್ಲಿ 2.5 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ ಜೊತೆಗೆ ವೀಕ್ಷಣೆಯ ಸಂಖ್ಯೆ ಮತ್ತಷ್ಟು ಮುನ್ನುಗುತ್ತಿದೆ. ಕೋಟ್ಯಾಂತರ ಸಂಖ್ಯೆಯಲ್ಲಿರುವ ಪವರ್ ಸ್ಟಾರ್ ಅಭಿಮಾನಿಗಳು ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲಾ ಕಡೆಯೂ ದೊಡ್ಡ ದೊಡ್ಡ ಕಟೌಟ್ ಗಳನ್ನು ಈಗಾಗಲೇ ನಿಲ್ಲಿಸುವ ಮೂಲಕ ಸಂಭ್ರಮಿಸುತ್ತಿದ್ದಾರೆ.
ನಿನ್ನೆ ಗುರುವಾರವಷ್ಟೇ ಜೇಮ್ಸ್ ಚಿತ್ರಕ್ಕೆ ಟಿಕೆಟ್ ಕಾಯ್ದಿರಿಸಿಕೊಳ್ಳಲು ಸಿನಿ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲಾಯಿತು. ಮುಂಗಡ ಬುಕಿಂಗ್ ಅವಕಾಶ ಕೊಟ್ಟಿದ್ದೆ ತಡ, ಚಿತ್ರಮಂದಿರಗಳ ಟಿಕೆಟ್ ಗಳು ಸೇಲ್ ಆಗಿ, ಸಂಪೂರ್ಣವಾಗಿ ಗುರುವಾರದಿಂದ ಭಾನುವಾರದ ಪ್ರದರ್ಶನಗಳು ಭರ್ತಿಯಾಗಿದೆ! ಈ ವಿಚಾರ ನಿಜಕ್ಕೂ ಖುಷಿ ಪಡುವ ಸಂಗತಿ. ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಪ್ರಾರಂಭವಾಗಿದ್ದು, ಇನ್ನು 7 ದಿನಗಳಷ್ಟೇ ಬಾಕಿ ಉಳಿದಿದೆ. ಪವರ್ ಸ್ಟಾರ್ ಅಭಿಮಾನಿಗಳ ಚಿತ್ತ ಜೇಮ್ಸ್ ನತ್ತ ಸಾಗಿದೆ.
- ಮೋಹನ್ ಶೆಟ್ಟಿ