ಗುರುವಾರ(Thursday) ಪವರ್ ಸ್ಟಾರ್(Powerstar) ಪುನೀತ್ ರಾಜ್‍ಕುಮಾರ್(Puneeth Rajkumar) ಅವರು ಅಭಿನಯದ ಬಹುನಿರೀಕ್ಷಿತ ಚಿತ್ರ ಜೇಮ್ಸ್(James) ಸಿನಿಮಾ ದೇಶಾದ್ಯಂತ ಬಿಡುಗಡೆಗೊಂಡಿತು. ಅಪ್ಪು ಅಭಿನಯದ ಜೇಮ್ಸ್ ಚಿತ್ರ ಒಂದೆಡೆ ಬಿಡುಗಡೆಗೊಂಡರೆ, ಮತ್ತೊಂದೆಡೆ ಜೇಮ್ಸ್ ಸಿನಿಮಾ ಬಿಡುಗಡೆಗೊಂಡಿದೆ. ಅಪ್ಪು(Appu) ಅವರ ಜನ್ಮದಿನ ಮತ್ತು ಜೇಮ್ಸ್ ಸಿನಿಮಾ ಎರಡು ಒಂದೇ ದಿನ ಬಿಡುಗಡೆಯಾಗಿರುವುದು ಅಭಿಮಾನಿಗಳಿಗೆ ಸಂತಸ ನೀಡಿದೆ.

ಈ ಸಂಭ್ರಮವನ್ನು ಸವಿಯಲು, ಪವರ್ ಸ್ಟಾರ್ ಅವರ ಮೇಲಿರುವ ಅಭಿಮಾನಕ್ಕೆ ಡಾ. ಅಂಬೇಡ್ಕರ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ವಿದ್ಯಾರ್ಥಿಗಳಿಗೆ ಎರಡು ದಿನ ಕಾಲೇಜಿಗೆ ರಜೆಯನ್ನು ಘೋಷಣೆ ಮಾಡಿದೆ. ಬೆಳಗಾವಿ ಸ್ವಾಯತ್ತ(Autonamous) ಡಾ. ಅಂಬೇಡ್ಕರ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ಆಡಳಿತ ಮಂಡಳಿ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಮೇಲಿರುವ ಪ್ರೀತಿ, ಅಭಿಮಾನ ವ್ಯಕ್ತಪಡಿಸಲು ಮಾರ್ಚ್ 17 ಮತ್ತು ಇಂದು 18 ಶುಕ್ರವಾರ ರಜೆಯನ್ನು ಘೋಷಿಸಿದೆ.

ಕಾಲೇಜನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮೊದಲನೇ ಸೆಮ್ ಇಂದ ಮೂರನೇ ಸೆಮ್ ವಿದ್ಯಾರ್ಥಿಗಳಿಗೆ ವಿಶೇಷ ಸೂಚನೆ : ರಾಜ್ಯದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಸರ್ ಅವರ ಹುಟ್ಟುಹಬ್ಬ 17ನೇ ದಿನವಾಗಿದ್ದು, ಜೊತೆಗೆ 18ನೇ ತಾರೀಖು ಜೇಮ್ಸ್ ಬಿಡುಗಡೆಯ ಕಾರಣಕ್ಕಾಗಿ ವಿದ್ಯಾರ್ಥಿಗಳಿಗೆ ರಜೆ ಘೋಷಿಸಲಾಗಿದೆ ಎಂದು ಸುತ್ತೋಲೆಯ ಮೂಲಕ ತಿಳಿಸಿದ್ದಾರೆ. ಈ ಕಾಲೇಜಿನ ವಿಶೇಷ ಅಭಿಮಾನಕ್ಕೆ ಹಲವರು ಧನ್ಯವಾದ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.