Visit Channel

`ಪವರ್ ಫುಲ್’ ಆಗಿ ಎಂಟ್ರಿ ಕೊಡಲಿದ್ದಾರೆ `ಪವರ್ ಸ್ಟಾರ್’ ಜೇಮ್ಸ್!

james

ಕನ್ನಡ ಚಿತ್ರರಂಗದ(Sandalwood) ಬಹುನಿರೀಕ್ಷಿತ(Most Expected) ಕರ್ನಾಟಕ ರತ್ನ(Karnataka Ratna), ಕನ್ನಡಿಗರ ಯುವರತ್ನ(Yuvarathna) ಪವರ್ ಸ್ಟಾರ್(Powerstar) ಪುನೀತ್ ರಾಜ್ ಕುಮಾರ್(Puneeth Rajkumar) ಅವರು ಅಭಿನಯಿಸಿದ ಜೇಮ್ಸ್(James) ಮಾರ್ಚ್ ತಿಂಗಳ 17ನೇ ತಾರೀಖು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಂಬ ದೈವವನ್ನು ಯಾರು ಮರೆಯಲು ಸಾಧ್ಯ ಹೇಳಿ? ಕನ್ನಡಿಗರು ಪ್ರತಿದಿನ ಪೂಜಿಸಿ ಆರಾಧಿಸುವ ದೇವರಾಗಿ ಪುನೀತ್ ರಾಜ್ ಕುಮಾರ್ ಅವರು ಇಂದು ಕೋಟ್ಯಾಂತರ ಕನ್ನಡಿಗರ ಹೃದಯದಲ್ಲಿ ನೆಲೆಸಿದ್ದಾರೆ.

puneeth powerstar

ಇಡೀ ಜಗತ್ತಿಗೆ ಅವರು ಪುನೀತ್ ರಾಜ್ ಕುಮಾರ್, ಆದರೆ ಕನ್ನಡಿಗರಿಗೆ ಮಾತ್ರ ಅವರು ಎಂದೆಂದಿಗೂ ಪ್ರೀತಿಯ ಅಪ್ಪುನೇ. ಮಗುವಿನಂತ ನಿಷ್ಕಲಶ ನಗುವಿನ ಒಡೆಯ, ಸರಳತೆಯ ಸಹೋದರ, ಪ್ರೀತಿಯ ಸಾಹುಕಾರ ಈ ನಮ್ಮ ಅಚ್ಚುಮೆಚ್ಚಿನ ಪವರ್ ಸ್ಟಾರ್. ಕನ್ನಡಿಗರು, ಕನ್ನಡ ಚಿತ್ರರಂಗ ಜೊತೆಗೆ ಅಪ್ಪು ಅವರ ಕೋಟ್ಯಾಂತರ ಅಭಿಮಾನಿಗಳಿಗೆ ಹಬ್ಬದ ವಾತಾವರಣ ಈಗಾಗಲೇ ಸೃಷ್ಟಿಯಾಗಿದೆ. ಕನ್ನಡಿಗರ ಅಚ್ಚುಮೆಚ್ಚಿನ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬ ಜೊತೆಗೆ ಪುನೀತ್ ಅವರ ಹುಟ್ಟುಹಬ್ಬದ ದಿನವೇ ಅವರು ಅಭಿನಯಿಸಿದ ಜೇಮ್ಸ್ ಚಿತ್ರವನ್ನು ಬಿಡುಗಡೆಗೊಳಿಸಲು ಜೇಮ್ಸ್ ಚಿತ್ರತಂಡ ಸಜ್ಜಾಗಿದೆ.

Powerstar james

ಆ ದಿನವನ್ನು ಕನ್ನಡ ಚಿತ್ರೋತ್ಸವ ದಿನವಾಗಿ ಸಂಭ್ರಮಿಸಲಾಗುವುದು. ಶುಕ್ರವಾರ ಸಲಾಂ ಸೋಲ್ಜರ್ ಹಾಡಿನ ತುಣಕನ್ನು ಲಿರಿಕಲ್ ರೂಪದಲ್ಲಿ ಚಿತ್ರತಂಡ ಬಿಡುಗಡೆಗೊಳಿಸಿದೆ. ಪುನೀತ್ ರಾಜ್ ಕುಮಾರ್ ಅವರ ಸಂಸ್ಥೆಯ ಪಿಆರ್ಕೆ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಳಿಸಿ ಕೇವಲ 2 ಗಂಟೆಯಲ್ಲಿ 2.5 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ ಜೊತೆಗೆ ವೀಕ್ಷಣೆಯ ಸಂಖ್ಯೆ ಮತ್ತಷ್ಟು ಮುನ್ನುಗುತ್ತಿದೆ. ಕೋಟ್ಯಾಂತರ ಸಂಖ್ಯೆಯಲ್ಲಿರುವ ಪವರ್ ಸ್ಟಾರ್ ಅಭಿಮಾನಿಗಳು ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲಾ ಕಡೆಯೂ ದೊಡ್ಡ ದೊಡ್ಡ ಕಟೌಟ್ ಗಳನ್ನು ಈಗಾಗಲೇ ನಿಲ್ಲಿಸುವ ಮೂಲಕ ಸಂಭ್ರಮಿಸುತ್ತಿದ್ದಾರೆ. ನಿನ್ನೆ ಗುರುವಾರವಷ್ಟೇ ಜೇಮ್ಸ್ ಚಿತ್ರಕ್ಕೆ ಟಿಕೆಟ್ ಕಾಯ್ದಿರಿಸಿಕೊಳ್ಳಲು ಸಿನಿ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲಾಯಿತು.

powerstar

ಮುಂಗಡ ಬುಕಿಂಗ್ ಅವಕಾಶ ಕೊಟ್ಟಿದ್ದೆ ತಡ, ಚಿತ್ರಮಂದಿರಗಳ ಟಿಕೆಟ್ ಗಳು ಸೇಲ್ ಆಗಿದೆ, ಇದರ ಜೊತೆಗೆ ಅಷ್ಟು ಚಿತ್ರಮಂದಿರಗಳಲ್ಲಿ ಗುರುವಾರದಿಂದ ಭಾನುವಾರದವರೆಗಿನ ಶೋಗಳು ಸಂಪೂರ್ಣ ಬುಕ್ ಆಗಿದೆ. ಯಾವ ಸೀಟ್ಸ್ ಕೂಡ ಲಭ್ಯವಿಲ್ಲ! ಎಲ್ಲವೂ ಭರ್ತಿ, ಭರ್ತಿ! ತಾವು ಪ್ರೀತಿಯಿಂದ ಆರಾಧಿಸುವ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಈಗಾಗಲೇ ಜೇಮ್ಸ್ ಸಿನಿಮಾ ಸಾಕಷ್ಟು ಕುತೂಹಲ ಕೆರಳಿಸಿದ್ದು, ಸಿನಿಮಾ ತೆರೆಕಾಣುವ ಮುನ್ನವೇ ಟೀಸರ್ ಸಿಕ್ಕಾಪಟ್ಟೆ ಸೌಂಡ್ ಮಾಡಿದೆ. ಮುಖ್ಯವಾಗಿ ಪುನೀತ್ ರಾಜ್ ಕುಮಾರ್ ಅವರನ್ನು ಒಬ್ಬ ಮಿಲಿಟರಿ ಅಧಿಕಾರಿ ಪಾತ್ರದಲ್ಲಿ ನೋಡಲು ಮತ್ತಷ್ಟು ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

Powerstar james

ಸಿನಿಮಾದ ಎರಡು ಹಾಡುಗಳಲ್ಲಿ ಬೋಲೋ ಬೋಲೋ ಜೇಮ್ಸ್ ಲಿರಿಕಲ್, ಟ್ರೇಡ್ ಮಾರ್ಕ್ ಮತ್ತು ಶುಕ್ರವಾರ ಬಿಡುಗಡೆಗೊಂಡ ಸಲಾಂ ಸೋಲ್ಜರ್ ಲಿರಿಕಲ್ ಹಾಡು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ರಾರಾಜಿಸಿದ್ದು, ಎಲ್ಲಾ ಹಾಡುಗಳು ಮಿಲಿಯನ್ ಗಟ್ಟಲೇ ವೀಕ್ಷಣೆ ಪಡೆದುಕೊಂಡಿದೆ. ಇದು ಸಿನಿಮಾ ಬಿಡಗಡೆಗೂ ಮುನ್ನ ಸಿಕ್ಕಿರುವ ದೊಡ್ಡ ಯಶಸ್ಸು ಎಂದೇ ಹೇಳಬಹುದು.

powerstar rajkumar
ಜೇಮ್ಸ್ ಸಿನಿಮಾ ಬಿಡುಗಡೆಗೆ ಕೇವಲ 4 ದಿನಳಷ್ಟೇ ಬಾಕಿ ಉಳಿದಿದ್ದು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ತೆರೆ ಮೇಲೆ ನೋಡಲು ಸಿನಿ ಪ್ರೇಕ್ಷಕರು, ಅಪ್ಪು ಅಭಿಮಾನಿಗಳು ಮತ್ತು ಕನ್ನಡ ಚಿತ್ರರಂಗ ಪ್ರತಿ ನಿಮಿಷಗಳನ್ನು ಕಾತುರದಿಂದ ಎಣಿಸುತ್ತಿದೆ. ಒಟ್ಟಾರೆ ಪವರ್ ಸ್ಟಾರ್ ಅಪ್ಪು ಅವರ ಜೇಮ್ಸ್ ಸಿನಿಮಾ ಮತ್ತು ಹುಟ್ಟುಹಬ್ಬ ಎರಡು ಕೂಡ ಒಂದೇ ದಿನವಾಗಿರುವುದು ಕರುನಾಡಿಗೆ ಹಬ್ಬದ ವಾತಾವರಣ ಸೃಷ್ಟಿಮಾಡಿದೆ ಎಂದೇ ಹೇಳಬಹುದು.
  • ಮೋಹನ್ ಶೆಟ್ಟಿ

Latest News

Pakistan
ದೇಶ-ವಿದೇಶ

ಪಾಕಿಸ್ತಾನ : ಗರ್ಭಿಣಿ ಮಹಿಳೆ ಮೇಲೆ ಭದ್ರತಾ ಸಿಬ್ಬಂದಿ ಹಲ್ಲೆ ; ಭಾರೀ ಆಕ್ರೋಶ

ನೋಮನ್ ಗ್ರ್ಯಾಂಡ್ ಸಿಟಿ ಅಪಾರ್ಟ್ಮೆಂಟ್ ಕಟ್ಟಡದ ಹೊರಗೆ ಭದ್ರತಾ ಸಿಬ್ಬಂದಿ ಗರ್ಭಿಣಿ ಮಹಿಳೆಯನ್ನು ಥಳಿಸಿದ್ದಾರೆ ಎಂದು ಪಾಕ್ ಮೂಲದ ಜಿಯೋ ನ್ಯೂಸ್ ವರದಿ ಮಾಡಿದೆ.

Culprits
ಪ್ರಮುಖ ಸುದ್ದಿ

ಹಾಲಿನ ವ್ಯಾಪಾರದ ಸೋಗಿನಲ್ಲಿ ಖೋಟಾ ನೋಟು ದಂಧೆ ; ಬಿಜೆಪಿ ಮುಖಂಡ ಸೇರಿ ಮೂವರ ಬಂಧನ

ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದು, ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

rss
ರಾಜಕೀಯ

RSS ಭಾರತದಲ್ಲಿನ ತಾಲಿಬಾನ್ ಇದ್ದಂತೆ : ಕಾಂಗ್ರೆಸ್‌

ಆರ್‌ಎಸ್‌ಎಸ್‌ ಎಂದಿಗೂ ಭಾರತೀಯತೆಯನ್ನು ಒಪ್ಪಿಲ್ಲ, ಮುಂದೆಯೂ ಒಪ್ಪುವುದಿಲ್ಲ. ಪ್ರತ್ಯೇಕ ಐಡೆಂಟಿಟಿಯಲ್ಲಿ ಇರಲು ಭಯಸುವ ಆರ್‌ಎಸ್‌ಎಸ್‌, ಭಾರತದಲ್ಲಿನ ತಾಲಿಬಾನ್ ಇದ್ದಂತೆ.