ಮಾರ್ಚ್ 17 ರಂದು ವಿಶ್ವದಾದ್ಯಂತ(Worldwide) ಪವರ್ ಸ್ಟಾರ್(Powerstar) ಪುನೀತ್ ರಾಜ್ಕುಮಾರ್(Puneeth Rajkumar) ಅವರು ಅಭಿನಯದ ಜೇಮ್ಸ್(James) ಸಿನಿಮಾ(Cinema) ಯಶಸ್ವಿಯಾಗಿ ಬಿಡುಗಡೆಯಾಗುವುದಲ್ಲದೇ, ಯಶಸ್ವಿ(Success) ಪ್ರದರ್ಶನ ಕಾಣುತ್ತಿದೆ. ಈ ಮಧ್ಯೆ ಕೆಲ ಅನಾಮಿಕರು ಹಿಂದಿ ಭಾಷೆಯಲ್ಲಿರುವ ದ ಕಾಶ್ಮೀರ್ ಫೈಲ್ಸ್(The Kashmir Files) ಸಿನಿಮಾವನ್ನು ತೋರಿಸಿ, ಚಿತ್ರಮಂದಿರವೆಲ್ಲಾ ಜೇಮ್ಸ್ ಸಿನಿಮಾ ತುಂಬಿದೆ.

ಈ ಕಾರಣ ಜೇಮ್ಸ್ ಸಿನಿಮಾ ತೆಗೆದು ಚಿತ್ರಮಂದಿರದಲ್ಲಿ ದ ಕಾಶ್ಮೀರ್ ಫೈಲ್ಸ್ ಪ್ರದರ್ಶಿಸಿ ಎಂದು ಕೆಲ ಅನಾಮಿಕರು ಚಿತ್ರಮಂದಿರದ ಮಾಲೀಕರಿಗೆ ಒತ್ತಡ ಹೇರಿದ್ದಾರೆ. ಹೌದು, ಕರ್ನಾಟಕ ರಾಜ್ಯಾದ್ಯಂತ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಜೇಮ್ಸ್ ಸಿನಿಮಾ ಬಿಡುಗಡೆ ಕಂಡು ಜನರು ಹಬ್ಬದಂತೆ ಸಂಭ್ರಮಿಸುತ್ತಿದ್ದರೆ, ಇತ್ತ ಇಂಥ ವ್ಯಕ್ತಿಗಳು ಹಿಂದಿ ಚಿತ್ರಗಳಿಗಾಗಿ, ಬಿಡುಗಡೆ ಕಂಡು ಒಂದು ವಾರವೂ ಕಳೆದಿಲ್ಲ ಅಷ್ಟು ಬೇಗ ಕನ್ನಡ ಸಿನಿಮಾವನ್ನು ಹೊರಹಾಕಿ ಎಂದು ಹೇಳುವಷ್ಟು ಅದೇನೂ ವ್ಯಾಮೋಹ ಹೆಚ್ಚಾಗಿದೆಯೋ ತಿಳಿಯದು? ಇಡೀ ಕರುನಾಡು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಜೇಮ್ಸ್ ಸಿನಿಮಾ ಹೆಸರಿನಲ್ಲಿ ಜಾತ್ರೆ ಮಾಡಿ ಆಚರಣೆ ಮಾಡುತ್ತಿದ್ದಾರೆ.

ಸದ್ಯ ಈ ಸುದ್ದಿ ಕೇಳಿ ಕನ್ನಡಿಗರಿಗೆ ಮತ್ತು ಅಪ್ಪು ಅವರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎನ್ನಬಹುದು. ದ ಕಾಶ್ಮೀರ್ ಫೈಲ್ಸ್ ಸಿನಿಮಾ ಹಾಕುವಂತೆ ಒತ್ತಾಯ ಕೇಳಿಬಂದಿದ್ದು, ಈ ಕುರಿತು ಜೇಮ್ಸ್ ಸಿನಿಮಾದ ನಿರ್ಮಾಪಕರು ಮತ್ತು ಹಂಚಿಕೆದಾರರಾದ ಕಿಶೋರ್ ಪತ್ತಿಕೊಂಡ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯನವರ ಬಳಿ ಹೋಗಿ ಮಾತನಾಡಿದ್ದಾರೆ ಎನ್ನಲಾಗಿದೆ. ಸೋಮವಾರ ಭೇಟಿಯಾಗಿ ಮಾತುಕುತೆ ನಡೆಸಿದ್ದಾರೆ ಎಂಬುದು ತಿಳಿದುಬಂದಿದೆ. ಈ ಬಗ್ಗೆ ಪ್ರತಿಕ್ರಿಯೇ ನೀಡಿದ ಸಿದ್ದರಾಮಯ್ಯನವರು, ಪುನೀತ್ ರಾಜ್ಕುಮಾರ್ ಅವರ ಚಿತ್ರ ತೆಗೆದು ದ ಕಾಶ್ಮೀರ್ ಫೈಲ್ಸ್ ತೋರಿಸುವಂತೆ ಒತ್ತಡ ಹೇರುವುದು ಸರಿಯಲ್ಲ ಎಂದು ಹೇಳಿದ್ದಾರೆ.