Mumbai : ಟಾಲಿವುಡ್(Tollywood) ಚಿತ್ರರಂಗದ ಡಾರ್ಲಿಂಗ್ ಎಂದೇ ಹೆಸರಾದ ಬಾಹುಬಲಿ ನಟ ಪ್ರಭಾಸ್(Prabhas) ಅವರು ಬಾಲಿವುಡ್ (Prabhas Kriti engagement gossip)ಚಿತ್ರರಂಗದ ನಟಿ ಕೃತಿ ಸನೋನ್(Kriti Sanon)
ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಕೇಳಿಬರುತ್ತಿರುವ ಬೆನ್ನಲ್ಲೇ ಇದೀಗ ನಿಶ್ಚಿತಾರ್ಥದ ಸುದ್ದಿ ಕೂಡ ಹೊರಬಿದ್ದಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಒಂದು ಸುದ್ದಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಕಳೆದ ಒಂದೆರೆಡು ತಿಂಗಳಿನಿಂದ ಡಾರ್ಲಿಂಗ್ ಪ್ರಭಾಸ್(Darling Prabhas) ಹಾಗೂ ನಟಿ ಕೃತಿ ಸನೋನ್
ಅವರ ಮಧ್ಯೆ ಪ್ರೇಮಾಂಕುರ ನಡೆಯುತ್ತಿದೆ ಎಂದು ವದಂತಿಗಳು ಸಾಮಾಜಿಕ ಜಾಲತಾಣವನ್ನು(Social Media) ಆವರಿಸಿಕೊಂಡಿದೆ.
ಡೇಟಿಂಗ್(Dating) ಸುದ್ದಿಗಳ ನಡುವೆಯೇ ಇದೀಗ ಮತ್ತೊಂದು ಸ್ಪೋಟಕ ಸುದ್ದಿ ಹೊರಬಿದ್ದಿದ್ದು,
ಪ್ರಭಾಸ್ ಹಾಗೂ ಕೃತಿ ಸನೋನ್ ಇಬ್ಬರು ಪರಸ್ಪರ ಒಪ್ಪಿಗೆಯ ಮೆರೆಗೆ ನಿಶ್ಚಿತಾರ್ಥಕ್ಕೆ ತಯಾರಿ ನಡೆಸುತ್ತಿದ್ದಾರೆ ಎಂಬ ಸುದ್ದಿ ವರದಿಯಾಗಿದೆ.
ಈ ಹಿಂದೆ ಮಾಧ್ಯಮದವರ ಮುಂದೆ ಹಾಜರಾಗಿದ್ದ ನಟಿ ಕೃತಿ ಸನೋನ್, ನೀವು ಮತ್ತು ನಟ ಪ್ರಭಾಸ್ ಅವರು ಡೇಟಿಂಗ್ ಮಾಡುತ್ತಿರುವ ಸುದ್ದಿ ನಿಜನಾ?
ಹಾಗಂತ ಸಾಮಾಜಿಕ ಜಾಲತಾಣದಲ್ಲಿ(Social Media) ಸುದ್ದಿ ಹರಿದಾಡುತ್ತಿದೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಕೃತಿ ಕಡ್ಡಿ ತುಂಡಾದಂತೆ ನಿರಾಕರಿಸಿದ್ದರು!
ಸದ್ಯ ಇದೀಗ ನಿಶ್ಚಿತಾರ್ಥದ ಸುದ್ದಿ ಹೊರಬೀಳುತ್ತಿದ್ದಂತೆ,
ಈ ಬಗ್ಗೆ ನಟ ಪ್ರಭಾಸ್ ಅವರನ್ನು ಮಾಧ್ಯಮದವರು ಈ ರೀತಿ ಪ್ರಶ್ನಿಸಿದ್ದಾರೆ. ನೀವು ಕೃತಿ ಸನೋನ್ ಅವರೊಂದಿಗೆ ಶೀಘ್ರದಲ್ಲೇ ನಿಶ್ಚಿತಾರ್ಥ(Engagement) ಮಾಡಿಕೊಳ್ಳುವ ವದಂತಿಗಳು ಕೇಳಿಬಂದಿವೆ.
ಈ ಬಗ್ಗೆ ನೀವೇನು ಹೇಳ್ತೀರಾ? ಎಂದು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಪ್ರಭಾಸ್ ಅವರ ತಂಡ ಈ ವದಂತಿಯನ್ನು ತಳ್ಳಿ ಹಾಕಿದೆ!
ಸದ್ಯ ಬಾಲಿವುಡ್(Bollywood) ಅಂಗಳದಲ್ಲಿ ಕೃತಿ ಸನೋನ್ ಮತ್ತು ಪ್ರಭಾಸ್ ಮುಂಬರುವ ಚಿತ್ರ ಆದಿಪುರುಷದಲ್ಲಿ(AdiPurush) ಒಟ್ಟಿಗೆ ನಟಿಸುತ್ತಿದ್ದಾರೆ.
ಈ ಒಂದು ಚಿತ್ರದ ಮೂಲಕ ಇಬ್ಬರು ಹಲವು ಬಾರಿ ಮಾಧ್ಯಮದವರ (Prabhas Kriti engagement gossip) ಕಣ್ಣಿಗೆ ಬಿದ್ದ ಕಾರಣವೋ ಏನೋ,
ಅನೇಕರು ಇವರಿಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮದುವೆಯಾಗಲಿದ್ದಾರೆ ಎಂಬ ವದಂತಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಬ್ಬಿಸುತ್ತಿದ್ದಾರೆ.
ಈ ಮಧ್ಯೆ ಆದಿಪುರುಷ ಚಿತ್ರವನ್ನು ಟಿ-ಸೀರೀಸ್(T- series) ಮತ್ತು ರೆಟ್ರೋಫಿಲ್ಸ್ ನಿರ್ಮಾಣ ಮಾಡಿದೆ ಮತ್ತು ಓಂ ರಾವುತ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಈ ಚಿತ್ರ ಇದೇ ಜೂನ್ 16, 2023 ರಂದು ದೇಶಾದ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಈ ಚಿತ್ರವು ಮಹಾಕಾವ್ಯ ರಾಮಾಯಣವನ್ನು ಆಧರಿಸಿದೆ ಎಂದು ಹೇಳಲಾಗಿದೆ. ಪ್ರಭಾಸ್ ರಾಮನ ಪಾತ್ರದಲ್ಲಿ ಕಾಣಿಸಿಕೊಂಡರೆ,
ಸೈಫ್ ಅಲಿಖಾನ್ ಲಂಕೇಶ್ ಪಾತ್ರದಲ್ಲಿ ನಟಿಸಿದ್ದಾರೆ. ಕೃತಿ ಜಾನಕಿಯಾಗಿ ಮತ್ತು ಸನ್ನಿ ಸಿಂಗ್ ಲಕ್ಷ್ಮಣನಾಗಿ ಕಾಣಿಸಿಕೊಂಡಿದ್ದಾರೆ.