Bengaluru: ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna) ಪೆನ್ ಡ್ರೈವ್ ಪ್ರಕರಣ (case) ದಿನಕ್ಕೊಂದು ತಿರುವು ಪಡೆಯುತ್ತಿದ್ದು, ದಿನಕ್ಕೊಂದು ಹೊಸ ಹೊಸ ಹೆಸರುಗಳು ಸೇರ್ಪಡೆಯಾಗುತ್ತಿದ್ದು, ಇದೀಗ ಪ್ರಕರಣದಲ್ಲಿ ಹೊಸದಾಗಿ ಶಾಸಕ ಎ ಮಂಜು (MLA A Manju) ಹೆಸರು ಕೇಳಿಬರುತ್ತಿದೆ.ಹೌದು.. ಪ್ರಜ್ವಲ್ ರೇವಣ್ಣರದ್ದು (Prajwal Revan’s) ಎನ್ನಲಾದದ ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಇದೀಗ ಅರಕಲಗೂಡು ಶಾಸಕ ಎ. ಮಂಜು ಅವರ ಹೆಸರು ಕೇಳಿಬರುತ್ತಿವೆ.

ಪೆನ್ ಡ್ರೈವ್ (Pen drive) ಹಂಚಿಕೆಯ ಆರೋಪ ಹೊತ್ತಿರುವ ನವೀನ್ ಗೌಡ ಈ ಸಂಬಂಧ ತನ್ನ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ವೊಂದನ್ನು ಹಾಕಿದ್ದು, ಅರಕಲಗೂಡು ಶಾಸಕ ಎ. ಮಂಜು ಅವರೇ ಪೆನ್ ಡ್ರೈವ್ ಹಂಚಿಕೆ (Pen drive sharing) ಮಾಡಿರುತ್ತಾರೆ . ಅಂದು ಅವನ ಬಗ್ಗೆ ಹೇಳಿಕೆ ನೀಡಿದ್ದ ಅವರು ಇದೀಗ ಉಲ್ಟಾ ಹೊಡೆದಿದ್ದಾರೆ . ಅಲ್ಲದೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (CM H.D. Kumaraswamy) ಹೇಳುತ್ತಿರುವ ಮಹಾ ನಾಯಕ ಇವರೇ ಆಗಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಆದರೆ ನವೀನ್ ಗೌಡ (Naveen Gowda) ಈ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದು, ಅವರಿಗಾಗಿ ಎಸ್ಐಟಿ ಅಧಿಕಾರಿಗಳು ತೀವ್ರ ಶೋಧ ನಡೆಸಿದ್ದಾರೆ. ಅಜ್ಞಾತ ಸ್ಥಳದಿಂದ ಪೊಸ್ಟ್ ಮಾಡಿ ಸಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ಇನ್ನು ಎಲ್ಲೆಡೆಯೂ ವೈರಲ್ (Viral) ಆಗಿರುವ ಆ ಪೊಸ್ಟ್ ಅಲ್ಲಿ ” ನನಗೆ ಏಪ್ರಿಲ್20 ರಂದು ಸಿಕ್ಕ ಪೆನ್ ಡ್ರೈವ್ ಅನ್ನು ಅರಕಲಗೂಡು ಶಾಸಕ ಮಂಜು ಅವರಿಗೆ ಕೊಟ್ಟಿದ್ದೇನೆ. ಏಪ್ರಿಲ್ 21 ರಂದು ಅರಕಲಗೂಡು ಮಾರುತಿ ಕಲ್ಯಾಣ ಮಂಟಪದಲ್ಲಿ ಅವರಿಗೆ ನೀಡಿದ್ದೇನೆ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (Former CM H.D. Kumaraswamy) ಅವರು ವಿಡಿಯೊವನ್ನು ವೈರಲ್ ಮಾಡಿದ್ದರ ಹಿಂದೆ ಮಹಾ ನಾಯಕನ ಕೈವಾಡ ಇದೆ ಎಂದು ಹೇಳಿದ್ದರು. ಆ ಮಹಾ ನಾಯಕ ಅರಕಲಗೂಡು ಶಾಸಕರೇ ಇರಬಹುದು ಎಂದು ಪೋಸ್ಟ್ ಮಾಡಿದ್ದಾನೆ. ಸದ್ಯ ನವೀನ್ ಗೌಡ (Naveen Gowda) ಪೋಸ್ಟ್ ಎಲ್ಲೆಡೆ ವೈರಲ್ ಆಗಿದ್ದು ಈ ಪ್ರಕರಣದ ಕುರಿತಾಗಿ ಮತ್ತಷ್ಟು ಕೂತೂಹಲ ಕೆರಳಿಸಿದೆ.