DNA test gave a big twist to the case of former MP Prajwal Revanna!
Bengaluru: ಲೈಂಗಿಕ ದೌರ್ಜನ್ಯ ಆರೋಪ ಹೊತ್ತು ಜೈಲು ಪಾಲಾಗಿರುವ ಹಾಸನದ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ ಕಳೆದ 2 ದಿನಗಳ ಹಿಂದೆ ಡಿಎನ್ಎ ಪರೀಕ್ಷೆ ವರದಿಯನ್ನು ವಿಶೇಷ ತನಿಖಾ ತಂಡಕ್ಕೆ (SIT) ವಿಧಿ ವಿಜ್ಞಾನ ಪ್ರಯೋಗಾಲಯದ (FSL) ತಜ್ಞರು ಸಲ್ಲಿಸಿದ್ದು, ಈ ವರದಿಯಲ್ಲಿ ಮನೆಕೆಲಸದವರು ಹಾಗೂ ಹಾಸನ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಮನೆಯಲ್ಲಿ ಪತ್ತೆಯಾದ ಸೀರೆಗಳು, ಒಳ ಉಡುಪುಗಳಲ್ಲಿ ಸಿಕ್ಕಿದ ವೀರ್ಯಕ್ಕೂ ಪ್ರಜ್ವಲ್ ಅವರ ವೀರ್ಯಕ್ಕೂ ಸಾಮ್ಯತೆ ಇದೆ ಎಂದು ಹೇಳಲಾಗಿದೆ ಅಲ್ಲಿಗೆ ಅವರ ಡಿಎನ್ಎ ಪರೀಕ್ಷೆ ಪಾಸಿಟಿವ್ ಬಂದಿದೆ.
ಈಗಾಗಲೇ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾದ ಅತ್ಯಾಚಾರ ಪ್ರಕರಣಗಳ ತನಿಖೆಗೆ ಎಸ್ಐಟಿ ಅಧಿಕಾರಿಗಳು ಇಳಿದಿದ್ದರು.ಈ ಕೃತ್ಯಗಳು ನಡೆದಿದೆ ಎನ್ನಲಾದ ಹಾಸನದ ಸಂಸದರ ಅತಿಥಿ ಗೃಹ, ಹೊಳೆನರಸೀಪುರ (Holenarasipura) ಮತ್ತು ಬೆಂಗಳೂರಿನ ಬಸವನಗುಡಿ ಮನೆಗಳು ಹಾಗೂ ತೋಟದ ಮನೆಗಳಲ್ಲಿ ಬೆಡ್ ಶೀಟ್ (Bed Sheet), ಕೆಲ ಬಟ್ಟೆಗಳು ಹಾಗೂ ಸಂತ್ರಸ್ತೆಯರಿಂದ ಸೀರೆಗಳು, ಪೆಟ್ಟಿ ಕೋಟ್ಗಳನ್ನು ಜಪ್ತಿ ಮಾಡಿದ್ದರು. ಇವುಗಳಲ್ಲಿ ಪತ್ತೆಯಾದ ಕೂದಲು ಹಾಗೂ ವೀರ್ಯದ ಹೋಲಿಕೆಗೆ ಪ್ರಜ್ವಲ್ ಅವರನ್ನು ಎಸ್ಐಟಿ ಅಧಿಕಾರಿಗಳು ಡಿಎನ್ಎ ಪರೀಕ್ಷೆಗೊಳಪಡಿಸಿದ್ದರು. ಮನೆಗೆಲಸದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ಸಂತ್ರಸ್ತೆಯರ ಸೀರೆಗಳು ಹಾಗೂ ಪೆಟ್ಟಿಕೋಟ್ಗಳು ಈಗ ಪ್ರಜ್ವಲ್ಗೆ ಕಂಟಕ ತಂದಿವೆ.
ಇದೀಗ ಡಿಎನ್ಎ (DNA) ವಿಶ್ಲೇಷಣೆಗೆ ಸಂತ್ರಸ್ತೆಯರು ಹಾಗೂ ಪ್ರಜ್ವಲ್ ಅವರಿಂದ ರಕ್ತ ಮಾದರಿ ಮತ್ತು ಕೂದಲನ್ನು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (FST )ಅಧಿಕಾರಿಗಳು ಕಳುಹಿಸಿದ್ದರು. ಈ ಬಗ್ಗೆ ಪರಿಶೀಲಿಸಿದ ಎಫ್ಎಸ್ಎಲ್ ತಜ್ಞರು, ಎಸ್ಐಟಿಗೆ ಡಿಎನ್ಎ ವರದಿ ಸಲ್ಲಿಸಿದ್ದಾರೆ. ಕೆಲವೇ ದಿನಗಳಲ್ಲಿ ಡಿಎನ್ಎ ವರದಿ ಆಧರಿಸಿ ನ್ಯಾಯಾಲಯಕ್ಕೆ ಪ್ರಜ್ವಲ್ ವಿರುದ್ಧ ಹೆಚ್ಚುವರಿ ಆರೋಪ ಪಟ್ಟಿಯನ್ನು ಎಸ್ಐಟಿ ಅಧಿಕಾರಿಗಳು ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ. ಇದೀಗ ಸಂತ್ರಸ್ತೆಯರ ಸೀರೆಯಿಂದಲೇ ಪಜ್ವಲ್ ರೇವಣ್ಣ ಗೆ ಮತ್ತಷ್ಟು ಕಂಟಕ ಎದುರಾಗುವ ಸಾಧ್ಯತೆಗಳು ಕಂಡುಬರುತ್ತಿದೆ.
Prajwal Revanna Case-Big Twist Breaking News
Bengaluru: Former Hassan JDS MP Prajwal Revanna, who has been jailed on charges of sexual assault, has faced more trouble as the DNA test report was submitted to the Special Investigation Team (SIT) by experts of the Forensic Science Laboratory (FSL) two days ago In this report, it is said that the semen found in the sarees and underwear found in the house of the domestic helper and the former member of Hassan Zilla Panchayat is similar to the sperm of Prajwal, where his DNA test came positive.
The SIT officials had already gone to investigate the rape cases registered against Prajwal Revanna. Bed sheets, some clothes and sarees from the victims were found in the houses and plantation houses of Hassan MP’s guest house, Holenarasipura and Basavanagudi in Bangalore. Petty coats were confiscated. The SIT officials had DNA tested Prajwal for matching the hair and sperm found in them. The sarees and petticoats of the victims in the maid rape cases have now become a thorn in Prajwal’s side.
The officials have now collected blood and hair samples from the victims and Prajwal and sent them to the Forensic Science Laboratory (FST) for DNA analysis. The experts of FSL who examined this, submitted a DNA report to the SIT. It is learned that the SIT officials will submit an additional charge sheet against Prajwal to the court based on the DNA report in a few days. Now it seems that Pajwal Revanna will face more trouble from the saree of the victim.