Prajwal Revanna, who Threatened and Blackmailed, what is in the Charge Sheet?
Bengaluru: ರಾಜ್ಯದೆಲ್ಲೆಡೆ ಭಾರಿ ಸಂಚಲನ ಮೂಡಿಸಿದ್ದ, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ (Sexual Assault) ಎಸಗಿರುವ ಆರೋಪದಲ್ಲಿ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧ ವಿಶೇಷ ತನಿಖಾ ತಂಡ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದೆ.
ಸುಮಾರು 1632 ಪುಟಗಳ ಚಾರ್ಜ್ಶೀಟ್ನಲ್ಲಿ 113 ಸಾಕ್ಷಿಗಳನ್ನು ಎಸ್ಐಟಿ ಉಲ್ಲೇಖಿಸಿದ್ದು, ಪ್ರಜ್ವಲ್ ರೇವಣ್ಣ ದೌರ್ಜನ್ಯ ಹೇಗಿತ್ತು ಎಂಬುದರ ಕುರಿತು ಬಹಿರಂಗಪಡಿಸಿದೆ.
ಬನ್ನಿಕೋಡ ತೋಟದ ಮನೆಯಲ್ಲಿ ಕುಡಿಯಲು ಒಂದು ಚೊಂಬು ನೀರು ತೆಗೆದುಕೊಂಡು ಬಾ ಎಂದು ಹೇಳಿದ್ದ ಪ್ರಜ್ವಲ್, ಮಹಿಳೆ ನೀರು ತೆಗೆದುಕೊಂಡು ಕೊಠಡಿ ಒಳಗೆ ಹೋಗುತ್ತಿದ್ದಂತೆ ಬಾಗಿಲ ಚಿಲಕ ಲಾಕ್ ಮಾಡಿದ್ದ ನಂತರ ಮಹಿಳೆ ಬಾಗಿಲು ತೆಗೆಯಣ್ಣ ಎಂದು ಗೋಗರೆದರೂ ಬಿಡದೆ ದೌರ್ಜನ್ಯ ಎಸಗಿದ್ದಾನೆ. ‘ಸೀರೆ ಮತ್ತು ಬ್ಲೌಸ್ ತೆಗೆಯೇ ತೆಗಿ, ತೆಗೆಯಮ್ಮ’ ಎಂದು ಬಲವಂತ ಮಾಡಿ ದೌರ್ಜನ್ಯ ಎಸಗಿದ್ದಾನೆ ಎಂದು ಚಾರ್ಜ್ಶೀಟ್ (Charge Sheet) ನಲ್ಲಿ ಉಲ್ಲೇಖಿಸಲಾಗಿದೆ.
ಬಲವಂತವಾಗಿ ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರವೆಸಗಿದ್ದಲ್ಲದೆ, ಅದರ ವೀಡಿಯೊವನ್ನೂ ಮಾಡಿಕೊಂಡಿದ್ದ. ಇದಾದ ಬಳಿಕ ಬಸವನಗುಡಿಯ ಮನೆ ಕ್ಲೀನ್ಗೆ ಬಂದಾಗ ಸಹ ಇದೇ ರೀತಿಯ ವರ್ತನೆ ತೋರಿದ್ದ. #PrajwalRevannaCase ಬಟ್ಟೆ ಒಗೆಯಲು ತೆಗೆದುಕೊಂಡು ಹೋಗು ಎಂದು ಕೊಠಡಿಗೆ ಕರೆದಿದ್ದ ಪ್ರಜ್ವಲ್, ಮಹಿಳೆ ಕೊಠಡಿಯೊಳಕ್ಕೆ ಹೋಗಲು ಹಿಂಜರಿದಾಗ ಗದರಿದ್ದ. ರೂಂ ಒಳಗೆ ಹೋಗ್ತಿದ್ದಂತೆ ಚಿಲಕ ಹಾಕಿ ಬಲವಂತವಾಗಿ ಅತ್ಯಾಚಾರ ಎಸಗಿದ್ದಾಗಿ ಮಹಿಳೆ ದೂರಿದ್ದಾರೆ ಎಂಬುದಾಗಿ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ಬೆದರಿಕೆ ಹಾಕಿ, ಬ್ಲ್ಯಾಕ್ಮೇಲ್ ಮಾಡಿದ್ದ ಪ್ರಜ್ವಲ್
ಅತ್ಯಾಚಾರ ಎಸಗಿದ ನಂತರ, ಹೊರಗಡೆ ಈ ವಿಚಾರ ಬಾಯಿಬಿಟ್ಟರೆ ವೀಡಿಯೊವನ್ನು (Video) ನಿನ್ನ ಮಗನಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿ ಬ್ಲ್ಯಾಕ್ಮೇಲ್ ಮಾಡಿದ್ದ ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ. ಸಂಸದ ಎಂಬ ಭಯದಲ್ಲಿ ಮಹಿಳೆ ಸುಮ್ಮನಾಗಿದ್ದರು.
ನಿನ್ನ ತಾತ, ತಂದೆಗೆ ಊಟ ಹಾಕಿದ್ದೀನಿ. ದಯಮಾಡಿ ಬಿಟ್ಟುಬಿಡಪ್ಪ’ ಎಂದು ಮಹಿಳೆ ಗೋಗರೆದರೂ ಬಿಡದೆ ಪ್ರಜ್ವಲ್ ಮೃಗೀಯವಾಗಿ ವರ್ತಿಸಿದ್ದ ಎಂದು ಹೇಳಲಾಗಿದೆ.
ಇನ್ನು ಸಂತ್ರಸ್ತೆಯರ ಸೀರೆಯಲ್ಲಿ ವೀರ್ಯ ಮತ್ತು ಕೂದಲು ಪತ್ತೆಯಾಗಿದ್ದು, ಸೀರೆಯಲ್ಲಿ ಪತ್ತೆಯಾಗಿರುವ ವೀರ್ಯ ಯಾರದ್ದು? ಅತ್ಯಾಚಾರ ಸಂದರ್ಭದಲ್ಲಿ ವೀರ್ಯ ಸೀರೆ ಮೇಲೆ ಬಿದ್ದಿತ್ತೇ ಎಂಬುದನ್ನು ಖಾತರಿ ಮಾಡಿಕೊಳ್ಳಲು ಪ್ರಜ್ವಲ್ ಡಿಎನ್ಎ (DNA) ಪರೀಕ್ಷೆ ನಡೆಸಲಾಗಿದೆ. ಎಫ್ಎಸ್ಎಲ್ನಿಂದ ಡಿಎನ್ಎ ವರದಿಗಾಗಿ ಕಾಯಲಾಗುತ್ತಿದೆ. ಸೀರೆ ಮೇಲೆ ಪತ್ತೆಯಾಗಿರುವ ವೀರ್ಯ ಪ್ರಜ್ವಲ್ಗೆ ಮ್ಯಾಚ್ ಆದ್ರೆ ಸಂಕಷ್ಟ ಕಟ್ಟಿಟ್ಟ ಬುತ್ತಿ ಎನ್ನಲಾಗಿದೆ.
Prajwal Revanna Latest news Kannada Today News
Bengaluru: A special investigation team has submitted a charge sheet to the People’s Court against Prajwal Revanna, a former parliament member of Hassan, on the charge of sexual assault on women, which has created a sensation all over the state.
In the 1632-page charge sheet, the SIT cited 113 witnesses and revealed how Prajwal Revanna’s brutality was.
Prajwal asked to bring a cup of water to drink in the house of Bannikoda farm, when the woman took the water and entered the room, the door was locked. Later, the woman tried to open the door, but he did not let her go. It is mentioned in the charge sheet that he forced her to take off her saree and blouse and took her off.
He not only forcibly raped the woman against her will, but also made a video of it. After this, he showed similar behavior even when he came to clean the Basavanagudi house. #PrajwalRevannaCase to the room to take the laundry Prajwal, who had called, scolded the woman when she hesitated to enter the room. It is mentioned in the charge sheet that the woman complained that she was forced to rape the woman by putting a bolt on her while entering the room.
Prajwal threatened and blackmailed
It is mentioned in the chargesheet that after committing the rape, he blackmailed her by threatening to send the video to her son if he spoke about the matter outside. The woman was quiet in fear of being an MP.
You have prepared food for your grandfather and father. It is said that Prajwal behaved brutally despite the woman’s pleas to leave him.
Semen and hair were found in the saree of the victims, whose sperm was found in the saree? rape A DNA test was conducted to confirm whether the sperm landed on the saree. DNA report from FSL is awaited. Veerya Prajwal, who was found on the saree, is said to have made a difficult butti as a match.