ಗುಜರಾತ್(Gujarat) ರಾಜ್ಯದ ಎಂ.ಎಲ್.ಎ(MLA) ಜಿಗ್ನೇಶ್ ಮೇವಾನಿ(Jignesh Mevani) ಕೊಟ್ಟ ಟ್ವೀಟರ್ ಹೇಳಿಕೆ ಮೇರೆಗೆ ಆತನನ್ನು ಆಸ್ಸಾಂ(Assam) ಪೊಲೀಸರು(Police) ಕಳೆದ ವಾರವಷ್ಟೇ ಬಂಧಿಸಿದ್ದರು.

ಪ್ರಧಾನಿ(PrimeMinister) ನರೇಂದ್ರ ಮೋದಿ(Narendra Modi) ಅವರ ಕುರಿತು ವಿವಾದಾತ್ಮಕ(Controversial) ಹೇಳಿಕೆಯ ಮೂಲಕ ಟ್ವೀಟ್ ಮಾಡಿದ್ದ ಜಿಗ್ನೇಶ್ ಮೇವಾನಿಯನ್ನು ಪೊಲೀಸರು ಪ್ರಚೋದನಕಾರಿ ಹೇಳಿಕೆಯಡಿ ಬಂಧಿಸಿದ್ದರು. ಸದ್ಯ, ಸಾಮಾಜಿಕ ಜಾಲತಾಣದ ಆಕ್ಟಿವ್ ನಟ ಎಂದೇ ಖ್ಯಾತರಾಗಿರುವ ಪ್ರಕಾಶ್ ರಾಜ್(Prakash Raj), ಜಿಗ್ನೇಶ್ ಮೇವಾನಿ ಅವರ ಹೇಳಿಕೆಗೆ ಪರೋಕ್ಷವಾಗಿ ಟ್ವೀಟ್ ಮಾಡುವ ಮೂಲಕ ಬೆಂಬಲ ಸೂಚಿಸಿದ್ದಾರೆ.
ಹೌದು, ಮಹಾತ್ಮ ಗಾಂಧಿಯವರನ್ನು(Mahathma Gandhi) ಕೊಂದ ಗೋಡ್ಸೆ ಕುರಿತು ಕಳೆದ ವಾರ ಆಕ್ರೋಶ ಹೊರಹಾಕಿದ ಜಿಗ್ನೇಶ್ ಮೇವಾನಿ, ಪ್ರಧಾನಿ ನರೇಂದ್ರ ಮೋದಿಯವರು ಗೋಡ್ಸೆಯನ್ನು ದೇವರಂತೆ ಕಾಣುತ್ತಾರೆ. ಅವರು ಸಮುದಾಯಗಳ ನಡುವೆ ಕಿಚ್ಚು ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಗೋದ್ರಾ ಹತ್ಯಾಕಾಂಡದ ಬಗ್ಗೆ ಪ್ರಧಾನಿಗಳು ಬಹಿರಂಗವಾಗಿ ಮಾತನಾಡಲಿ ನೋಡೋಣ? ಇದು ಒಪ್ಪುವಂತದ್ದಲ್ಲ! ಅವರು ಬಹಿರಂಗವಾಗಿ ಈ ಕುರಿತು ಮಾತನಾಡಬೇಕು ಎಂದು ಆಗ್ರಹಿಸಿದ್ದರು!
ಜಿಗ್ನೇಶ್ ಮೇವಾನಿ ಮಾಡಿದ ಒಂದು ಟ್ವೀಟ್ ಹಿಂದೆ ಸರಣಿ ರೀ-ಟ್ವೀಟ್ಗಳು ಹರಿದುಬಂದವು. ಟ್ವೀಟ್ ವೈರಲ್ ಆಗುತ್ತಿದ್ದಂತೆ ಅಸ್ಸಾಂ ಪೊಲೀಸರು ಈ ಟ್ವೀಟ್ ಒಂದು ಸಮುದಾಯಕ್ಕೆ ದಕ್ಕೆ ತರುವಂತ ಕೆಲಸ ಮಾಡುತ್ತಿದೆ, ಹೀಗಾಗಿ ಇಂಥ ಟ್ವೀಟ್‍ಗಳ ಮೂಲಕ ಒಂದು ಸಮುದಾಯವನ್ನು ಪ್ರಚೋದಿಸುವ ಕೆಲಸ ನಡೆಯುತ್ತಿದೆ ಎಂದು ಕಾರಣ ನೀಡಿ ಪೊಲೀಸರು ಬಂಧಿಸಿದ್ದರು. ಸದ್ಯ, ಜಿಗ್ನೇಶ್ ಮೇವಾನಿ ಮಾಡಿದ್ದ ಟ್ವೀಟ್ ಕುರಿತು ತಮ್ಮ ಅಭಿಪ್ರಾಯವನ್ನು ಟ್ವೀಟ್ ಮಾಡಿರುವ ನಟ ಪ್ರಕಾಶ್ ರಾಜ್,” ಸ್ವತಂತ್ರ ಭಾರತದ ಮೊದಲ ಭಾರತೀಯ ಭಯೋತ್ಪಾದಕ ಗೋಡ್ಸೆ..
ನಮ್ಮ ಮಹಾತ್ಮಾ ಗಾಂಧಿಯನ್ನು ಕೊಂದ ಭಯೋತ್ಪಾದಕ ಗೋಡ್ಸೆ.. ಈತನ ಹೆಸರನ್ನು ಹೃದಯದಲ್ಲಿ ಇಟ್ಟುಕೊಂಡು, ಗಾಂಧಿಯವರ ಹೆಸರನ್ನು ತುಟಿಯಲ್ಲಿ ಇಟ್ಟುಕೊಂಡಿರುವ ನಾಯಕರಿಗೆ ನಾಚಿಕೆಯಾಗಬೇಕು. ಸತ್ಯವು ಮೇಲುಗೈ ಸಾಧಿಸಲಿದೆ ಧೈರ್ಯವಾಗಿರಿ ಜಿಗ್ನೇಶ್ ಮೇವಾನಿ” ಎಂದು ಪರೋಕ್ಷವಾಗಿ ಟ್ವೀಟ್ ಮಾಡುವ ಮೂಲಕ ಮೋದಿಯವರಿಗೆ ಕುಟುಕಿದ್ದಾರೆ.