ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಆತ್ಮಹತ್ಯೆಗೆ ಸಚಿವ ಕೆ.ಎಸ್ ಈಶ್ವರಪ್ಪ(KS Eshwarappa) ನೇರ ಹೊಣೆ ಎಂಬ ಕಾರಣಕ್ಕೆ ಕಾಂಗ್ರೆಸ್(Congress) ಪಕ್ಷ ಸೇರಿದಂತೆ, ರಾಜ್ಯಾದ್ಯಂತ ಸಚಿವ ಸ್ಥಾನಕ್ಕೆ ಕೆ.ಎಸ್ ಈಶ್ವರಪ್ಪನವರು ಈ ಕೂಡಲೇ ರಾಜೀನಾಮೆ ನೀಡಬೇಕು ಎಂಬ ಆಗ್ರಹ ಕೇಳಿಬಂದ ಹಿನ್ನಲೇ, ಒತ್ತಡದಿಂದ ಸಚಿವ ಸ್ಥಾನಕ್ಕೆ ಈಶ್ವರಪ್ಪ ಶುಕ್ರವಾರ ರಾಜೀನಾಮೆ(Resignation) ಘೋಷಿಸಿದರು.

ಅಧಿಕೃತವಾಗಿ ರಾಜೀನಾಮೆ ಘೋಷಣೆ ಮಾಡಿದ ಬಳಿಕವೂ ಮುಗಿಯದ ಚರ್ಚೆ, ಈಶ್ವರಪ್ಪ ರಾಜೀನಾಮೆ ಕೊಟ್ಟರೆ ಸಾಲದು ತಕ್ಕ ಶಿಕ್ಷೆಯಾಗಬೇಕು, ಜೈಲುವಾಸ ಅನುಭವಿಸಬೇಕು ಎಂದು ಒಂದೆಡೆ ಕಾಂಗ್ರೆಸ್ ಆಗ್ರಹಿಸಿದರೆ, ಮತ್ತೊಂದೆಡೆ ಸಂತೋಷ್ ಪಾಟೀಲ್ ಅವರ ಸಹೋದರ ಈಶ್ವರಪ್ಪನವರಿಗೆ ಕಾನೂನಿನ ರೀತಿಯಲ್ಲಿ ಸೂಕ್ತ ಶಿಕ್ಷೆ ವಿಧಿಸಿ ಎಂದು ಮನವಿ ಮಾಡಿದ್ದಾರೆ.
ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಳಿಕವೂ ಮುಗಿಯದ ಆರೋಪಗಳ ವಿರುದ್ಧ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಈಶ್ವರಪ್ಪನವರ ಮೇಲೆ ಬಂದಿರುವ ಆರೋಪ ಗಂಭೀರವಾದದ್ದು, ಈ ಬಗ್ಗೆ ಸೂಕ್ತ ರೀತಿಯಲ್ಲೇ ತನಿಖೆ ನಡೆಯಲಿದೆ. ತದನಂತರ ಅಂಕಿ ಅಂಶಗಳ ಪ್ರಕಾರ ನಿಮ್ಮ ಮುಂದೆ ಮಾತನಾಡುತ್ತೇವೆ ಎಂದು ಹೇಳುವ ಮುಖೇನ ಕಾಂಗ್ರೆಸ್ ಪಕ್ಷದವರಿಗೆ ಮಾತಿನ ಚಾವಟಿ ಬೀಸಿದ್ದಾರೆ.
Wear your Hijab now … if you have some SHAME ..ಈಗ ಹಿಜಾಬ್ ಹಾಕ್ಕೊಳಿ…ಮಾನ ಮರ್ಯಾದೆ ಇದ್ರೆ…#justasking pic.twitter.com/8KWRcxw9qt
— Prakash Raj (@prakashraaj) April 15, 2022
ಸದ್ಯ ಈಶ್ವರಪ್ಪನವರ ರಾಜೀನಾಮೆ ಸುದ್ದಿ ಹರಿದಾಡುತ್ತಿದ್ದಂತೆ, ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟಿವ್ ಆಗಿರುವ ಪ್ರಕಾಶ್ ರಾಜ್(Prakash Raj) ತಮ್ಮದೇ ಶೈಲಿಯಲ್ಲಿ ಟ್ವೀಟ್(Tweet) ಮಾಡಿ ಮತ್ತೊಮ್ಮೆ ಎಲ್ಲರ ಕೆಂಗಣಿಗೂ ಗುರಿಯಾಗಿದ್ದಾರೆ. ಹೌದು, ಕರ್ನಾಟಕದಲ್ಲಿ ಹಿಜಾಬ್(Hijab) ಘರ್ಷಣೆ ಉಂಟಾಗಲು ಪ್ರಮುಖ ಕಾರಣವೇ ಸಚಿವರಾಗಿದ್ದ ಕೆ.ಎಸ್ ಈಶ್ವರಪ್ಪನವರು! ಈಗ ನಿಮಗೆ ನಾಚಿಕೆ, ಮಾನ, ಮರ್ಯಾದೆ ಇದ್ರೆ ಹಿಜಾಬ್ ಹಾಕ್ಕೊಳಿ ಎಂದು ಟ್ವೀಟ್ ಮಾಡುವ ಮೂಲಕ ತಮ್ಮ ಆರೋಪವನ್ನು ಎಸಗಿದ್ದಾರೆ.