Visit Channel

‘ನಿಮ್ಮ ಪ್ರಾಮಾಣಿಕತೆ ಹೆಚ್ಚು ಕಾಲ ಉಳಿಯುತ್ತದೆ’ ಉದ್ದವ್ ಠಾಕ್ರೆಗೆ ಪ್ರಕಾಶ್ ರಾಜ್ ಬೆಂಬಲ

Uddhav Thackrey

ಮಹಾರಾಷ್ಟ್ರದ(Maharashtra) ಮುಖ್ಯಮಂತ್ರಿ ಸ್ಥಾನಕ್ಕೆ ಉದ್ದವ್ ಠಾಕ್ರೆ(Prakash Raj stands for uddhav thackrey) ನಿನ್ನೆ ರಾಜೀನಾಮೆ(Resignation) ನೀಡಿದ್ದು, ಉದ್ದವ್ ಠಾಕ್ರೆ ರಾಜೀನಾಮೆ ನೀಡಿರುವುದನ್ನು ನಟ(Actor) ಪ್ರಕಾಶ್ ರಾಜ್(Prakash Raj) ಸ್ವಾಗತಿಸಿದ್ದಾರೆ. ನಿಮ್ಮ ಪ್ರಾಮಾಣಿಕತೆ ಹೆಚ್ಚು ಕಾಲ ಉಳಿಯಲಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Prakash Raj stands for uddhav thackrey

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಬೆಂಬಲವಾಗಿ ಮಹಾರಾಷ್ಟ್ರದ ಜನತೆ ನಿಮ್ಮ ಜೊತೆಗಿರುತ್ತಾರೆ. ನೀವು ರಾಜ್ಯವನ್ನು ನಿಭಾಯಿಸಿದ ರೀತಿಗೆ ಮಹಾರಾಷ್ಟ್ರದ ಜನತೆ ನಿಮಗೆ ಬೆಂಬಲ ನೀಡುತ್ತಾರೆ ಎಂಬ ಭರವಸೆ ನನಗಿದೆ. ರಾಜೀನಾಮೆ ನೀಡಿ ನೀವು ಒಳ್ಳೆಯ ಕೆಲಸ ಮಾಡಿದ್ದೀರಿ ಎಂದು ನಟ ಪ್ರಕಾಶ್ ರಾಜ್ ಅಭಿಪ್ರಾಯಪಟ್ಟಿದ್ದಾರೆ. ಚಾಣಕ್ಯರು (ಅಮಿತ್ ಶಾ) ಇಂದು ನಿಮ್ಮ ರಾಜೀನಾಮೆಯನ್ನು ಸಂಭ್ರಮಿಸಿ ಲಡ್ಡುಗಳನ್ನು ತಿನ್ನಬಹುದು. ಆದರೆ ರಾಜಕೀಯದಲ್ಲಿ ನಿಮ್ಮ ಪ್ರಾಮಾಣಿಕತೆ ಹೆಚ್ಚು ಕಾಲ ಉಳಿಯುತ್ತದೆ.

ನಿಮಗೆ ಆ ದೇವರು ಹೆಚ್ಚು ಶಕ್ತಿಯನ್ನು ನೀಡಲಿ. ಮುಂದಿನ ದಿನಗಳಲ್ಲಿ ನಿಮಗೆ ಮತ್ತೆ ಒಳ್ಳೆಯ ಅವಕಾಶಗಳು ಒದಗಿ ಬರಲಿ ಎಂದು ಹಾರೈಸಿದ್ದಾರೆ (uddhav thackrey). ಮಹಾರಾಷ್ಟ್ರದ ರಾಜ್ಯಪಾಲರು ಬಹುಮತ ಸಾಬೀತುಪಡಿಸುವಂತೆ ಉದ್ದವ್ ಠಾಕ್ರೆ ನೇತೃತ್ವದ ಸರ್ಕಾರಕ್ಕೆ ಸೂಚನೆ ನೀಡಿದ್ದರು. ರಾಜ್ಯಪಾಲರ ಸೂಚನೆ ವಿರುದ್ಧ ಉದ್ದವ್ ಠಾಕ್ರೆ ಸುಪ್ರೀಂಕೋರ್ಟ್(Supremecourt) ಮೊರೆ ಹೋಗಿದ್ದರು. ಆದರೆ ಬಹುಮತ ಸಾಬೀತು ಸೂಚನೆಯನ್ನು ಸುಪ್ರೀಂ ಎತ್ತಿ ಹಿಡಿಯಿತು.

https://vijayatimes.com/pani-puri-banned-in-nepal-why/

Prakash Raj stands for uddhav thackrey

ಹೀಗಾಗಿ ಉದ್ದವ್ ಠಾಕ್ರೆ ನಿನ್ನೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಏಕನಾಥ್ ಶಿಂಧೆ ನೇತೃತ್ವದ ಸುಮಾರು 40 ಬಂಡಾಯ ಶಾಸಕರು ಕಾಂಗ್ರೆಸ್-ಎನ್‍ಸಿಪಿ-ಶಿವಸೇನೆ ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದಿದ್ದರು. ಇದೀಗ ಮಹಾರಾಷ್ಟ್ರದಲ್ಲಿ ಬಿಜೆಪಿ(BJP) ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾಗಲಿದೆ.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.