Mumbai : ಬಹುಭಾಷಾ ನಟ ಪ್ರಕಾಶ್ ರಾಜ್(Prakash Raj), ಬಾಲಿವುಡ್ ಕಿಂಗ್ ಖಾನ್ ಶಾರೂಖ್ ಖಾನ್(Shah rukh Khan) ಅಭಿನಯದ ಪಠಾಣ್(Pathaan) ಚಿತ್ರಕ್ಕೆ ಭಾರಿ ಬೆಂಬಲ ಸೂಚಿಸಿದ್ದು, ಚಿತ್ರವನ್ನು ಬಹಿಷ್ಕರಿಸುವವರನ್ನು ಟ್ವೀಟ್ ಮಾಡುವ (Prakash slams trollers) ಮುಖೇನ ಲೇವಡಿ ಮಾಡಿದ್ದಾರೆ.

ನಟ ಶಾರುಖ್ ಖಾನ್, ನಟಿ ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಪಠಾಣ್ ಚಿತ್ರ ಹಾಗೂ ಪಠಾಣ್ ಚಿತ್ರತಂಡಕ್ಕೆ ಟ್ವೀಟ್ ಮಾಡಿ ಪ್ರಕಾಶ್ ರಾಜ್ ಸಾಥ್ ನೀಡಿದ್ದಾರೆ.
ಶಾರುಖ್ ಖಾನ್ ಅವರ ಪಠಾಣ್ ಚಿತ್ರ ಬಿಡುಗಡೆಗೊಂಡು ಸದ್ಯ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಓಪನಿಂಗ್ ದಾಖಲೆಯ ಜೊತೆಗೆ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ.
ನಟಿ ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಅವರನ್ನು ಪ್ರಮುಖ ಪಾತ್ರದಲ್ಲಿ ತೋರಿಸಿರುವ ಈ ಚಿತ್ರವು ವಿವಾದದಲ್ಲಿ ಪಡೆದ ಪ್ರಚಾರಕ್ಕಿಂತ ಹೆಚ್ಚಾಗಿ ಇಂದು ಖ್ಯಾತಿಯನ್ನು ಗಳಿಸುತ್ತಿದೆ!
ಸದ್ಯ ಪಠಾಣ್ ಚಿತ್ರ ದೇಶದೆಲ್ಲೆಡೆ ಬಿಡುಗೊಂಡ ನಂತರ ಉತ್ತಮ ಪ್ರತಿಕ್ರಿಯೆ ಜೊತೆಗೆ ವಿವಾದದ ಸುಳಿಯಲ್ಲೂ ಕೂಡ ಸಿಲುಕಿದೆ.
ಹೌದು, ಬಿಡುಗಡೆಯ ಸಂತಸದಲ್ಲಿರುವ ಚಿತ್ರತಂಡಕ್ಕೆ ಹಲವು ವಿವಾದಗಳನ್ನು ಮತ್ತೊಮ್ಮೆ ಮುನ್ನೆಲೆಗೆ ತಂದವರ ವಿರುದ್ಧ ಕಿಡಿಕಾರಿದ ನಟ ಪ್ರಕಾಶ್ ರಾಜ್,
ಆಕ್ಷನ್ ಚಲನಚಿತ್ರವನ್ನು ಬಹಿಷ್ಕರಿಸುವಂತೆ ಒತ್ತಾಯಿಸುತ್ತಿರುವವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರಾಜಕಾರಣಿಗಳು ಸೇರಿದಂತೆ ಕೆಲವು ಜನರಿಂದ ಬಹಿಷ್ಕಾರದ ಕರೆಗಳು ವ್ಯಕ್ತವಾದ ಬೆನ್ನಲ್ಲೇ ಪ್ರತಿಕ್ರಿಯಿಸಿದ ನಟ ಪ್ರಕಾಶ್ ರಾಜ್, ತಮ್ಮ ಇತ್ತೀಚಿನ ಟ್ವೀಟ್‌ನಲ್ಲಿ, ನಟ ಶಾರೂಖ್ ಖಾನ್, ನಟಿ ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಸೇರಿದಂತೆ ಇಡೀ ಚಿತ್ರತಂಡಕ್ಕೆ ಅಭಿನಂದನೆಗಳು.
ಬಾಲಿವುಡ್ ಕಿಂಗ್ ಖಾನ್ ‘ಈಸ್ ಬ್ಯಾಕ್’ ಎಂದು ಟ್ವೀಟ್ ಮಾಡಿದ ಅವರು, ತಮ್ಮ ಟ್ವೀಟ್‌ನಲ್ಲಿ ಪಠಾಣ್ ಚಿತ್ರದ ಬೇಷರಾಮ್ ರಂಗ್ ಎಂಬ ಹ್ಯಾಶ್‌ಟ್ಯಾಗ್ ಸೇರಿಸಿ ಟ್ವೀಟ್ ಮಾಡಿದ್ದಾರೆ.
ಈ ಹಿಂದೆ ಚಿತ್ರದ ಬೇಷರಂ ರಂಗ್ ಹಾಡು ಬಿಡುಗಡೆಯಾದ ಕ್ಷಣ ಮಾತ್ರದಲ್ಲೇ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಧರಿಸಿದ್ದ ಕೇಸರಿ ಬಟ್ಟೆಯು ಈ ವಿವಾದಕ್ಕೆ ಪ್ರಮುಖ ಕಾರಣವಾಗಿತ್ತು!

ಸದ್ಯ ಈ ವಿವಾದಗಳ ಮಧ್ಯೆಯೇ ಯಶಸ್ವಿಯಾಗಿ ತೆರೆಮೇಲೆ ಬಿಡುಗಡೆಯಾದ ಪಠಾಣ್ ಚಿತ್ರವನ್ನು (Prakash slams trollers) ಕೊಂಡಾಡಿದ ನಟ ಪ್ರಕಾಶ್ ರಾಜ್, ಹೇ ಧರ್ಮಾಂಧರೇ ನಿಮ್ಮನ್ನು ಬಹಿಷ್ಕರಿಸಬೇಕು!
ಶ್ಹ್ಹ್ಹ್ಹ್ಹ್ಹ್ಹ್… ಹಲ್ಲಾ ಬೋಲ್ (ನಿಮ್ಮ ಧ್ವನಿಯನ್ನು ಹೆಚ್ಚಿಸಿ) ಕಿಂಗ್ ಖಾನ್, ಶಾರುಖ್ ಖಾನ್ ಈಸ್ ಬ್ಯಾಕ್! ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ಮತ್ತು ಪಠಾಣ್ ತಂಡದವರೇ ನೀವು ರಾಕಿಂಗ್ ಮಾಡಿ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಕೂಡ ಚಿತ್ರದ ಬೇಷರಂ ರಂಗ್ ಹಾಡು ವಿವಾದಕ್ಕೆ ಕಾರಣವಾದಾಗ ಪ್ರಕಾಶ್ ರಾಜ್ ಟ್ವಿಟ್ಟರ್‌ನಲ್ಲಿ ಚಿತ್ರದ ಪರ ನಿಂತು ಧ್ವನಿ ಎತ್ತಿದ್ದರು.
ಪಠಾಣ್ ಚಿತ್ರ ವಿವಾದಕ್ಕೆ ತುತ್ತಾದ ಮೊದಲ ದಿನದಿಂದಲೂ ಪ್ರಕಾಶ್ ರಾಜ್ ಚಿತ್ರದ ನಾಯಕ ನಟ ಶಾರೂಖ್ ಖಾನ್ ಮತ್ತು ಚಿತ್ರತಂಡದೊಂದಿಗೆ ನಿಂತು ಬೆಂಬಲ ಸೂಚಿಸಿದ್ದಾರೆ.