ಮುಸ್ಲಿಮರು(Muslims) ಒಳ್ಳೆಯವರು ಆದರೆ ಇಸ್ಲಾಂ(Islam) ಕೆಟ್ಟದ್ದು. ಇಸ್ಲಾಂ ಪರಿವರ್ತನೆ ಆಗುವ ತನಕ ಮುಸ್ಲಿಮನ ಪರಿವರ್ತನೆ ಸಾಧ್ಯವಿಲ್ಲ ಎಂದು ಶ್ರೀರಾಮ ಸೇನೆಯ(Sri Rama sena) ಮುಖ್ಯಸ್ಥ ಪ್ರಮೋದ ಮುತಾಲಿಕ್(Pramod Muthalik) ಹೇಳಿದರು.

ಮಾದ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಮುಸ್ಲಿಮನಲ್ಲಿ ಪ್ರೀತಿ, ಆತ್ಮೀಯತೆ, ಸೌಹಾರ್ದತೆ ಎಲ್ಲವೂ ಇದೆ ಆದರೆ ಇಸ್ಲಾಂ ಅತ್ಯಂತ ಡೆಂಜರ್. ಇಸ್ಲಾಮಿನಲ್ಲಿ ಕೌರ್ಯ, ಮೋಸ, ದ್ವೇಷವಿದೆ. ಹೀಗಾಗಿಯೇ ಅದನ್ನು ಜಗತ್ತಿನ ಅನೇಕ ದೇಶಗಳು ಬ್ಯಾನ್ ಮಾಡುತ್ತಿವೆ. ಇಸ್ಲಾಂನ ಕಾರಣದಿಂದಲೇ ಅನೇಕ ದೇಶಗಳು ಮುಸ್ಲಿಮರಿಗೆ ದೇಶದೊಳಗೆ ಪ್ರವೇಶ ನೀಡುತ್ತಿಲ್ಲ. ಇಸ್ಲಾಂ ಪರಿವರ್ತನೆ ಆಗುವತನಕ ಮುಸ್ಲಿಮನ ಪರಿವರ್ತನೆ ಸಾಧ್ಯವಿಲ್ಲ. ನನಗೆ ಮುಸ್ಲಿಮನ ಬಗ್ಗೆ ದ್ವೇಷವಿಲ್ಲ. ಆದರೆ ಇಸ್ಲಾಂ ಬಗ್ಗೆ ದ್ವೇಷವಿದೆ.
ಅದೇ ರೀತಿ ಕ್ರಿಶ್ಚಿಯನ್ ಒಳ್ಳೆಯವನಿದ್ದಾನೆ, ಆದರೆ ಕ್ರಿಶ್ಚಿಯಾನಿಟಿ ಕೆಟ್ಟದ್ದು. ಅವರು ಮಾಡುವ ಸೇವೆ, ಶಿಕ್ಷಣ ಎಲ್ಲವೂ ಬೂಟಾಟಿಕೆ. ಮತಾಂತರಕ್ಕಾಗಿ ಸೇವೆ ಮತ್ತು ಶಿಕ್ಷಣವನ್ನು ಬಳಸಿಕೊಳ್ಳುತ್ತಿದ್ದಾರೆ. ಅವರ ಮುಖ್ಯ ಉದ್ದೇಶವೇ ಮತಾಂತರ. ತೆರೇಸಾದಿಂದ ಹಿಡಿದು ಇಲ್ಲಿಯವರೆಗಿನ ಎಲ್ಲರೂ ಮತಾಂತರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ನಾನು ಎಂದಿಗೂ ತೆರೇಸಾಳನ್ನು ‘ಮದರ್’ ಎಂದು ಕರೆಯುವುದಿಲ್ಲ. ತೆರೇಸಾ ಮಾಡಿದ ಸೇವೆ ಎಲ್ಲಾ ಕೇವಲ ಬೂಟಾಟಿಕೆ. ಮತಾಂತರಕ್ಕಾಗಿ ಮಾಡಿದ್ದು ಎಂದು ಹೇಳಿದರು.
ಇನ್ನು ಈ ದೇಶದ ಕ್ರಿಶ್ಚಿಯನ್ನರು ಚರ್ಚ್ ಕಟ್ಟಲು ಕಲ್ಲುಗಳು, ಸಿಮೆಂಟ್ ಎಲ್ಲವನ್ನೂ ವ್ಯಾಟಿಕನ್‍ನಿಂದ ತಂದಿಲ್ಲ. ಈ ದೇಶದ ಮಣ್ಣು, ಕಲ್ಲು, ಸಿಮೆಂಟ್ ಸೇರಿದಂತೆ ಎಲ್ಲವನ್ನೂ ಬಳಸಿಕೊಂಡಿದ್ದೀರಿ ಆದರೆ ಇಂದು ಇದೇ ದೇಶಕ್ಕೆ ದ್ರೋಹ ಮಾಡಿತ್ತಿದ್ದೀರಿ. ಹಾಗಾಗಿ ನಾವು ಕ್ರಿಶ್ಚಿಯಾನಿಟಿಯನ್ನು ದ್ವೇಷಿಸುತ್ತಿವೆ. ನಿಮ್ಮ ಪಾಡಿಗೆ ನೀವು ಇದ್ದರೆ ನಾವೇಕೆ ದ್ವೇಷಿಸುತ್ತೇವೆ. ಅದೇ ರೀತಿ ಮುಸ್ಲಿಮರು ಕೂಡಾ ನಾವು ಸಾವಿರಾರೂ ವರ್ಷಗಳಿಂದ ದೇವರೆಂದು ಪೂಜಿಸುವ ಗೋವನ್ನು ಮಾಂಸಕ್ಕಾಗಿ ಕಡಿಯುತ್ತಾರೆ.

ಈ ಹಿನ್ನಲೆಯಲ್ಲಿ ನಾವು ದ್ವೇಷ ಮಾಡುತ್ತೇವೆ. ಇನ್ನು ಹಿಂದೂ ಉಳಿದರೆ ಮಾತ್ರ ಈ ದೇಶ ಉಳಿಯುತ್ತದೆ. ಇಲ್ಲದಿದ್ದರೆ ಈ ದೇಶ ಉಳಿಯುವುದು ಕಷ್ಟ ಎಂದರು.