Mumbai : ಬಾಲಿವುಡ್ ಸೂಪರ್ ಸ್ಟಾರ್ ಶಾರುಖಾನ್ ಅವರ ʻಪಠಾಣ್ʼ(Pathan) ಸಿನಿಮಾ ಭಾರಿ ವಿವಾದಕ್ಕೆ ಕಾರಣವಾಗಿದೆ. ಈ ಸಿನಿಮಾದ ಬೇಷರಮ್ ಸಾಂಗ್ ನಲ್ಲಿ ದೀಪಿಕಾ ಪಡುಕೋಣೆ ಅವರು ಕೇಸರಿ ಬಿಕಿನಿ ಧರಿಸಿ ಹೆಜ್ಜೆ ಹಾಕಿರೋ ವಿಚಾರವಾಗಿ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ(Prasanth Sambargi statement on Pathan) ಪ್ರತಿಕ್ರಿಸಿದ್ದಾರೆ.
ದೀಪಿಕಾ ಪಡುಕೋಣೆ(Deepika Padukone) ಹಾಕಿರೋ ಬಟ್ಟೆ ನಮ್ಮ ಹಿಂದೂ ಧರ್ಮದ ಕೇಸರಿ ಬಣ್ಣದ್ದಾಗಿದೆ. ಇದನ್ನು ಬೇಕಂತಲೇ ಈ ಸಿನಿಮಾದಲ್ಲಿ ತೊಡಲಾಗಿದೆ.
ಕೇಸರಿ ಬಣ್ಣದ ಉಡುಗೆಯನ್ನು ದೀಪಿಕಾಗೆ ತೊಡಿಸಿ ಹಿಂದೂ ಧರ್ಮವನ್ನು ಅವಮಾನೀಸಲಾಗಿದೆ ಎಂದು ಪ್ರಶಾಂತ್ ಸಂಬರಗಿ ಕಿಡಿಕಾರಿದ್ದಾರೆ.
ಈ ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಅವರು ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ನಟಿ ದೀಪಿಕಾ ಶಾರುಖ್ ಖಾನ್(Shah Rukh Khan) ಜೊತೆಗೆ ‘ಓಂ ಶಾಂತಿ ಓಂ’ ಸಿನಿಮಾದ ಮೂಲಕ ಬಾಲಿವುಡ್‌ಗೆ(Bollywood) ಎಂಟ್ರಿ ಕೊಟ್ಟರು.
ನಂತರ ಈ ಜೋಡಿ ಒಟ್ಟಿಗೆ ಮಾಡಿದ ಸಿನಿಮಾಗಳು ಸೂಪರ್ ಹಿಟ್ ಲಿಸ್ಟ್ ಸೇರಿದವು. ಅದರಲ್ಲಿ ‘ಚೆನ್ನೈ ಎಕ್ಸ್‌ಪ್ರೆಸ್’ ಕೂಡ ಒಂದು. ಈಗ ಈ ಜೋಡಿ ಪಠಾಣ್‌ನಲ್ಲಿ ಒಂದಾಗಿದ್ದು, ಈ ಸಿನಿಮಾ ಭಾರಿ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಇದನ್ನೂ ನೋಡಿ : https://fb.watch/hqrANwX1d2/ ಸುಪ್ರೀಂಕೋರ್ಟ್ ಆದೇಶದವರೆಗೂ ಸಂಯಮ ಕಾಪಾಡಿ, ಗಡಿ ವಾದವನ್ನು ರಾಜಕೀಕರಣಗೊಳಿಸಬೇಡಿ! : ಅಮಿತ್ ಶಾ
ಇಂಡಿಯಾನ್ ಇನ್ಸ್ಟಾಟ್ಯೂಟ್ ಆಫ್ ಮ್ಯಾನೆಜ್ ಮೆಂಟ್(Indian Institute of Management) ನ ಫ್ರೋ. ಧಿರೇಂದ್ರ ಕುಮಾರ್(Dhirendra Kumar) ಅವರು 25 ವರ್ಷದಿಂದ ಬಾಲಿವುಡ್ ಚಿತ್ರಗಳು ಹಿಂದೂ ವಿರೋಧಿ ಚಿತ್ರವಾಗಿವೆ,
ಇವರು ಬಳಸಿರುವ ಬೇಷರಮ್ ಎಂಬ ಪದವು ʻನಾಚಿಕೆಯಾಗಬೇಕು ನಿಮ್ಮ ಬಣ್ಣಕ್ಕೆʼ ಎಂಬ ಅರ್ಥವನ್ನು ಹೋಲುತದೆ.
ನಾವು ಇದೇ ರೀತಿ 2000 ಸಾವಿರ ಸಿನಿಮಾಗಳನ್ನು ರಿಸರ್ಚ ಮಾಡಿ ಅದಕ್ಕೆ ಸರಿಯಾದ ದಾಖಲೆಯನ್ನು ನೀಡಿದ್ದೇವೆ.
ಈಗ ‘ಪಠಾಣ್ʼ ಸಿನಿಮಾದ ಬೇಷರಮ್ ಸಾಂಗ್ ಬಗ್ಗೆಯು ರಿಸರ್ಚ ಮಾಡಿ ಅವರ ಅಭಿಪ್ರಾಯವನ್ನು ಈ ರೀತಿ ವ್ಯಕ್ತಪಡಿಸಿದ್ದಾರೆ.
ಫಿಲ್ಮ್‌ಫೇರ್‌ನ ಮೊದಲ ಅತ್ಯುತ್ತಮ ನಟ ಪ್ರಶಸ್ತಿ ಪಡೆದ ಸಲ್ಮಾನ್ ಖಾನ್(Prasanth Sambargi statement on Pathan) ರವರಿಗೆ ಜಾವೇದ್ ಅಖ್ತಾರ್ ನಿಂದ ಸಾಕಷ್ಟು ಸಲ ಹಿಂದೂ ವಿರೋಧಿ ಸಿನಿಮಾಗಳು ಬಂದಿವೆ.
ಪಿ.ಕೆ, ಬ್ರಹ್ಮಾಸ್ತ್ರ(Brahmastra) ಸಿನಿಮಾಗಳು ಕೂಡ ಹಿಂದೂ ವಿರೋಧಿ ಮಂತ್ರವನ್ನು ಯುವಕರ ತಲೆಗೆ ಕಟ್ಟಿ ಹಾಕಿವೆ ಜೊತೆಗೆ ಇದರ ಹಿಂದೆ ದೊಡ್ಡ ಷಡ್ಯಂತ್ರವೆ ಇದೆ.
ಪಾಕ್ ನ ದಾವುದ್ ಇಬ್ರಾಹಿಂ ಕಡೆಯಿಂದ ಬಾಲಿವುಡ್ ಗೆ ಫಡಿಂಗ್ ಬರುತಿದೆ.
ಹಾಗೂ ಇದರ ಹಿಂದಿನ ಉದ್ದೇಶ ಹಿಂದೂಗಳನ್ನು ಉದ್ದೇಶ ಪೂರಕವಾಗಿ ಮತ್ತು ವಿರೋಧಿಸುವ ಸಲುವಾಗಿಯೇ ಇದೆ ಎಂಬ ಸಾಕಷ್ಟು ಆರೋಪವು ದಿನೇ ದಿನೇ ಹೆಚ್ಚಾಗಿದೆ.
- ಪಂಕಜಾ