Mysore : ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 5 ಕೆಜಿ ಅಕ್ಕಿಯನ್ನು ಈಗಾಗಲೇ ಕೊಡುತ್ತಿದೆ. ಆದರೆ ಅದಕ್ಕೆ ಇನ್ನೂ 5 ಕೆಜಿ ಅಕ್ಕಿ ಕೊಟ್ಟು ಎಲ್ಲವನ್ನು (Pratap Simha slams siddaramaiah) ನಾನೇ ಕೊಟ್ಟಿದ್ದು

ಅಂತ ಜಾತ್ರೆ ಮಾಡೋದು ಮಾತ್ರ ಸಿದ್ರಾಮಣ್ಣ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಕಾಂಗ್ರೆಸ್ ಸರ್ಕಾರವನ್ನು ಲೇವಡಿ ಮಾಡಿದ್ದಾರೆ.
ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರದ ಮೇಲೆ ಬಿಜೆಪಿ ಸಂಸದರು ಒತ್ತಡ ಹೇರಲಿ ಎಂಬ ಸಿಎಂ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, 5 ಕೆಜಿ ಅಕ್ಕಿ ಕೊಡುವುದು ಕೇಂದ್ರ ಸರಕಾರ ಅಂತಾ ಪ್ರಥಮ
ಬಾರಿಗೆ ಸತ್ಯ ಹೇಳಿದ್ದಕ್ಕೆ ಸಿದ್ದರಾಮಯ್ಯನವರಿಗೆ ಧನ್ಯವಾದ. ಸಿದ್ದರಾಮಯ್ಯನವರು ಚುನಾವಣೆ ವೇಳೆ ರಾಜ್ಯದ ಜನತೆಗೆ ಕೊಟ್ಟ ಮಾತಿನಂತೆ ಕಾಂಗ್ರೆಸ್ ಸರ್ಕಾರದಿಂದ 10 ಕೆಜಿ ಸೇರಿಸಿ ಒಟ್ಟು 15ಕೆಜಿ ಅಕ್ಕಿಯನ್ನು ರಾಜ್ಯದ
ಜನರಿಗೆ ಕೊಡಬೇಕು. ಅದನ್ನ ಬಿಟ್ಟು ಮೋದಿ ಸರ್ಕಾರ ಕೊಡುತ್ತಿರುವ ಅಕ್ಕಿ ಚೀಲಗಳ ಮೇಲೆ ನಿಮ್ಮ ಪೋಟೋ ಹಾಕಿಕೊಂಡು ಜಾತ್ರೆ ಮಾಡಬೇಡಿ. ಯಾರಾದೋ ದುಡ್ಡು ಕಾಂಗ್ರೆಸ್ ಜಾತ್ರೆ ನಾ?

ಮೋದಿ ಅವರು ಅಕ್ಕಿ ಕೊಡಬೇಕು. ನೀವು ಚುನಾವಣೆ ಗೆದ್ದು ಬರಬೇಕಾ? ಎಂದು (Pratap Simha slams siddaramaiah) ಪ್ರಶ್ನಿಸಿದರು.
ಇದನ್ನು ಓದಿ: ಪೋಕ್ಸೊ ಕಾಯ್ದೆಯಡಿ ಪ್ರಧಾನಿ ಮೋದಿ ಕೂಡಾ ಶಿಕ್ಷಾರ್ಹ : ನಟ ಕಿಶೋರ್ ಗಂಭೀರ ಆರೋಪ
ನನ್ನ ಹೆಂಡ್ರಿಗೂ ಫ್ರೀ, ಕಾಕಾ ಪಾಟೀಲ್ ಗೂ ಫ್ರೀ, ಮಹದೇವಪ್ಪ ನಿನಗೂ 200 ಯುನಿಟ್ ಫ್ರೀ ಅಂದಿದ್ರಲ್ಲಾ, ನಿಮ್ಮ ಕಾಕ ಪಾಟೀಲ್ ಮತ್ತು ಮಹದೇವಪ್ಪ ಮನೆಯಲ್ಲಿ ಫ್ರಿಡ್ಜ್, ಟಿವಿ, ಇಸ್ತ್ರಿ ಪೆಟ್ಟಿಗೆ,ಎಸಿ ಇಲ್ವಾ?
ಎಲ್ಲರಿಗೂ 200 ಯುನಿಟ್ ಫ್ರೀ ಕೊಡ್ತೀನಿ ಅನ್ನುವಾಗ ನಿಮ್ಮ ಮನೆಯಲ್ಲಿ ಎಷ್ಟು ಯುನಿಟ್ ಖರ್ಚು ಆಗುತ್ತಿದೆ ಎಂಬುದರ ಅರಿವು ಇರಲಿಲ್ವ ? ಕಾಂಗ್ರೆಸ್ ಗ್ಯಾರಂಟಿ ಹೇಗಿದೆ ಅಂದ್ರೆ;
ಗಂಡನ ಬಳಿ ದರೋಡೆ ಮಾಡಿ ಹೆಂಡತಿಗೆ ಕೊಟ್ಟಂಗೆ ಎಂದು ವ್ಯಂಗ್ಯವಾಡಿದ್ದಾರೆ.
ಇದೇ ವೇಳೆ ಸಚಿವ ಎಂ.ಬಿ.ಪಾಟೀಲರ ವಿರುದ್ದವೂ ವಾಗ್ದಾಳಿ ನಡೆಸಿದ ಅವರು, ಎಂ.ಬಿ ಪಾಟೀಲ್ರೆ ಪ್ರತಿನಿತ್ಯ ಸಿದ್ದರಾಮಯ್ಯನವರನ್ನ ಓಲೈಸುವುದು ಮತ್ತು ಡಿಕೆ ಎದೆಗೆ ಗುಂಡು ಹೊಡೆಯಲು ಸಿದ್ದರಾಮಯ್ಯ ಬಂದೂಕು
ಎತ್ತಿದಾಗಲೆಲ್ಲ ಹೆಗಲು ಕೊಡುವುದಷ್ಟೇ ನಿಮ್ಮ ಕೆಲಸನಾ? ಬ್ರಾಹ್ಮಣರನ್ನು ಏಕೆ ದಿನಬೆಳಗಾದರು ಬೈಯುತ್ತೀರಿ ? ಸಂತೋಷ್ ಜೀ ಅವರೇನು ನಿಮಗೆ ತಿವಿದಿದ್ದಾರೆಯೇ ಪಾಟೀಲ್ರೆ ಎಂದು ಪ್ರಶ್ನಿಸಿದ್ದಾರೆ.