ಆರ್‍ಎಸ್‍ಎಸ್(RSS) ಸಂಘಟನೆ ಈ ದೇಶದ ನಪುಂಸಕ ಸಂಘಟನೆ ಎಂದು ರಾಜ್ಯ ಕಾಂಗ್ರೆಸ್(State Congress) ಟೀಕಿಸಿರುವ ಬೆನ್ನಲ್ಲೇ ಇದೀಗ ಮೈಸೂರು-ಕೊಡಗು(Mysuru-Kodagu) ಸಂಸದ ಪ್ರತಾಪ್ ಸಿಂಹ(Prathap Simha) ಅದೇ ಪದವನ್ನು ಬಳಸಿ ಕಾಂಗ್ರೆಸ್ ಪಕ್ಷದ(Congress Party) ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಜವಾಹರ ಲಾಲ್ ನೆಹರೂನನ್ನು(Jawaharlal Nehru) ಪ್ರಧಾನಿ ಮಾಡಲು, ಈ ದೇಶವನ್ನು ಧರ್ಮದ ಆಧಾರದ ಮೇಲೆ ಒಡೆದ ನಪುಂಸಕ ಪಕ್ಷ ಯಾವುದು? 1962ರಲ್ಲಿ ನಡೆದ ಭಾರತ-ಚೀನಾ ಯುದ್ದದಲ್ಲಿ ನಮ್ಮ ಸೈನಿಕರು ಕೈಕಟ್ಟಿ ಕುಳಿತುಕೊಳ್ಳುವಂತೆ ಮಾಡಿದ ನಪುಂಸಕ ಯಾರು? ಪಾಕ್ ಆಕ್ರಮಿತ ಕಾಶ್ಮೀರ ಮರಳಿ ಪಡೆಯದ ನಪುಂಸಕ ಸರ್ಕಾರ ಯಾರದು? ಲಡಾಖ್ ಅನ್ನು ಚೀನಾ ಆಕ್ರಮಿಸಿಕೊಂಡಾಗ ‘ಅಲ್ಲಿ ಒಂದು ಹುಲ್ಲು ಕಡ್ಡಿಯೂ ಬೆಳೆಯುವುದಿಲ್ಲ’ ಎಂದು ಬೊಳು ತಲೆ ಸವರಿಕೊಂಡ ನಪುಂಸಕ ಯಾರು? ಎಂದು ಪ್ರಶ್ನೆಗಳನ್ನು ಕೇಳುವ ಮೂಲಕ ಕಾಂಗ್ರೆಸ್ ವಿರುದ್ದ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಕಾಶ್ಮೀರದ ಲಾಲ್‍ಚೌಕ್‍ನಲ್ಲಿ ಪಾಕಿಸ್ತಾನದ ಧ್ವಜ ಹಾರಿಸಲು ಬಿಟ್ಟವರು ನಪುಂಸಕರು. ಯಾಸಿನ್ ಮಲ್ಲಿಕ್‍ನಂತ ಭಯೋತ್ಪಾದಕನನ್ನು(Terrorists) ಪ್ರಧಾನಿ ಕಾರ್ಯಾಲಯಕ್ಕೆ ಕರೆಸಿಕೊಂಡು ಸನ್ಮಾನ ಮಾಡಿದವರು ನಪುಂಸಕರು. 1962ರ ಯುದ್ದದಲ್ಲಿ ಚೀನಾದ ಮುಂದೆ ಮಂಡಿಯೂರಿ ಕುಂತವರು ನಪುಂಸಕರು. ಇನ್ನು ಕಾಶ್ಮೀರದಲ್ಲಿ ಪಾಕಿಸ್ತಾನದ ಧ್ವಜವನ್ನು ಇಳಿಸಿ ನಮ್ಮ ರಾಷ್ಟ್ರಧ್ವಜವನ್ನು ಹಾರಿಸಿದ್ದು ನಮ್ಮ ಸರ್ಕಾರ. ರಷ್ಯಾದಿಂದ ಕಳಪೆ ಯುದ್ದೋಪಕರಣಗಳನ್ನು ತಂದಿದ್ದೆ ನೆಹರೂ ಸಾಧನೆ.

ಐಐಟಿ ಸಂಸ್ಥೆಗಳು(IIT Institutes) ನೆಹರೂ ಸ್ವಂತ ಚಿಂತನೆಯಲ್ಲ. ಅದು ಕೂಡಾ ಬೇರೆ ದೇಶದಿಂದ ಎರವಲು ಪಡೆದದ್ದು. ಸಿದ್ದರಾಮಯ್ಯ ಇತಿಹಾಸವನ್ನು ಸರಿಯಾಗಿ ಓದಲಿ. ಸಿದ್ದರಾಮಯ್ಯನವರ ಭಾಷಣದಲ್ಲಿ ವಿಚಾರಕ್ಕಿಂತ ಉಗುಳು ಜಾಸ್ತಿ ಎಂದು ಟೀಕಿಸಿದರು.