• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜ್ಯ

ಮುಸಲ್ಮಾನರೊಂದಿಗೆ ನಮ್ಮ ಸಹಬಾಳ್ವೆ ಕಷ್ಟಸಾಧ್ಯ ಎಂದು ಅಂಬೇಡ್ಕರ್ ಅಂದೇ ಹೇಳಿದ್ದರು : ಪ್ರತಾಪ್ ಸಿಂಹ!

Mohan Shetty by Mohan Shetty
in ರಾಜ್ಯ
prathap simha
0
SHARES
0
VIEWS
Share on FacebookShare on Twitter

ಕಳೆದ ಎರಡು ವಾರಗಳಿಂದ ರಾಜ್ಯದಲ್ಲಿ ಹಿಜಾಬ್ ಪ್ರಕರಣ ತಾರಕಕ್ಕೆ ಏರಿದ್ದು, ದಿನೇ ದಿನೇ ಒಂದಲ್ಲ ಒಂದು ಕೋಲಾಹಲ ಸೃಷ್ಟಿಯಾಗುತ್ತಲೇ ಇದೆ. ಅದೇ ರೀತಿ ಹಿಜಾಬ್ ಕುರಿತು ಒಬ್ಬರಂತೆ ಒಬ್ಬ ರಾಜಕೀಯ ಮುಖಂಡರು ಹಿಜಾಬ್ ಕುರಿತು ತಮ್ಮ ದೃಷ್ಟಿಕೋನಗಳಲ್ಲಿ ಮಾತನಾಡುತ್ತಿದ್ದಾರೆ. ಸದ್ಯ ಈ ಕುರಿತು ಮೈಸೂರು- ಕೊಡಗು ಸಂಸದರಾದ ಪ್ರತಾಪ್ ಸಿಂಹ ಮಾತನಾಡಿದ್ದು, ಅವರ ಹೇಳಿಕೆ ಈಗ ಮತ್ತೊಮ್ಮೆ ಕೆಲವರ ಆಕ್ರೋಶಕ್ಕೆ ಪ್ರಮುಖ ಕಾರಣವಾಗಿದೆ. ಮುಸ್ಲಿಂಮರದ್ದು ವಿಶ್ವ ಭ್ರಾತೃತ್ವವಲ್ಲ! ಅದು ಇಸ್ಲಾಂ ಭ್ರಾತೃತ್ವ ಎಂದು ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಅವರು ತುಂಬ ದಿನಗಳ ಹಿಂದೆಯೇ ಹೇಳಿದ್ದರು.

pratap simha

ಮುಸ್ಲಿಂ ಅವರೊಡನೆ ಶಾಂತಿ, ಪ್ರೀತಿಯಿಂದ ಬದುಕಲು ಸಾಧ್ಯವಿಲ್ಲ ಎಂಬುದನ್ನು ಅಂಬೇಡ್ಕರ್ ಅವರು ಅಂದಿನ ದಿನಗಳಲ್ಲೇ ಹೇಳಿದ್ದರು ಮತ್ತು ಅದನ್ನು ಅವರು ತಮ್ಮ ಪುಸ್ತಕದಲ್ಲಿಯೂ ಕೂಡ ಪ್ರತ್ಯೇಕವಾಗಿ ಬರೆದುಕೊಂಡಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ಅಂದು ಪ್ರತಿಯೊಬ್ಬರು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿದ್ದರೇ, ಮುಸಲ್ಮಾನರು ಕಿಲಾಫತ್ ಚಳುವಳಿ ನಡೆಸುವಲ್ಲಿ ನಿರತರಾಗಿದ್ದರು. ಇದು ಹೇಳುತ್ತದೆ ಅವರು ಖಲೀಫನ ಪರವಾಗಿ ಇದ್ದರು ಎಂಬುದನ್ನು. ಮುಸ್ಲಿಂಮರ ನಿಯತ್ತು ಭಾರತದ ಗಡಿಯಾಚೆಗಿದೆ ಎಂಬುದನ್ನು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರು ಪ್ರಥಮವಾಗಿಯೇ ತಿಳಿಯಬೇಕಿತ್ತು ಎಂದು ಸಂಸದ ಪ್ರತಾಪ್ ಸಿಂಹ ಸ್ಥಳೀಯ ಮಾಧ್ಯಮದವರಿಗೆ ಮೈಸೂರಿನಲ್ಲಿ ಹೇಳಿದರು.

ambedkar

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮಾತ್ರ ಈ ಸತ್ಯ ಸಂಗತಿಯನ್ನು ತಿಳಿದಿದ್ದರು. ಅಂಬೇಡ್ಕರ್ ಅವರಿಗೆ ಹಿಂದೂ ಜನರ ಮನಸ್ಥಿತಿ ತಿಳಿದಿತ್ತು. ಅಲ್ಲಿನ ಮಕ್ಕಳಿಗೆ ಜನಿಸಿದ ನಂತರ ಅವರ ಕೈಗಳಿಗೆ ಬೈಬಲ್, ಖುರಾನ್ ನೀಡುತ್ತಾರೆ. ನಮ್ಮ ಮನೆಗಳಲ್ಲಿ ಮಕ್ಕಳು ಜನಿಸಿದಾಗ ಅವರಿಗೆ ಗಣಿತ, ವಿಜ್ಞಾನ ಮುಂತಾದ ಪುಸ್ತಕಗಳನ್ನು ನೀಡುತ್ತಾರೆ. ಅವರ ಮಕ್ಕಳಿಗೆ ಕೇವಲ ಒಂದು ವಾರದಲ್ಲಿ ಅಲ್ಲಾ ಒಬ್ಬನೇ ದೇವರು, ಏಸು ಒಬ್ಬನೇ ದೇವರು ಎಂದು ಹೇಳುವಂತೆ ನಮ್ಮಲ್ಲಿ ಹೇಳುವುದಿಲ್ಲ. ನಮ್ಮ ಮಕ್ಕಳಿಗೆ ಈ ರೀತಿ ಹೇಳುವುದಿಲ್ಲ. ಇವರು ನಮಗೆ ಜಾತ್ಯತೀತತೆಯ ಪಾಠ ಹೇಳುವ ಅವಶ್ಯಕತೆಯಿಲ್ಲ.

prathap simha

ನಮ್ಮ ನಡುವಳಿಕೆಯಲ್ಲಿ ಜಾತ್ಯತೀತತೆ ಇದೆ. ಇದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಾಗಲೇ ತಿಳಿದಿತ್ತು. ನಮ್ಮ ಧರ್ಮ ಒಬ್ಬ ವ್ಯಕ್ತಿಯ ಚಿಂತನೆಗಳಿಂದ ಬಂದಿರುವುದಿಲ್ಲ ಎಂದು ಅವರು ಹೇಳಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಅಂಬೇಡ್ಕರ್ ಅವರ ಮಾತುಗಳನ್ನು ನೆನೆದು ಈ ಸಂದರ್ಭದಲ್ಲಿ ನುಡಿದಿದ್ದಾರೆ.

Tags: AmbedkarcontroversyKarnatakakodaguMysuruprathapsimha

Related News

KPSC : ವಾಣಿಜ್ಯ ತೆರಿಗೆ ಪರಿವೀಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ
ಪ್ರಮುಖ ಸುದ್ದಿ

KPSC : ವಾಣಿಜ್ಯ ತೆರಿಗೆ ಪರಿವೀಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ

September 30, 2023
ಗಾಂಧಿ ಜಯಂತಿಗೆ ಕೆ.ಆರ್‌ ಪುರ ಹಾಗೂ ಬೈಯಪ್ಪನಹಳ್ಳಿ ನಡುವೆ ನೇರಳೆ ಮಾರ್ಗದ ಮೆಟ್ರೋ ರೈಲು ಸಂಚಾರ
ಪ್ರಮುಖ ಸುದ್ದಿ

ಗಾಂಧಿ ಜಯಂತಿಗೆ ಕೆ.ಆರ್‌ ಪುರ ಹಾಗೂ ಬೈಯಪ್ಪನಹಳ್ಳಿ ನಡುವೆ ನೇರಳೆ ಮಾರ್ಗದ ಮೆಟ್ರೋ ರೈಲು ಸಂಚಾರ

September 30, 2023
ನಿಮಗೆ ಜಾತ್ಯತೀತತೆ ಕೇವಲ ಭಾಷಣದ ಸರಕಷ್ಟೇ ; ನಮ್ಮ ಜಾತ್ಯತೀತತೆಯನ್ನು ಪ್ರಶ್ನಿಸುವ ಯೋಗ್ಯತೆ ನಿಮಗಿಲ್ಲ – ಸಿದ್ದು ವಿರುದ್ದ ಎಚ್ಡಿಕೆ ಕಿಡಿ
ಪ್ರಮುಖ ಸುದ್ದಿ

ನಿಮಗೆ ಜಾತ್ಯತೀತತೆ ಕೇವಲ ಭಾಷಣದ ಸರಕಷ್ಟೇ ; ನಮ್ಮ ಜಾತ್ಯತೀತತೆಯನ್ನು ಪ್ರಶ್ನಿಸುವ ಯೋಗ್ಯತೆ ನಿಮಗಿಲ್ಲ – ಸಿದ್ದು ವಿರುದ್ದ ಎಚ್ಡಿಕೆ ಕಿಡಿ

September 30, 2023
ನೆಲಮಂಗಲದಲ್ಲಿ 400 ಎಕರೆಯಲ್ಲಿ ₹1,770 ಕೋಟಿ ವೆಚ್ಚದ ರಾಷ್ಟ್ರೀಯ ಲಾಜಿಸ್ಟಿಕ್‌ ಪಾರ್ಕ್ ನಿರ್ಮಾಣ
ಪ್ರಮುಖ ಸುದ್ದಿ

ನೆಲಮಂಗಲದಲ್ಲಿ 400 ಎಕರೆಯಲ್ಲಿ ₹1,770 ಕೋಟಿ ವೆಚ್ಚದ ರಾಷ್ಟ್ರೀಯ ಲಾಜಿಸ್ಟಿಕ್‌ ಪಾರ್ಕ್ ನಿರ್ಮಾಣ

September 30, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.