ಟಿಪ್ಪು ಸುಲ್ತಾನ್(Tippu Sulthan) ಹುಲಿಯೂ ಅಲ್ಲ, ಕರಡಿಯೂ ಅಲ್ಲ, ಆತ ಒಬ್ಬ ಕ್ರೂರಿಯಾಗಿದ್ದನು. ಬಂಧಿಸಿದ ವ್ಯಕ್ತಿಗೆ ಚೂರಿ ಹಾಕುವುದು, ಚರ್ಮ ಸುಲಿಯುವುದು ಕ್ರೌರ್ಯ ಎನಿಸಿಕೊಳ್ಳುತ್ತದೆ ಎಂದು ಮೈಸೂರು-ಕೊಡಗು(Mysuru-Kodagu) ಸಂಸದ(MP) ಪ್ರತಾಪ್ ಸಿಂಹ(Prathap Simha) ಹೇಳಿದರು.
ಹಾಸನದಲ್ಲಿ(Hassan) ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ತನ್ನ ಪ್ರಾಣ ಉಳಿಸಿಕೊಳ್ಳಲು ತನ್ನ ಸ್ವಂತ ಮಕ್ಕಳನ್ನೇ ಬ್ರಿಟಿಷರಿಗೆ ಒತ್ತೆಯಾಳಾಗಿಟ್ಟಿದ್ದನು. ಇಂತಹ ವ್ಯಕ್ತಿಯನ್ನು ಮೈಸೂರಿನ ಹುಲಿ ಎಂದು ಕರೆಯಲು ಸಾಧ್ಯವೇ? ಎಂದು ಪ್ರಶ್ನಿಸಿದ ಅವರು, ನಮ್ಮ ನಾಡಿಗೆ ಮೈಸೂರು ಮಹಾರಾಜರು ಅಪಾರ ಕೊಡುಗೆ ನೀಡಿದ್ದಾರೆ. ಅವರನ್ನು ನಾವು ಹುಲಿ ಎನ್ನಬೇಕೆ ಹೊರತು, ಭಾಗಮಂಡಲ ದೇವಸ್ಥಾನದ ಮೇಲೆ ಕತ್ತಿ ಬೀಸಿದ ಕ್ರೂರಿಯನ್ನು ಹುಲಿ ಎನ್ನಲು ಸಾಧ್ಯವಿಲ್ಲ ಎಂದರು.
ಇನ್ನು ನಾವು ಇತಿಹಾಸವನ್ನು ಯಾವ ರೀತಿ ಗ್ರಹಿಸಬೇಕೆಂದು ಕಲಿಯಬೇಕಿದೆ. ವಸ್ತು ನಿಷ್ಠವಾಗಿ ನೋಡಬೇಕಾ? ಅಥವಾ ಗಿರೀಶ್ ಕಾರ್ನಾಡ ಬರೆದ ‘ಟಿಪ್ಪುವಿನ ಕನಸುಗಳು’ ಎಂಬ ಕಾಲ್ಪನಿಕ ನಾಟಕಗಳು ಮತ್ತು ಪುಸ್ತಕಗಳ ರೂಪದಲ್ಲಿ ನೋಡಬೇಕಾ? ಎಂದರು.
ಇನ್ನು ಟಿಪ್ಪು ಸಲ್ತಾನ್ ಮೈಸೂರು ಹುಲಿ ಎನ್ನುವುದಕ್ಕೆ ಒಂದೇ ಒಂದು ಕಾರಣ ಕೊಡಿ. ಆತನ ಮಾಡಿದ ಉತ್ತಮ ಕಾರ್ಯಗಳಾದ್ರು ಏನು. ಇನ್ನು ಸಿದ್ದರಾಮಯ್ಯನವರ ಬಾಯಲ್ಲಿ ಭಗತ್ ಸಿಂಗ್(Bhagat Singh) ಹೆಸರು ಕೇಳಿ ಸೋಜಿಗ ಆಯ್ತು.
ಕಳೆದ 70 ವರ್ಷಗಳಿಂದ ಭಗತ್ ಸಿಂಗ್ ಮೇಲೆ ಇಲ್ಲದ ಪ್ರೀತಿ ಇದೀಗ ದಿಢೀರನೇ ಬಂದಿದೆ. ಇಷ್ಟು ದಿನ ಗಾಂಧಿಜೀ ಮಾತ್ರ ಕಾಣುತ್ತಿದ್ದ ಕಾಂಗ್ರೆಸ್‍ನವರಿಗೆ ಇದೀಗ ಭಗತ್ ಸಿಂಗ್ ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.