ಪಠ್ಯಪುಸ್ತಕ ವಿವಾದದಲ್ಲಿ ಕೆಲವು ಸಾಹಿತಿಗಳು ಕಾಂಗ್ರೆಸ್ ಪಕ್ಷಕ್ಕೆ(Congress Party) ಬೆಂಬಲ ಮತ್ತು ಸಹಕಾರ ನೀಡುತ್ತಿದ್ದಾರೆ.

ಇದಕ್ಕೆಲ್ಲಾ ನಮ್ಮ ಸರ್ಕಾರ ತಲೆಕೆಡಿಸಿಕೊಳ್ಳುವುದಿಲ್ಲ. ಸಾಹಿತಿಗಳು ತಮ್ಮ ಪಠ್ಯವನ್ನು ವಾಪಸ್ ಪಡೆಯುತ್ತಿರುವ ಚಳುವಳಿ ಕಾಂಗ್ರೆಸ್ ಪಕ್ಷದ ಟೂಲ್‍ಕಿಟ್‍ನ ಭಾಗವಾಗಿದೆ ಎಂದು ಮೈಸೂರು-ಕೊಡಗು(Mysuru-Kodagu) ಸಂಸದ(MP) ಪ್ರತಾಪ್ ಸಿಂಹ(Prathap Simha) ಆರೋಪಿಸಿದ್ದಾರೆ. ಮೈಸೂರಿನಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಪಠ್ಯಪುಸ್ತಕದಲ್ಲಿನ ತಮ್ಮ ಪಠ್ಯವನ್ನು ಕೈಬಿಡುವಂತೆ ಸರ್ಕಾರಕ್ಕೆ ಪತ್ರ ಬರೆಯುತ್ತಿರುವರು ವಿಚಾರಹೀನರು. ತರ್ಕದಲ್ಲಿ ಗೆಲ್ಲಲಾಗದವರು, ತಕರಾರು ತೆಗೆಯುತ್ತಿದ್ದಾರೆ.
ಅನಗತ್ಯವಾಗಿ ವಿವಾದ ಮಾಡಿ, ಆ ಮೂಲಕ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ. ದೇವನೂರು ಮಹಾದೇವ(Devanur Mahadeva) ಸೇರಿದಂತೆ ಕೆಲ ಸಾಹಿತಿಗಳ ಪಠ್ಯ 10-12 ವರ್ಷಗಳಿಂದ ಇದೆ. ಹೀಗಾಗಿ ಕೆಲವರ ಪಠ್ಯವನ್ನು ಕೈಬಿಟ್ಟಿದ್ದೇವೆ. ಆದರೆ ಕಾಂಗ್ರೆಸ್‍ನಿಂದ ಉಪಕೃತರಾದ ಕೆಲ ಸಾಹಿತಿಗಳು ತಮ್ಮ ಪಠ್ಯವನ್ನು ಕೈಬಿಡಿ ಎಂದು ತಗಾದೆ ತೆಗೆದು ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇನ್ನು ಸರಜೂ ಕಾಟ್ಕರ್ ಅವರ ಪಠ್ಯವನ್ನು ಈಗಾಗಲೇ ಕೈಬಿಡಲಾಗಿದೆ. ಆದರು ಅವರು ಸರ್ಕಾರಕ್ಕೆ ಪತ್ರ ಬರೆದು ನನ್ನ ಪಠ್ಯವನ್ನು ಕೈಬಿಡಿ ಎಂದು ಒತ್ತಾಯಿಸಿದ್ದಾರೆ. ಹೀಗೆ ಪತ್ರ ಬರೆಯುವುದರಲ್ಲಿ ಅರ್ಥವಿದೆಯೇ?

ಇನ್ನು ಹಂಪನಾ ಅವರು ಕುವೆಂಪು(Kuvempu) ಪ್ರತಿಷ್ಠಾನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಅವರ ಹೆಂಡತಿ ಕಮಲಾ ಹಂಪನಾ ಅದೇ ಪ್ರತಿಷ್ಠಾನದಲ್ಲಿ ಸದಸ್ಯರಾಗಿ ಮುಂದುವರೆದಿದ್ದಾರೆ. ಅದರ ಅರ್ಥ ಮನೆಯಲ್ಲೇ ಒಮ್ಮತವಿಲ್ಲ ಎನ್ನುವುದಾಗಿದೆ. ಇನ್ನು ಈಗ ವಿವಾದ ಮಾಡುತ್ತಿರುವ ಹಂಪನಾ, ಬರಗೂರು ಆದಿಯಾಗಿ ಯಾವ ಸಾಹಿತಿಯೂ ಕಳೆದ 10 ವರ್ಷಗಳಲ್ಲಿ ಯಾವುದಾದರೂ ನೆನಪಿನಲ್ಲಿ ಇಟ್ಟುಕೊಳ್ಳುವಂತ ಕೃತಿಯನ್ನು ರಚಿಸಿದ್ದಾರೆಯೇ.? ಇಲ್ಲ. ಹೀಗಾಗಿ ಹೊಸ ಪಠ್ಯವನ್ನು ಸೇರಿಸಲಾಗಿದೆ ಎಂದು ಸಮರ್ಥಿಸಿಕೊಂಡರು.