Visit Channel

ಚುನಾವಣೆಗಳಲ್ಲಿ ಕಾಂಗ್ರೆಸ್‌ ಪರ ಪ್ರಚಾರ ಮಾಡಿದ್ದ ದೇವನೂರು, `ಕಾಂಗ್ರೆಸ್‌ ಕೈಪಿಡಿʼ ಬರೆದಿದ್ದಾರೆ : ಪ್ರತಾಪ್‌ ಸಿಂಹ

Devanur Mahadeva

ಮೈಸೂರು : ಈ ಹಿಂದೆ ದೇವನೂರು ಮಹಾದೇವ(Devanoor Mahadeva) ಅವರು ಬರೆದಿದ್ದ, `ಕುಸುಮಬಾಲೆʼ ಕೃತಿಯನ್ನು ಓದಿ ಮೆಚ್ಚಿಕೊಂಡಿದ್ದೆ.

ಆದರೆ ಅಂದಿನ ಸೃಜನಶೀಲ ಬರಹಗಾರ(Writer) ದೇವನೂರರಲ್ಲಿ ಈಗ ಉಳಿದಿಲ್ಲ. ಕಾಂಗ್ರೆಸ್‌ ಪಕ್ಷದ(Congress Party) ಆಳಾಗಿ ಬರೆಯುವವರಿಗೆ, “ಆರ್‌ಎಸ್‌ಎಸ್‌ ಆಳ-ಅಗಲ” ತಿಳಿಯುವುದಿಲ್ಲ. ಈ ಹಿಂದೆ ಅನೇಕ ಬಾರಿ ಕಾಂಗ್ರೆಸ್‌ ಪಕ್ಷದ ಪರ ಬಹಿರಂಗವಾಗಿ ಪ್ರಚಾರ ಮಾಡಿದ್ದಾರೆ.

Prathap simha slams devanur mahadeva  - author

ಹೀಗಾಗಿ ಈಗ ಅವರು ಬರೆದಿರುವ ಕೃತಿ “ಕಾಂಗ್ರೆಸ್‌ ಕೈಪಿಡಿ” ಎನ್ನಬಹುದು ಎಂದು ಮೈಸೂರು-ಕೊಡಗು(Mysuru-Kodagu) ಸಂಸದ(MP) ಪ್ರತಾಪ್‌ ಸಿಂಹ(Prathap simha slams devanur mahadeva) ವ್ಯಂಗ್ಯವಾಡಿದ್ದಾರೆ.

ಸಿದ್ದರಾಮಯ್ಯ(Siddaramaiah) ಮತ್ತು ಕಾಂಗ್ರೆಸ್ ಪಕ್ಷದ ಆಳಾಗಿ ದೇವನೂರು ಮಹಾದೇವ ಬರೆದಿರುವ ‘ಆರ್ಎಸ್ಎಸ್ ಆಳ-ಅಗಲ’ ಕೃತಿಯಲ್ಲ, ಅದೊಂದು ವಿಕೃತಿ. https://vijayatimes.com/us-dump-garbage-in-pakistan/

ರಾಹುಲ್ ಗಾಂಧಿ(Rahul Gandhi) ಭಾಷಣದಿಂದ ಪ್ರೇರಿತರಾಗಿ ರಾಹುಲ್‌ ಗಾಂಧಿ ಭಾಷಣದ ತುಣುಕುಗಳನ್ನು ಕಲೆಹಾಕಿ ಕೃತಿ ರಚಿಸಿದ್ದಾರೆ.

ಆರ್ಎಸ್ಎಸ್ ಕುರಿತು ಬರೆಯಲು ಹೋಗಿ ದೇವನೂರು ತಮ್ಮ ಘನತೆ ಕಳೆದುಕೊಂಡಿದ್ದಾರೆ. ‘ಕುಸುಮ ಬಾಲೆ’ಯ ನಂತರ ಒಂದಿಷ್ಟು ಸೃಜನಶೀಲತೆ ಉಳಿಸಿಕೊಂಡಿದ್ದಾರೆ ಎಂದುಕೊಂಡಿದ್ದೆ.

ಸದ್ಯ ಅವರಲ್ಲಿ ಯಾವ ಸೃಜನಶೀಲತೆಯೂ ಉಳಿದಿಲ್ಲ. ಹೀಗಾಗಿಯೇ ಇತ್ತೀಚೆಗೆ ಯಾವುದೇ ಮಹತ್ವದ ಕೃತಿಗಳನ್ನು ದೇವನೂರು ರಚಿಸಿಲ್ಲ ಎಂದು ಲೇವಡಿ ಮಾಡಿದರು. ಒಂದು ದೇಶವನ್ನು, ಒಂದು ಧರ್ಮ, ಒಬ್ಬ ನಾಯಕ, ಆರ್‌ಎಸ್‌ಎಸ್‌ ಪ್ರತಿಪ್ರಾದಿಸುತ್ತದೆ ಎಂದು ದೇವನೂರು ಬರೆದಿದ್ದಾರೆ. ಒಬ್ಬನೇ ದೇವರು ಎಂದು ಪ್ರತಿಪಾದಿಸಿ, ಜಗತ್ತಿಗೆ ಭಯೋತ್ಪಾದನೆ ಹರಡುತ್ತಿರುವವರು ಯಾರು ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. 
Prathap simha slams devanur mahadeva

ಒಬ್ಬನೇ ದೇವರು ಶ್ರೇಷ್ಠ ಎಂದು ನಂಬಿಸಿ, ಮತಾಂತರ ಮಾಡುತ್ತಿರುವವರು ಯಾರು ಎಂಬುದು ಎಲ್ಲರಿಗೂ ಗೊತ್ತಿಗೆ. ಇಸ್ಲಾಂ ಮತ್ತು ಕ್ರಿಶ್ಚಿಯನ್‌ ಧರ್ಮಗಳ ಬಗ್ಗೆ ಯಾಕೆ ದೇವನೂರು ಮಾತನಾಡುವುದಿಲ್ಲ? ವರ್ಣ ಪದ್ದತಿ ಕೇವಲ ಹಿಂದೂ ಧರ್ಮದಲ್ಲಿ ಮಾತ್ರವಿಲ್ಲ. ಇಸ್ಲಾಂ ಧರ್ಮದಲ್ಲೂ ಸುನ್ನಿ, ಷಿಯಾ, ಪಠಾಣ್ ಅನೇಕ ಜಾತಿಗಳಿವೆ.

https://vijayatimes.com/us-dump-garbage-in-pakistan/

ಕ್ರಿಶ್ಚಿಯನ್ ಧರ್ಮದಲ್ಲೂ ಕ್ಯಾಥೊಲಿಕ್ ಪ್ರಾಟಸ್ಟೆಂಟ್, ನೀಗ್ರೋ ಮುಂತಾದ ಪಂಥಗಳಿವೆ. ವಿರೋಧಿಸುವುದಾದರೆ ಎಲ್ಲಾ ಧರ್ಮಗಳನ್ನು ವಿರೋಧಿಸಿ ಎಂದು ಸವಾಲು ಹಾಕಿದರು.

Latest News

bsy
ರಾಜಕೀಯ

ಬಿಜೆಪಿಯ ಸಂಸದೀಯ ಮಂಡಳಿಗೆ ಯಡಿಯೂರಪ್ಪ ; ರಾಜಕೀಯವಾಗಿ ಮತ್ತಷ್ಟು ಬಲಗೊಂಡ ಬಿಎಸ್‌ವೈ

ಇನ್ನು ಸಂಸದೀಯ ಮಂಡಳಿಯಲ್ಲಿ ಉತ್ತರಪ್ರದೇಶ(UttarPradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌(Yogi Adityanath) ಅವರಿಗೆ ಸ್ಥಾನ ನೀಡಲಾಗುತ್ತದೆ ಎನ್ನಲಾಗಿತ್ತು. ಆದರೆ ಅವರಿಗೆ ಸ್ಥಾನ ಲಭಿಸಿಲ್ಲ.

bjp
ರಾಜಕೀಯ

ಡಿಕೆಶಿ ಸ್ವಾತಂತ್ರ್ಯದ ನಡಿಗೆಯ ಉದ್ದೇಶ, ಸಿದ್ದರಾಮಯ್ಯ ಕಿರುಕುಳದಿಂದ ಸ್ವಾತಂತ್ರ್ಯ ಪಡೆಯುವುದೋ? : ಬಿಜೆಪಿ

ಸಿದ್ದರಾಮಯ್ಯ(Siddaramaiah) ಕಿರುಕುಳದಿಂದ ಸ್ವಾತಂತ್ರ್ಯ ಪಡೆಯುವುದೋ ಅಥವಾ ಕಾಂಗ್ರೆಸ್(Congress) ಹಿರಿಯ ನಾಯಕರು ಡಿಕೆಶಿ(DKS) ಸುತ್ತ ಹೆಣೆದಿರುವ ಜಾಲದಿಂದ ಸ್ವಾತಂತ್ರ್ಯ ಪಡೆಯುವುದೋ?

Ghee
ಆರೋಗ್ಯ

ತುಪ್ಪದ ಬಗ್ಗೆ ತಪ್ಪು ಕಲ್ಪನೆ ಬೇಡ! ; ತಪ್ಪದೇ ತುಪ್ಪ ಸೇವಿಸಿ, ಈ ಆರು ಪ್ರಯೋಜನಗಳನ್ನು ಪಡೆದುಕೊಳ್ಳಿ

ತುಪ್ಪವು ರೋಗನಿರೋಧಕ ಶಕ್ತಿಯನ್ನು ವೃದ್ದಿಸುತ್ತದೆ, ಮೂಳೆಯ ಆರೋಗ್ಯವನ್ನು ಉತ್ತೇಜಿಸುತ್ತದೆ, ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ.

Assam
ದೇಶ-ವಿದೇಶ

500 ರೂ. ಬೆಟ್ಟಿಂಗ್ ಸೋಲಿಗೆ ಸ್ನೇಹಿತನ ಶಿರಚ್ಛೇದ ; 25 ಕಿ.ಮೀ ದೂರದ ಪೊಲೀಸ್ ಠಾಣೆಗೆ ಹೋಗಿ ಶರಣು!

ಆತನ ತಲೆಯನ್ನು ಹಿಡಿದುಕೊಂಡು ರಾತ್ರಿಯ ವೇಳೆ 25 ಕಿ.ಮೀ ದೂರವಿರುವ ಪೊಲೀಸ್ ಠಾಣೆಗೆ(Police Station) ನಡೆದು ಶರಣಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.