ಮೈಸೂರು : ಸಿದ್ದರಾಮಯ್ಯನವರೇ, ಹಂದಿ ಮಾಂಸ ತಿನ್ನಬಾರದು ಅಂತಾ ದೇವರು ಹೇಳಿಲ್ಲ ಎಂದು ಜಮೀರ್ ಖಾನ್ಗೆ(Zameer Khan) ಹೇಳಿ ನೋಡೋಣಾ ಎಂದು ಮೈಸೂರು-ಕೊಡಗು(Mysuru-Kodagu) ಸಂಸದ(MP) ಪ್ರತಾಪ್ ಸಿಂಹ(Prathap Simha) ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಅವರಿಗೆ ಸವಾಲು ಹಾಕಿದ್ದಾರೆ.
ಮೈಸೂರಿನಲ್ಲಿ(Mysuru) ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಜಮೀರ್ ಖಾನ್ಗೆ ನೀವು ಹಂದಿ ಮಾಂಸ ತಿನ್ನಬಾರದು ಅಂತಾ ದೇವರು ಹೇಳಿಲ್ಲ ಅಂತಾ ಹೇಳಿ ನೋಡಾಣಾ? ಈ ರೀತಿಯ ಬೋಧನೆಗಳನ್ನು ಒಂದು ಧರ್ಮದವರಿಗೆ ಮಾತ್ರ ಯಾಕೆ ನೀಡುತ್ತೀರಿ. ಎಲ್ಲರಿಗೂ ಅದನ್ನು ಹೇಳುವ ಧೈರ್ಯ ನಿಮಗಿಲ್ಲವೇ?
ಆದರೆ ಈ ಹಿಂದೆ ಮಾಂಸ ತಿಂದು ಬಸವೇಶ್ವರ ದೇವಸ್ಥಾನಕ್ಕೆ ಹೋಗಿ ಲಿಂಗಾಯಿತರ ಮತ್ತು ಬಸವ ಅನುಯಾಯಿಗಳ ನಂಬಿಕೆಗಳನ್ನು ಘಾಸಿಗೊಳಿಸಿದ್ದೀರಿ ಎಂದು ಆರೋಪಿಸಿದ್ದಾರೆ. ಇನ್ನು ಸಿದ್ದರಾಮಯ್ಯನವರ 40 ವರ್ಷಗಳ ರಾಜಕೀಯ ಜೀವನದಲ್ಲಿ ಅವರು 27 ವರ್ಷ ಕಾಂಗ್ರೆಸ್ ಪಕ್ಷವನ್ನು(Congress Party) ಬೈಯುತ್ತಲೇ ರಾಜಕೀಯ ಮಾಡಿದ್ದಾರೆ.
ಆದರೆ ಈಗ 15 ವರ್ಷದಿಂದ ಸೋನಿಯಾ ಗಾಂಧಿಯನ್ನು(Sonia Gandhi) ಮತ್ತು ಕಾಂಗ್ರೆಸ್ ಪಕ್ಷವನ್ನು ಹೊಗಳುತ್ತಿದ್ದಾರೆ. ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ಸಂಪತ್ ಯಾವ ಪಕ್ಷದವನೂ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಮಾಜಿ ಪ್ರಧಾನಿಗಳಾದ ದೇವೇಗೌಡರ ಜೊತೆ ಸಿದ್ದರಾಮಯ್ಯ ಇರುವ ಸಾವಿರಾರು ಫೋಟೋ ಇವೆ.
ಹಳೆ ಫೋಟೋ ತೋರಿಸಿ ನೀವು ದೇವೇಗೌಡರ ಜೊತೆಗಾರರು ಎಂದು ಈಗ ಹೇಳೋಕೆ ಆಗುತ್ತಾ? ಎಂದು ತಿರುಗೇಟು ನೀಡಿದರು. ನಾರಿನಂತೆ ಸೀರೆ ಎಂಬಂತೆ ಯತೀಂದ್ರ ಸಿದ್ದರಾಮಯ್ಯ ಕೂಡಾ ಅಷ್ಟೇ. ಮೊಟ್ಟೆ ಎಸೆದ್ರೆ ಯತೀಂದ್ರ ಅವರಿಗೆ ತುಂಬಾ ಕೋಪ ಬಂದಿದೆ. ಆದರೆ 27 ವರ್ಷ ಜೈಲಲ್ಲಿ ಇದ್ದ ದೇಶಪ್ರೇಮಿ ಸಾವರ್ಕರ್ ಬಗ್ಗೆ ಕೀಳಾಗಿ ಹೇಳಿಕೆ ನೀಡಿದ್ರೆ ನಮಗೆ ಕೋಪ ಬರಲ್ವಾ? ಎಂದು ಪ್ರಶ್ನಿಸಿದರು.